ಸಾಂದರ್ಭಿಕ ಚಿತ್ರ 
ವಾಣಿಜ್ಯ

ಅಬು ಧಾಬಿ ತೈಲ ನಿಕ್ಷೇಪಗಳಲ್ಲಿ ಭಾರತದ ಮೊದಲ ಪಾಲುದಾರಿಕೆ: 600 ದಶಲಕ್ಷ ಅಮೆರಿಕನ್ ಡಾಲರ್ ಹೂಡಿಕೆ

ಇಲ್ಲಿನ ಬೃಹತ್ ಪ್ರಮಾಣದ ತೈಲ ನಿಕ್ಷೇಪದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ತೈಲ ...

ಅಬುಧಾಬಿ: ಇಲ್ಲಿನ ಬೃಹತ್ ಪ್ರಮಾಣದ ತೈಲ ನಿಕ್ಷೇಪದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ತೈಲ ಒಕ್ಕೂಟವು ಪಾಲನ್ನು ಪಡೆಯುತ್ತಿದೆ. ಇದು ಪ್ರಧಾನಿಯವರ ಮೊನ್ನೆಯ ಅರಬ್ ರಾಷ್ಟ್ರದ ಭೇಟಿಯ ಫಲವಾಗಿದೆ ಎಂದು ಬಣ್ಣಿಸಲಾಗಿದೆ.

ಭಾರತ ಮೂಲದ ತೈಲ ನಿಕ್ಷೇಪ ಘಟಕ ಒಎನ್ ಜಿಸಿ ವಿದೇಶ್, ಭಾರತ್ ಪೆಟ್ರೊರಿಸೊರ್ಸಸ್, ಇಂಡಿಯನ್ ಆಯಿಲ್ ಮತ್ತು ಅಬುಧಾಬಿ ರಾಷ್ಟ್ರೀಯ ತೈಲ ಕಂಪೆನಿಗಳ ನಡುವೆ ಮೊನ್ನೆ ಶನಿವಾರ ನಿಲುವಳಿ ಒಪ್ಪಂದವೊಂದಕ್ಕೆ ಸಹಿ  ಹಾಕಲಾಗಿದ್ದು ರಿಯಾಯಿತಿ ದರದಲ್ಲಿ ಅಬುಧಾಬಿಯ ಜಾಕಮ್  ತೈಲ ಘಟಕದಿಂದ ತೈಲ ಪಡೆದುಕೊಳ್ಳಲು ಶೇಕಡಾ 10ರಷ್ಟು ಪಾಲುದಾರಿಕೆಯನ್ನು ಭಾರತೀಯ ಕಂಪೆನಿಗಳು 600 ದಶಲಕ್ಷ ಅಮೆರಿಕನ್ ಡಾಲರ್ ಹೂಡಿಕೆ ಮಾಡಿ ಪಡೆಯಲಿವೆ.

ಯುನೈಟೆಡ್ ಅರಬ್ ಎಮಿರೇಟ್ಸ್ ನ ಒಂದು ಘಟಕವಾಗಿರುವ ಅಬುಧಾಬಿ ಗಲ್ಫ್ ಸಹಕಾರ ಮಂಡಳಿಯ ಸದಸ್ಯವಾಗಿದೆ. ಭಾರತಕ್ಕೆ ಅತಿ ಹೆಚ್ಚು ಕಚ್ಚಾತೈಲ ಪೂರೈಕೆ ರಾಷ್ಟ್ರ ಯುಎಇ ಆಗಿದ್ದು 10ನೇ ಅತಿದೊಡ್ಡ ಹೂಡಿಕೆ ದೇಶವಾಗಿದೆ.

ಭಾರತದ ಇಂಧನ ಭದ್ರತೆ ವಿಚಾರದಲ್ಲಿ ಈ ನಿಲುವಳಿ ಒಪ್ಪಂದ ಪ್ರಮುಖ ಮೈಲುಗಲ್ಲು ಆಗಿದೆ. ಭಾರತದ ಒಎನ್ ಜಿಸಿ ವಿದೇಶ್ ತೈಲ ಒಕ್ಕೂಟ ಅರಬ್ ಎಮಿರೇಟ್ಸ್ ದಿರ್ಹಮ್ ಜೊತೆ ಸಹಭಾಗಿತ್ವಕ್ಕಾಗಿ ಪಾಲುದಾರಿಕೆ ಶುಲ್ಕವಾಗಿ 2.2 ಶತಕೋಟಿ ಡಾಲರ್ ಮೊತ್ತವನ್ನು ನೀಡಲಿದೆ. ರಿಯಾಯಿತಿಯನ್ನು ಆಡ್ ನಾಕ್ ಕಡಲಾಚೆಯ ತೈಲ ಘಟಕ ನಿರ್ವಹಿಸಲಿದೆ. 40 ವರ್ಷಗಳವರೆಗೆ ಈ  ಒಪ್ಪಂದವಿರಲಿದ್ದು ಈ ವರ್ಷ ಮಾರ್ಚ್ 9ರಿಂದ ಅನ್ವಯವಾಗಲಿದೆ. ಒಎನ್ ಜಿಸಿ ಅಧ್ಯಕ್ಷ ಶಶಿ ಶಂಕರ್ ಮತ್ತು  ಅಡ್ನಾಕ್ ಗ್ರೂಪ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲ್ತಾನ್ ಅಹ್ಮದ್ ಅಲ್ ಜಬೆರ್ ಅವರ ಸಮ್ಮುಖದಲ್ಲಿ ಕಳೆದ ಶನಿವಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಪ್ರಸ್ತುತ ಲೋವರ್ ಝಕಮ್ ತೈಲ ನಿಕ್ಷೇಪದಿಂದ 4,00,000 ಬ್ಯಾರಲ್ ಗಳನ್ನು ಪ್ರತಿದಿನ ತಗೆಯಲಾಗುತ್ತಿದ್ದು 2025ರ ವೇಳೆಗೆ ಅದನ್ನು ಪ್ರತಿದಿನಕ್ಕೆ  4,50,000 ಬ್ಯಾರೆಲ್ ಗೆ ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದೆ.

ಅಡ್ನಾಕ್ ಕಡಲಾಚೆಯ ತೈಲ ನಿಕ್ಷೇಪ ಘಟಕ ಪ್ರಸ್ತುತ ಪ್ರತಿದಿನ 1.4 ದಶಲಕ್ಷ ಬ್ಯಾರೆಲ್ ತೈಲ ಉತ್ಪತ್ತಿ ಮಾಡುತ್ತಿದೆ ಎಂದು ಅಡ್ನಾಕ್ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಯೋತ್ಪಾದಕ ದಾಳಿ ವಿಫಲಗೊಳಿಸಿದ ಭಾರತೀಯ ಪೈಲಟ್‌ಗೆ Israel ಅತ್ಯುನ್ನತ ಗೌರವ: ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ, ಕ್ಯಾಪ್ಟನ್ ಸ್ಮಿತ್‌ಗೆ ಆಹ್ವಾನ..!

5 IAS ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ; ಯಾರಿಗೆಲ್ಲಾ ಬದಲಾವಣೆ

ಆಧಾರ ರಹಿತ ಆರೋಪ ಸರಿಯಲ್ಲ, ‘ದಾಖಲೆ ತೋರಿಸಿ, ಜಮೀನನ್ನೇ ನಿಮ್ಮ ಕುಟುಂಬಕ್ಕೆ ಕೊಡ್ತೀನಿ; HDK NICE ಆರೋಪಕ್ಕೆ ಸಚಿವ ಬಾಲಕೃಷ್ಣ ತಿರುಗೇಟು

SIR ಅಕ್ರಮಗಳ ಕುರಿತು ರಾಜ್ಯದಿಂದ ಪ್ರತ್ಯೇಕ ತನಿಖೆ ಇಲ್ಲ: CM ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಿಗೆ ಭಾರತದ ಸಮನ್ಸ್; ಗಡಿಯಾಚೆಗಿನ ಒಳನುಸುಳುವಿಕೆಯ ವಿರುದ್ಧ ಪ್ರತಿಭಟನೆ