ವಾಣಿಜ್ಯ

ವಾಹ್! ಮಾನುಷಿ ಚಿಲ್ಲರ್ ಅವರ ಕನಸಿನ ವಿವಾಹ ನಿಜಕ್ಕೂ #WeddingGoals!

ಮದುವೆಯು ಎಲ್ಲರಿಗೂ ವಿಶೇಷವಾದ ಒಂದು ಸಂದರ್ಭ, ಅದರಲ್ಲೂ ವಧುವಿಗೆ ತುಂಬಾ ವಿಶೇಷವಾದುದು. ಅಷ್ಟಕ್ಕೂ ಇದು ಆಕೆ ತನ್ನ ಜೀವನದಲ್ಲಿ ಒಂದು ಹೊಸ ಹಂತಕ್ಕೆ ತೆರಳುವ ಒಂದು ಶುಭ ದಿನ...

ಮದುವೆಯು ಎಲ್ಲರಿಗೂ ವಿಶೇಷವಾದ ಒಂದು ಸಂದರ್ಭ, ಅದರಲ್ಲೂ ವಧುವಿಗೆ ತುಂಬಾ ವಿಶೇಷವಾದುದು. ಅಷ್ಟಕ್ಕೂ ಇದು ಆಕೆ ತನ್ನ ಜೀವನದಲ್ಲಿ ಒಂದು ಹೊಸ ಹಂತಕ್ಕೆ ತೆರಳುವ ಒಂದು ಶುಭ ದಿನ. ಆಕೆಗೆ ಇದು ಒಂದು ಅವಿಸ್ಮರಣೀಯ ದಿನವಾದ್ದರಿಂದ, ಅದನ್ನು ಹಬ್ಬದ ಹಾಗೆ ಸಂಭ್ರಮಿಸಬೇಕು ಅಲ್ಲವೇ? ಹಾಗೆಂದರೆ, ಈ ದಿನವನ್ನು ನಾವು ಬಣ್ಣಗಳು, ನೃತ್ಯ, ಸಂಗೀತ, ಸಂಪೂರ್ಣ ಸಂತೋಷ, ಉತ್ಸಾಹ, ಮತ್ತು ಅತ್ಯಂತ ಮುಖ್ಯವಾಗಿ, ಪರಿಪೂರ್ಣವಾದ ಆಭರಣಗಳಿಂದ ಸಂಭ್ರಮಿಸಬೇಕು ಎಂದು ಅರ್ಥೈಸುತ್ತೇವೆ.

ಹಾಗೆ ನೋಡಿದರೆ, ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ರವರು ಅದೇ ಅಭಿಪ್ರಾಯವನ್ನು ಹೊಂದಿದ್ದಾರೆ, ಮತ್ತು ಅವರ ಮದುವೆಯ ಬಗ್ಗೆ ಅವರ ದೂರದೃಷ್ಟಿ ತುಂಬಾ ಸ್ಪಷ್ಟವಾಗಿದೆ. ಇದರಿಂದ ಕರೀನಾ ಕಪೂರ್ ಖಾನ್ ಅವರಲ್ಲಿ ಮತ್ತೆ ಮದುವೆಯಾಗುವ ಬಯಕೆ ಮೂಡಿತು ಎಂದರೆ ತಪ್ಪಾಗಲಾರದು!

ಇದು ಹೇಗೆ ಎಂಬ ಆಶ್ಚರ್ಯವೇ? ಮಿಸ್ ಚಿಲ್ಲರ್ ಅವರು ತಮ್ಮ ಮದುವೆ ಹೇಗೆ ನಡೆಯಬೇಕೆಂಬ ಕಲ್ಪನೆಯನ್ನು ಕರೀನಾ ಅವರಿಗೆ ವಿವರಿಸಿದಾಗ, ಅವರು ಸೊಗಸಾದ ಆಭರಣಗಳನ್ನು ಧರಿಸಿ ಸರ್ವಾಲಂಕಾರ ಭೂಷಿತೆಯಾಗಿ ನೃತ್ಯ, ಹಾಡುಗಳ ಮಧ್ಯೆ ದಾರಿ ಮಾಡಿಕೊಂಡು ದೇವಸ್ಥಾನದ ಮುಖಮಂಟಪದ ಕಡೆಗೆ ತೆರಳುವ ಸುಂದರ ಚಿತ್ರಣವನ್ನು ಬಣ್ಣಿಸಿದ್ದಾರೆ. ಅವರ ಚಿತ್ರಣ ಹೇಗಿತ್ತೆಂದರೆ, ಅದೇ ಟೇಬಲ್ ನ ಪಕ್ಕದಲ್ಲೇ ನಿಂತಿದ್ದ ಕರೀನಾ, ತಕ್ಷಣ, ವಾಹ್! ನಾನು ಇದೇ ರೀತಿ ಮದುವೆಯಾಗಬೇಕು! ಎಂಬ ಪದಗಳನ್ನು ಉಚ್ಛರಿಸಿದರು. ಒಂದೆರಡು ಕ್ಷಣಗಳ ನಂತರ ನನಗಾಗಲೆ ವಿವಾಹವಾಗಿದೆ ಎಂಬುದನ್ನು ಕರೀನಾ ಮನಗಂಡರು.


ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್, ತಮ್ಮ 'ಬ್ರೈಡ್ಸ್ ಆಫ್ ಇಂಡಿಯಾ ಸೀಸನ್ 6' ಹೆಸರಿನ ಬ್ರೈಡಲ್ ಆಭರಣಗಳ ಇತ್ತೀಚಿನ ಸಂಗ್ರಹವನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ, ಮಾನುಷಿ ಚಿಲ್ಲರ್ ಮತ್ತು ಕರೀನಾ ಕಪೂರ್ ಖಾನ್ ಅವರ ಸಮ್ಮುಖದಲ್ಲಿ ಇತ್ತೀಚೆಗೆ ಈ ಸನ್ನಿವೇಶ ಜರುಗಿತು. ಭಾರತೀಯ ವಧುಗಳಿಗಾಗಿ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ರೂಪಿಸಿರುವ ಕೆಲವು ಅತಿಸುಂದರ ಆಭರಣಗಳ ಸಂಗ್ರಹ ಇದಾಗಿದೆ. ಮಾನುಷಿ ಚಿನ್ನರ್ ಸಹ ತಮ್ಮ ಕನಸಿನ ವಿವಾಹ ಸಂಭ್ರಮವನ್ನು ನನಸಾಗಿಸಲು, ಈ ಆಭರಣಗಳನ್ನು ನೋಡದೇ ಇರಲು ಖಂಡಿತವಾಗಿಯೂ ಸಾಧ್ಯವಿಲ್ಲ.

ಮತ್ತಿನ್ನೇನು! ನೀವು ಕೂಡ ಬೇರೆ ಯಾರಿಗೂ ಕಡಿಮೆ ಇಲ್ಲದಂತಹ ನಿಮ್ಮ ಮದುವೆಯ ಸಂಭ್ರಮದ ಕಥೆಯನ್ನು ಹೇಳಬಹುದು. ಈ ಇತ್ತೀಚಿನ ಬ್ರೈಡಲ್ ಆಭರಣ ಸಂಗ್ರಹದಿಂದ ಖರೀದಿಸಿರುವ 500ಕ್ಕಿಂತಲೂ ಹೆಚ್ಚು ನವವಿವಾಹಿತರು ದುಬೈ/ ಮಲೇಷಿಯಾ/ ಬಾಲಿ/ ಹಾಂಗ್ ಕಾಂಗ್ ಅಥವಾ ಸಿಂಗಾಪುರ್ ಗೆ ಉಚಿತ ಹನಿಮೂನ್ ಪ್ರವಾಸವನ್ನು ಗೆಲ್ಲುತ್ತಾರೆ! ಅದೃಷ್ಟಶಾಲಿಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆಯನ್ನು ಮಾಡಲಾಗುವುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT