ಮುಂಬೈ: ವಾರದ ಆರಂಭದಲ್ಲೇ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 20 ಪೈಸೆಯಷ್ಟು ಏರಿಕೆ ಕಾಣುವ ಮೂಲಕ ಭಾರತೀಯ ಮಾರುಕಟ್ಟೆ ಚೇತೋಹಾರಿ ಪ್ರದರ್ಶನ ತೋರಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಗೆ ಬೇಡಿಕೆ ಕುಸಿದ ಪರಿಣಾಮ ಅಮೆರಿಕ ಮಾರುಕಟ್ಟೆ ನೀರಸ ವಹಿವಾಟು ನಡೆಸಿದೆ. ಪರಿಣಾಮ ಭಾರತೀಯ ರೂಪಾಯಿಗೆ ಬೇಡಿಕೆ ಕಂಡುಬಂದಿದ್ದು, ಪರಿಣಾಮ ಭಾರತೀಯ ರೂಪಾಯಿ ಮೌಲ್ಯದಲ್ಲಿ 20 ಪೈಸೆಯಷ್ಟು ಏರಿಕೆ ಕಂಡುಬಂದಿದೆ. ಆ ಮೂಲಕ ಪ್ರತೀ ಡಾಲರ್ ಗೆ ರೂಪಾಯಿ ಮೌಲ್ಯ 69.75 ರೂಗಳಿಗೆ ಏರಿಕೆಯಾಗಿದೆ.
ಅಮೆರಿಕ ಸರ್ಕಾರದ ಕಠಿಣ ಆರ್ಥಿಕ ನೀತಿ ಮತ್ತು ಅಮೆರಿಕ ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟು ಇಂದಿನ ರೂಪಾಯಿ ಮೌಲ್ಯದ ಏರಿಕೆಗೆ ಕಾರಣ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರಾಂತ್ಯದ ವಹಿವಾಟಿನಲ್ಲೂ ರೂಪಾಯಿ ಮೌಲ್ಯದಲ್ಲಿ 5 ಪೈಸೆಯಷ್ಟು ಏರಿಕೆಯಾಗಿತ್ತು.