ವಾಣಿಜ್ಯ

ಆಧಾರ್ ಆಧಾರಿತ ಸಿಮ್ ಪರಿಶೀಲನೆಗೆ ಮಾ.31ರ ವರೆಗೆ ಏರ್ಟೆಲ್ ಗೆ ಯುಐಡಿಎಐ ಅನುಮತಿ

Lingaraj Badiger
ನವದೆಹಲಿ: ಆಧಾರ್ ಆಧಾರಿತ ಬಯೋಮೆಟ್ರಿಕ್ ಬಳಸಿ ಸಿಮ್ ಮರು ಪರಿಶೀಲನೆಗೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಭಾರತಿ ಏರ್ಟೆಲ್ ಗೆ ಮಾರ್ಚ್ 31ರ ವರೆಗೆ ತಾತ್ಕಾಲಿಕ ಅನುಮತಿ ನೀಡಿದೆ.
ಕಳೆದ ತಿಂಗಳು ಭಾರತಿ ಏರ್ಟೆಲ್ ಮತ್ತು ಪೇಮೆಂಟ್ಸ್ ಬ್ಯಾಂಕ್ ನ ಆಧಾರ್ ಆಧಾರಿತ ಸಿಮಿ ಪರಿಶೀಲನೆ ಪರವಾನಗಿಯನ್ನು ಯುಐಡಿಎಐ ಅಮಾನತುಗೊಳಿಸಿತ್ತು. ಗ್ರಾಹಕರ 138 ಕೋಟಿ ರುಪಾಯಿ ಎಲ್ ಪಿಜಿ ಸಬ್ಸಿಡಿಯನ್ನು ಮರಳಿಸಿದ ನಂತರ ಅಮಾನತು ಹಿಂಪಡೆದಿದ್ದ ಯುಐಡಿಎಐ ಜನವರಿ 10ರ ವರೆಗೆ ಸಿಮ್ ಪರಿಶೀಲನೆಗೆ ಅವಕಾಶ ನೀಡಿತ್ತು. ಇದೀಗ ಅದನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದೆ. ಆದರೆ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ನ ಇಕೆವೈಸಿ ಲೈಸೆನ್ಸ್ ಅಮಾನತು ಮುಂದುವರೆಸಿದೆ.
ತನ್ನ ಗ್ರಾಹಕರಿಗೆ ಮಾಹಿತಿ ನೀಡದೆ ಭಾರತಿ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಖಾತೆಗಳನ್ನು ಆರಂಭಿಸುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಇಕೆವೈಸಿ ಹಾಗೂ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರ ಕೆವೈಸಿ ಪ್ರಕ್ರಿಯೆಯನ್ನು ಸ್ಥಗತಿಗೊಳಿಸುವಂತೆ ಸೂಚಿಸಿತ್ತು.
ಆಧಾರ್ ಆಧಾರಿತ ಇಕೆವೈಸಿ ಬಳಸಲು ಮಾರ್ಚ್ 31ರ ವರೆಗೆ ಯುಐಡಿಎಐ ಅನುಮತಿ ನೀಡಿದೆ ಎಂದು ಏರ್ಟೆಲ್ ವಕ್ತಾರರು ತಿಳಿಸಿದ್ದಾರೆ.
SCROLL FOR NEXT