ವಾಣಿಜ್ಯ

ದೇಶದಲ್ಲಿ 2000 ರೂ. ನೋಟುಗಳ ಮುದ್ರಣ ಸ್ಥಗಿತ- ಆರ್‌ಬಿಐ

Nagaraja AB

ಮುಂಬೈ : ದೇಶಿಯ ಕರೆನ್ಸಿಯಲ್ಲಿ ಹೆಚ್ಚಿನ ಮೌಲ್ಯಹೊಂದಿರುವ  2 ಸಾವಿರ ರೂಪಾಯಿ ನೋಟು ಮುದ್ರಿಸುವುದನ್ನು  ದೇಶದ ಕೇಂದ್ರೀಯ ಬ್ಯಾಂಕ್  ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಗಿತಗೊಳಿಸಿದೆ.

ಈ ಆರ್ಥಿಕ  ವರ್ಷದಲ್ಲಿ ಈವರೆಗೆ ಒಂದೇ ಒಂದು  2000 ರೂ  ನೋಟನ್ನು ಕೂಡ  ಮುದ್ರಿಸಿಲ್ಲವಂತೆ.  ಆರ್ ಟಿಐ (ಮಾಹಿತಿ ಹಕ್ಕು ಕಾಯ್ದೆ) ಅಡಿ ಕೋರಿದ್ದ ಅರ್ಜಿಗೆ,  2020ನೇ ಆರ್ಥಿಕ ವರ್ಷದಲ್ಲೂ  2 ಸಾವಿರ ರೂ ಮೌಲ್ಯದ ಹೊಸ ನೋಟುಗಳನ್ನು  ಮುದ್ರಿಸುವುದಿಲ್ಲ ಎಂದು ಆರ್ ಬಿಐ ಹೇಳಿದೆ

ಪ್ರಮುಖವಾಗಿ ಈ ವರ್ಷದ ಆರಂಭದಲ್ಲಿ ಆಂಧ್ರ-ತಮಿಳುನಾಡು ಗಡಿಯಲ್ಲಿ 6 ಕೋಟಿ ರೂಪಾಯಿ ಅಕ್ರಮ ನಗದು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಕಪ್ಪುಹಣವನ್ನು ನಿಗ್ರಹಿಸಲು ಈ ಕ್ರಮ ಕೈಗೊಳ್ಳಲಾಗಿದೆಯಂತೆ.

ಈವರೆಗೆ ಎಷ್ಟು 2 ಸಾವಿರ ರೂ.  ನೋಟುಗಳನ್ನು ಮುದ್ರಿಸಲಾಗಿದೆ ಎಂದು ದಿನ ಪತ್ರಿಕೆಯೊಂದು ಮಾಹಿತಿ ಹಕ್ಕು ಕಾಯ್ದೆಯಡಿ  ಕೇಳಿದ ಪ್ರಶ್ನೆಗೆ ಆರ್ ಬಿ ಐ  ಈ ಉತ್ತರ ನೀಡಿದೆ. ಕಪ್ಪು ಹಣವನ್ನು ನಿಗ್ರಹಿಸಲು 2000 ರೂ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದೆ. 

ಆರ್ ಟಿಐ ಅರ್ಜಿಗೆ  ನೀಡಿರುವ ಮಾಹಿತಿ ಪ್ರಕಾರ ಪ್ರಕಾರ, 2017 ರಲ್ಲಿ 3,542,991 ಮಿಲಿಯನ್  2 ಸಾವಿರ ರೂ. ನೋಟುಗಳನ್ನು ಮುದ್ರಿಸಲಾಗಿದೆ  ಎಂದು ಆರ್ ಬಿಐ ತಿಳಿಸಿದೆ

2018ರಲ್ಲಿ ಕೇವಲ 111.507 ಮಿಲಿಯನ್ ನೋಟುಗಳನ್ನು ಮಾತ್ರ ಮುದ್ರಿಸಲಾಗಿದೆ. ಆದಾಗ್ಯೂ, 2019 ರಲ್ಲಿ ಈ ಸಂಖ್ಯೆ ಅರ್ಧಕ್ಕಿಂತಲೂ ಹೆಚ್ಚು ಕುಸಿದಿದ್ದು, ಕೇವಲ 46.690 ಮಿಲಿಯನ್ ರೂಪಾಯಿಗಳನ್ನು ಮಾತ್ರ  ಚಲಾವಣೆಗೆ ತಂದಿದೆ.  

ನವೆಂಬರ್ 2016 ರಲ್ಲಿ ನರೇಂದ್ರ ಮೋದಿ ಸರ್ಕಾರ  500 ಮತ್ತು 1000 ರೂ ನೋಟುಗಳನ್ನು  ಅಮಾನ್ಯೀಕರಣಗೊಳಿಸಿ  ತರುವಾಯ ರೂ .2000 ನೋಟು ಚಲಾವಣೆ ತಂದಿತ್ತು.

SCROLL FOR NEXT