ವಾಣಿಜ್ಯ

2016ಕ್ಕೆ ಹೋಲಿಸಿದರೆ ಮನೆ ಮಾರಾಟ ವಲಯದಲ್ಲಿ ಶೇ.41ರಷ್ಟು ಇಳಿಕೆ: ವರದಿ

Sumana Upadhyaya
ಹೈದರಾಬಾದ್: ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 2016 ಮತ್ತು ಸರಕು ಮತ್ತು ಸೇವಾ ತೆರಿಗೆಯಂತಹ ಕ್ರಮಗಳ ಜಾರಿಯಿಂದ ರಿಯಲ್ ಎಸ್ಟೇಟ್ ಮಾರುಕಟ್ಟೆ ಇನ್ನೂ ಚೇತರಿಸಿಕೊಳ್ಳಬೇಕಾಗಿರುವ ಹೊತ್ತಿನಲ್ಲಿ ವಸತಿ ವಲಯದಲ್ಲಿನ ಅನೇಕ ಯೋಜನೆಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 41ರಷ್ಟು ಕಡಿಮೆಯಾಗಿದೆ ಎಂದು ನೈಟ್ ಫ್ರಾಂಕ್ ಇಂಡಿಯಾ ವರದಿ ತಿಳಿಸಿದೆ.
ಕಳೆದ ಬುಧವಾರ ಬಿಡುಗಡೆಯಾಗಿರುವ ವರದಿಯಂತೆ 2015ರಲ್ಲಿನ ವಸತಿ ವಲಯದಲ್ಲಿನ ಪೂರೈಕೆಗಳಿಗೆ ಹೋಲಿಸಿದರೆ ಅದರ ಕಾಲು ಭಾಗ ಈ ವರ್ಷ ಇದೆ ಎಂದು ತಿಳಿದುಬಂದಿದೆ.
ದೇಶದ 8 ನಗರಗಳಲ್ಲಿ ಕಳೆದ ಜುಲೈಯಿಂದ ಡಿಸೆಂಬರ್ ವರೆಗೆ ವಸತಿ ನಿಲಯಗಳು ಮತ್ತು ಕಚೇರಿ ಸ್ಥಳಗಳ ಪೂರೈಕೆಯ ಸಮೀಕ್ಷೆ ವರದಿಯನ್ನು ಪರಿಶೀಲಿಸಲಾಗಿದೆ.
ಮುಂಬೈ, ದೆಹಲಿ-ಎನ್ ಸಿಆರ್ ಪ್ರದೇಶ, ಬೆಂಗಳೂರು, ಪುಣೆ, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ ಮತ್ತು ಅಹಮದಾಬಾದ್ ಗಳಲ್ಲಿ ಮನೆ ಮತ್ತು ಕಚೇರಿ ಕಟ್ಟಡಗಳು 2016ರಲ್ಲಿ 68,702 ಮಾರಾಟವಾಗಿದ್ದರೆ 2017ರಲ್ಲಿ 40,832 ಆಗಿತ್ತು. ದೆಹಲಿ-ಎನ್ ಸಿಆರ್ ಪ್ರದೇಶಗಳಲ್ಲಿ ಮನೆಗಳ ಮಾರಾಟ ಶೇಕಡಾ 6ರಷ್ಟು ಕಡಿಮೆಯಾಗಿದೆ. 2010ರಲ್ಲಿ 37,653 ರಷ್ಟು ಮನೆ ಮತ್ತು ವಾಣಿಜ್ಯ ಕಟ್ಟಡಗಳು ಮಾರಾಟವಾಗಿದ್ದರೆ, ಆ ನಂತರ ಇಷ್ಟೊಂದು ಪ್ರಮಾಣದಲ್ಲಿ ಇಳಿಕೆಯಾಗಿದ್ದು ಇದೇ ಮೊದಲ ಬಾರಿಗೆ. 2017ರ ಉತ್ತರಾರ್ಧದಲ್ಲಿ ಹೈದರಾಬಾದ್ ನಲ್ಲಿ ಅತ್ಯಂತ ಕಡಿಮೆ ಶೇಕಡಾ 84ರಷ್ಟು ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಆದರೆ ಉತ್ತರಾರ್ಧದಲ್ಲಿ ಹೈದರಾಬಾದ್ ನಲ್ಲಿ ವಾಣಿಜ್ಯ ಕಟ್ಟಡಗಳ ಲೀಸ್ ನಲ್ಲಿ ಏರಿಕೆಯಾಗಿದೆ.
ವಾಣಿಜ್ಯ ಕಟ್ಟಡಗಳಿಗೆ ಹೋಲಿಸಿದರೆ ವಸತಿ ಕಟ್ಟಡಗಳ ಮಾರಾಟದಲ್ಲಿ 5 ಪಟ್ಟು ಕಳೆದ ವರ್ಷ ಏರಿಕೆ ಕಂಡುಬಂದಿತ್ತು. ರಿಯಲ್ ಎಸ್ಟೇಟ್ ಡೆವೆಲಪರ್ ಗಳಲ್ಲಿ ಅಗ್ಗದ ಮನೆಗಳ ಮಾರಾಟ ಶೇಕಡಾ 53ರಿಂದ ಶೇಕಡಾ 83ಕ್ಕೆ ಏರಿಕೆಯಾಗಿದೆ.
SCROLL FOR NEXT