ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ದಶಕದ ದಾಖಲೆ ಕುಸಿತದ ಬಳಿಕ ಮತ್ತೆ ಚೇತರಿಸಿಕೊಂಡ ಅಮೆರಿಕ ಷೇರುಪೇಟೆ!

ಮಂಗಳವಾರ ದಾಖಲೆ ಪ್ರಮಾಣದಲ್ಲಿ ಕುಸಿದಿದ್ದ ಅಮೆರಿಕ ಷೇರುಪೇಟೆ ಬುಧವಾರ ಚೇತರಿಕೆ ಕಂಡಿದ್ದು, ಆರಂಭಿಕ ವಹಿವಾಟಿನಲ್ಲೇ 567.02 ಅಂಕಗಳಿಗೆ ಏರಿಕೆ ಕಂಡಿದೆ.

ಚೇತರಿಸಿಕೊಂಡ ಅಮೆರಿಕ ಷೇರುಪೇಟೆ (ಸಂಗ್ರಹ ಚಿತ್ರ)
Srinivasa Murthy VN
Updated On : 7 Feb 2018, 9:59 am
ವಾಷಿಂಗ್ಟನ್: ಮಂಗಳವಾರ ದಾಖಲೆ ಪ್ರಮಾಣದಲ್ಲಿ ಕುಸಿದಿದ್ದ ಅಮೆರಿಕ ಷೇರುಪೇಟೆ ಬುಧವಾರ ಚೇತರಿಕೆ ಕಂಡಿದ್ದು, ಆರಂಭಿಕ ವಹಿವಾಟಿನಲ್ಲೇ 567.02 ಅಂಕಗಳಿಗೆ ಏರಿಕೆ ಕಂಡಿದೆ.
ಮಂಗಳವಾರ ಬರೊಬ್ಬರಿ ಒಂದು ಸಾವಿರ ಅಂಕಗಳ ಕುಸಿತದ ಮೂಲಕ 24,912.77 ಅಂಕಗಳಿಗೆ ಕುಸಿದಿದ್ದ ಅಮೆರಿಕ ಷೇರುಪೇಟೆ, 567 ಅಂಕಗಳ ಏರಿಕೆ ಕಂಡಿದೆ. ಅಂತೆಯೇ ಎಸ್ ಅಂಡ್ ಪಿ 500 ಕೂಡ 46.2 ಅಂಕಗಳ ಏರಿಕೆ  ಕಾಣುವ ಮೂಲಕ 2,695.14 ಅಂಕಗಳಿಗೆ ಏರಿಕೆಯಾಗಿದೆ. ಅಂತೆಯೇ ನಸ್ಜಾಕ್ ಕಂಪೋಸಿಟ್ 148.36 ಅಂಕಗಳ ಏರಿಕೆಯೊಂದಿಗೆ 7,115.88 ಅಂಕಗಳಿಗೆ ಏರಿಕೆಯಾಗಿದೆ.
ಇನ್ನು ಜಪಾನ್ ಷೇರುಪೇಟೆ ಕೂಡ ಚೇತರಿಕೆ ಕಂಡಿದ್ದು, ಜಪಾನ್ ನಿಕ್ಕೀ ಶೇ.2.9ರಷ್ಟು ಏರಿಕೆ ಕಂಡಿದೆ. ಅಂತೆಯೇ ಹಾಂಗ್ ಕಾಂಗ್ ಸೆಂಗ್ ಸೂಚ್ಯಂಕ ಶೇ.5.68ಕಷ್ಟು ಏರಿಕೆ ಕಂಡಿದ್ದು, ದಕ್ಷಿಣ ಕೊರಿಯಾದ ಕೊಸ್ಪಿ 0.17ರಷ್ಟು ಚೇತರಿಕೆ  ಕಂಡಿದೆ. ಅತ್ತ ಆಸ್ಟ್ರೇಲಿಯಾ. ಇಂಗ್ಲೆಂಡ್ ಮಾರುಕಟ್ಟೆಗಳೂ ಕೂಡ ಚೇತರಿಕೆಯತ್ತ ಮುಖ ಮಾಡಿವೆ ಎಂದು ತಿಳಿದುಬಂದಿದೆ.

Advertisement

Advertisement

ಮಂಗಳವಾರ ಒಂದೇ ದಿನ ವಾಲ್ ಸ್ಟ್ರೀಟ್ ನ ಡೋ ಬರೊಬ್ಬರಿ 11100 ಅಂಕಗಳ ಕುಸಿತ ಕಂಡಿತ್ತು. ಪರಿಣಾಮ ಅಮೆರಿಕದ ಇಂಟ್ರಾಡೇ ವಹಿವಾಟಿನಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿತ್ತು. ಇದರ ಪರಿಣಾಮ ಏಷ್ಯನ್ ಮಾರುಕಟ್ಟೆ  ಮೇಲೂ ಕೂಡಿ ಭಾರತೀಯ ಷೇರುಪೇಟೆ ಸಾವಿರಕ್ಕೂ ಹೆಚ್ಚು ಅಂಕಗಳ ಕುಸಿತ ಕಂಡು ಸುಮಾರು 4 ಲಕ್ಷ ಕೋಟಿ ರು. ನಷ್ಟ ಅನುಭವಿಸಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement