ವಾಣಿಜ್ಯ

ಭಾರತದಲ್ಲಿ ಮುಂದಿನ ನಾಲ್ಕೈದು ವರ್ಷಗಳಲ್ಲಿ 50 ಹೊಸ ವಾಲ್‌ಮಾರ್ಟ್ ಶಾಪ್‌ಗಳ ಸ್ಥಾಪನೆ!

Vishwanath S
ನವದೆಹಲಿ: ಭಾರತದ ದೈತ್ಯ ಆನ್ ಲೈನ್ ಮಾರಾಟ ತಾಣ ಫ್ಲೀಪ್ ಕಾರ್ಟ್ ನಲ್ಲಿನ ಶೇಖಡ 77ರಷ್ಟು ಪಾಲು ಬಂಡವಾಳವನ್ನು 1.07 ಲಕ್ಷ ಕೋಟಿ ರುಪಾಯಿಗೆ ಖರೀದಿಸಿರುವ ಅಮೆರಿಕದ ರಿಟೇಲ್ ದೈತ್ಯ ಸಂಸ್ಥೆ ವಾಲ್‌ಮಾರ್ಟ್ ಇಂಕ್ ಮುಂದಿನ ನಾಲ್ಕೈದು ವರ್ಷದಲ್ಲಿ 50 ಹೊಸ ವಾಲ್‌ಮಾರ್ಟ್ ಶಾಪ್‌ಗಳ ಸ್ಥಾಪನೆಗೆ ಮುಂದಾಗಿದೆ. 
ಸದ್ಯ ಭಾರತದಲ್ಲಿ 21 ವಾಲ್‌ಮಾರ್ಟ್ ಶಾಪ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ನಾಲ್ಕೈದು ವರ್ಷಗಳಲ್ಲಿ 50 ಶಾಪ್ ಗಳನ್ನು ತೆರೆಯಲಾಗುವುದು. ಆ ಸಂಬಂಧ ಕೆಲಸಗಳು ನಡೆಯುತ್ತಿದೆ ಎಂದು ವಾಲ್‌ಮಾರ್ಟ್ ಭಾರತದ ಅಧ್ಯಕ್ಷ ಮತ್ತು ಸಿಇಒ ಕ್ರಿಶ್ ಅಯ್ಯರ್ ಹೇಳಿದ್ದಾರೆ. 
ಈ ಒಪ್ಪಂದದ ಫಲವಾಗಿ ಜಪಾನಿನ ಸಾಫ್ಟ್ ಬ್ಯಾಂಕ್ ಕಾರ್ಪ್ ಗ್ರೂಪ್ ಫ್ಲಿಪ್ ಕಾರ್ಟ್ ನಿಂದ ಹೊರ ನಡೆಯಲಿದೆ. 11 ವರ್ಷಗಳಷ್ಟು ಹಳೆಯ ಫ್ಲಿಪ್ ಕಾರ್ಟ್ ನ ಒಟ್ಟರೆ ಮೌಲ್ಯವನ್ನು 1.39 ಲಕ್ಷ ಕೋಟಿ ರುಪಾಯಿ ಎಂದು ನಿಗದಿಪಡಿಸಲಾಗಿದೆ. 
ಅಮೆಜಾನ್ ಡಾಟ್ ಕಾಂನಲ್ಲಿ ಉದ್ಯೋಗದಲ್ಲಿದ್ದ ಸಚಿನ್ ಮತ್ತು ಬಿನ್ನಿ ಬನ್ಸಲ್ 2007ರಲ್ಲಿ ಫ್ಲಿಪ್ ಕಾರ್ಟ್ ಅನ್ನು ಸ್ಥಾಪಿಸಿದ್ದರು.
SCROLL FOR NEXT