ವಾಣಿಜ್ಯ

ಐಡಿಬಿಐ ಬ್ಯಾಂಕಿಗೆ ಕೇಂದ್ರ ಸರ್ಕಾರ ಮತ್ತು ಎಲ್ ಐಸಿಯಿಂದ 9 ಸಾವಿರ ಕೋಟಿ ರೂ ಒಳಹರಿವಿಗೆ ಅನುಮೋದನೆ 

Sumana Upadhyaya

ನವದೆಹಲಿ: ಸಾಲಗಾರರ ಬಂಡವಾಳ ಮೂಲವನ್ನು ಹೆಚ್ಚಿಸಲು ಐಡಿಬಿಐ ಬ್ಯಾಂಕಿನಲ್ಲಿ 9 ಸಾವಿರ ಕೋಟಿ ರೂಪಾಯಿ ಒಳಹರಿವಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.


ಸರ್ಕಾರ ಮತ್ತು ಎಲ್ ಐಸಿಯಿಂದ ಒಂದು ಬಾರಿಗೆ ಹಣ ಹರಿವಿಗೆ ಐಡಿಬಿಐ ಬ್ಯಾಂಕಿನಲ್ಲಿ ಮರು ಬಂಡವಾಳೀಕರಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವದೇಕರ್ ತಿಳಿಸಿದ್ದಾರೆ.


9 ಸಾವಿರ ಕೋಟಿ ರೂಪಾಯಿಗಳಲ್ಲಿ ಕೇಂದ್ರ ಸರ್ಕಾರ 4,557 ಕೋಟಿ ರೂಪಾಯಿಗಳನ್ನು ಒಂದು ಬಾರಿಗೆ ಮರು ಬಂಡವಾಳೀಕರಣವಾಗಿ ಐಡಿಬಿಐ ಬ್ಯಾಂಕಿಗೆ ನೀಡಲಿದೆ. ಭಾರತೀಯ ಜೀವ ನಿಗಮ 4, 700 ಕೋಟಿ ರೂಪಾಯಿ ನೀಡಲಿದೆ.

SCROLL FOR NEXT