ವಾಣಿಜ್ಯ

ಕೆಫೆ ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ್ ನಾಪತ್ತೆ: ಕಂಪನಿ ಷೇರು ದಿಢೀರ್ ಕುಸಿತ!

Sumana Upadhyaya
ಬೆಂಗಳೂರು: ಮಾಜಿ  ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಳಿಯ, ಕೆಫಿ ಕಾಫಿಡೇ ಸ್ಥಾಪಕ ಹಾಗೂ ಮಾಲೀಕ ವಿಜಿ ಸಿದ್ದಾರ್ಥ ನಿಗೂಢ ನಾಪತ್ತೆ ಪ್ರಕರಣ ಅವರ ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆ.
ಕಾಫಿ ಡೇ ಎಂಟರ್ ಪ್ರೈಸಸ್ ಮಂಗಳವಾರದ ಷೇರು ವಹಿವಾಟಿನ ಆರಂಭದಲ್ಲಿ ಶೇಕಡಾ 20ರಷ್ಟು ಕುಸಿತ ಕಂಡುಬಂದು ಇಂದು ಬೆಳಗ್ಗೆ ಪ್ರತಿ ಷೇರಿಗೆ 154.05ರಲ್ಲಿ ವಹಿವಾಟು ನಡೆಸಿತು. ಕಾಫಿ ಡೇ ಸೇರಿದಂತೆ ವಿಜಿ ಸಿದ್ದಾರ್ಥ ಅವರ ಮಾಲೀಕತ್ವದ ಸಂಸ್ಥೆಗಳು ಇಂದು ವಹಿವಾಟಿನಿಂದ ಬಂದ್ ಆಗಿವೆ. 
ಈ ಕಂಪೆನಿ, ವಿ ಜಿ ಸಿದ್ಧಾರ್ಥ್ ಅವರು ಕಾಣೆಯಾಗಿದ್ದಾರೆ ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ ಮತ್ತು ಮುಂಬೈ ಷೇರು ಮಾರುಕಟ್ಟೆ ಬಿಎಸ್ ಇ ಕೇಂದ್ರಗಳಿಗೆ ಪತ್ರ ಬರೆದಿದೆ.
ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿ ಜಿ ಸಿದ್ಧಾರ್ಥ್ ಅವರು ನಿನ್ನೆ ಸಾಯಂಕಾಲದಿಂದ ಕಾಣೆಯಾಗಿದ್ದಾರೆ. ಅವರ ಪತ್ತೆಗಾಗಿ ಸಂಬಂಧಪಟ್ಟ ಅಧಿಕಾರಿಗಳ ನೆರವನ್ನು ಪಡೆಯುತ್ತಿದ್ದೇವೆ. ವೃತ್ತಿಪರ ವ್ಯವಸ್ಥಾಪಕ ತಂಡ ಮತ್ತು ಸ್ಪರ್ಧಾತ್ಮಕ ನಾಯಕತ್ವ ಹೊಂದಿರುವ ತಂಡಗಳನ್ನು ಕಂಪೆನಿ ಹೊಂದಿದ್ದು ಉದ್ಯಮವನ್ನು ಮುಂದುವರಿಸಿಕೊಂಡು ಹೋಗುವ ಭರವಸೆಯಿದೆ ಎಂದು ಷೇರು ಮಾರುಕಟ್ಟೆ ವಿನಿಮಯ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಕಂಪೆನಿ ತಿಳಿಸಿದೆ. 
ಪ್ರತಿಷ್ಠಿತ ಎಬಿಸಿ ಕಂಪನಿ ಸೇರಿದಂತೆ ಸೇರಾಯ್ ರೆಸಾರ್ಟ್, ಅಂಬರ್ ವ್ಯಾಲಿ ಶಾಲೆ, ವಿ.ಟಿ.ಸಿ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎಸ್ಟೇಟ್ ಕೆಲಸಕ್ಕೆ ಅಗಮಿಸಿದ ಸಾವಿರಾರು ಕಾರ್ಮಿಕರನ್ನು ವಾಪಸ್ ಕಳುಹಿಸಲಾಗಿದೆ.
SCROLL FOR NEXT