ವಾಣಿಜ್ಯ

ಮಾರುಕಟ್ಟೆ ವಹಿವಾಟು: ಚಿಲ್ಲರೆ ಹಣದುಬ್ಬರ ಶೇ.5.91ಕ್ಕೆ ಇಳಿಕೆ

Raghavendra Adiga

ನವದೆಹಲಿ: ಕಳೆದ ತಿಂಗಳಿಗೆ ಹೋಲಿಸಿದರೆ ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 5.91 ಕ್ಕೆ ಇಳಿದಿದೆ, ಮುಖ್ಯವಾಗಿ ಆಹಾರ ಬೆಲೆಗಳಲ್ಲಿನ ವ್ಯತ್ಯಾಸದ ಕಾರಣದಿಂದಾಗಿ ಈ ಬದಲಾವಣೆ ಆಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸಿದೆ.

ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಸಿಪಿಐ ಮಾಹಿತಿಯ ಪ್ರಕಾರ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು 2020 ರ ಫೆಬ್ರವರಿಯಲ್ಲಿ ಶೇ 6.58 ಮತ್ತು ಮಾರ್ಚ್ 2019 ರಲ್ಲಿ 2.86 ರಷ್ಟಿತ್ತು. ಫುಡ್ ಬಾಸ್ಕೆಟ್ ನಲ್ಲಿನ  ಹಣದುಬ್ಬರವು ಮಾರ್ಚ್ 2020 ರಲ್ಲಿ ಶೇ .8.76 ರಷ್ಟಿತ್ತು, ಹಿಂದಿನ ತಿಂಗಳಲ್ಲಿ ಇದು ಶೇಕಡಾ 10.81 ಮಟ್ಟದಲ್ಲಿತ್ತು. 

ಭಾರತೀಯ ರಿಸರ್ವ್ ಬ್ಯಾಂಕ್ ಮುಖ್ಯವಾಗಿ ಚಿಲ್ಲರೆ ಹಣದುಬ್ಬರದ ಆಧಾರದಲ್ಲಿ ನ್ನ ಎರಡು ಮಾಸಿಕ ವಿತ್ತೀಯ ನೀತಿಯನ್ನು ನಿರ್ಧರಿಸುತ್ತದೆ. ಹಣದುಬ್ಬರವನ್ನು ಶೇಕಡಾ 4ರ ಮಟ್ಟದಲ್ಲಿ ಉಳಿಸಿಕೊಳ್ಳಲು ಸರ್ಕಾರ ಕೇಂದ್ರ ಬ್ಯಾಂಕ್‌ಗೆ ಆದೇಶಿಸಿದೆ.

SCROLL FOR NEXT