ಸಂಗ್ರಹ ಚಿತ್ರ 
ವಾಣಿಜ್ಯ

ಮತ್ತೆ ಸೆನ್ಸೆಕ್ಸ್ 550 ಅಂಕಗಳ ಕುಸಿತ, ಸಣ್ಣ, ಮಧ್ಯಮ ಗಾತ್ರದ ಹೂಡಿಕೆದಾರರಿಗೆ ಭಾರಿ ಹೊಡೆತ

2018-19ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಬಳಿಕ ನಿರಂತರವಾಗಿ ಇಳಿಕೆಯತ್ತ ಸಾಗಿರುವ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಕೂಡ 550 ಅಂಕಗಳ ಕುಸಿತ ಕಾಣುವ ಮೂಲಕ 33, 900 ಅಂಕಗಳಿಗೆ ಕುಸಿತ ಕಂಡಿದೆ.

ಮುಂಬೈ: 2018-19ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಬಳಿಕ ನಿರಂತರವಾಗಿ ಇಳಿಕೆಯತ್ತ ಸಾಗಿರುವ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಕೂಡ 550 ಅಂಕಗಳ ಕುಸಿತ ಕಾಣುವ ಮೂಲಕ 33, 900 ಅಂಕಗಳಿಗೆ ಕುಸಿತ ಕಂಡಿದೆ.
ಶುಕ್ರವಾರ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 550 ಅಂಕಗಳ ಕಳೆದುಕೊಂಡು 33,941.72 ಅಂಕಗಳಿಗೆ ಇಳಿಕೆಯಾಗಿದೆ. ಇನ್ನು ನಿಫ್ಟಿ ಕೂಡ 145 ಅಂಕಗಳ ಕುಸಿತ ಕಾಣುವ ಮೂಲಕ 10,429.75 ಅಂಕಗಳಿಗೆ ಕುಸಿತ  ಕಂಡಿದೆ. ಇಂದಿನ ವಹಿವಾಟಿನಲ್ಲಿ ಪ್ರಮುಖವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಷೇರು ಹೂಡಿಕೆದಾರರಿಗೆ ಭಾರೆ ಹೊಡೆತ ಬಿದ್ದಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.1.33ರಷ್ಟು ನಷ್ಟ ಅನುಭವಿಸಿದೆ.
ಇಂದಿನ ಕುಸಿತಕ್ಕೆ ದುರ್ಬಲ ಏಷ್ಯನ್ ಮಾರುಕಟ್ಟೆಗಳ ವಹಿವಾಟು ಮತ್ತು ಅಮೆರಿಕೆ ಷೇರುಪೇಟೆಯಲ್ಲಿನ ಕುಸಿತ ಕಾರಣ ಎಂದು ಹೇಳಲಾಗುತ್ತಿದ್ದು, ಇದಲ್ಲದೆ ಬಜೆಟ್ ಘೋಷಣೆ ಬಳಿಕ ಭಾರತೀಯ ಹೂಡಿಕೆದಾರರಲ್ಲಿ ಉತ್ಸಾಹ  ಕಾಣುತ್ತಿಲ್ಲ. ಹೀಗಾಗಿ ಬಂಡವಾಳ ಹೂಡಿಕೆಯ ಹರಿವು ಕೂಡ ನಿಧಾನಗತಿಯಾಗಿದ್ದು, ಇದೇ ಕಾರಣಕ್ಕೆ ಭಾರತೀಯ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೇವಲ ಭಾರತ  ಮಾತ್ರವಲ್ಲದೇ ಸಿಂಗಾಪುರ, ಚೀನಾ ಮತ್ತು ಜಪಾನ್ ಮಾರುಕಟ್ಟೆಗಳು ಕೂಡ ನಷ್ಟ ಅನುಭವಿಸಿದೆ ಎನ್ನಲಾಗಿದೆ.
ಇನ್ನು ಅಮೆರಿಕದ ವಾಲ್ ಸ್ಟ್ರೀಟ್ ನಿನ್ನೆ ಒಂದೇ ದಿನ ಬರೊಬ್ಬರಿ ಶೇ.4 ರಷ್ಟು ನಷ್ಟ ಅನುಭವಿಸಿರುವು ಭಾರತೀಯ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!