ವಾಣಿಜ್ಯ

ರಿಲಯನ್ಸ್ ಜೊತೆ ಕೈಜೋಡಿಸಿದ ಫೇಸ್ ಬುಕ್: ಜಿಯೊ ಟೆಲಿಕಾಂನಲ್ಲಿ ಶೇ. 10ರಷ್ಟು ಹೂಡಿಕೆ

Sumana Upadhyaya

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ಟೆಲಿಕಾಂ ಕಂಪೆನಿ ಜಿಯೊದಲ್ಲಿ ಶೇಕಡಾ 10ರಷ್ಟು ಹೂಡಿಕೆ ಮಾಡುವುದಾಗಿ ಫೇಸ್ ಬುಕ್ ಬುಧವಾರ ಪ್ರಕಟಿಸಿದೆ.

ಈ ಮೂಲಕ ಸೋಷಿಯಲ್ ಮೀಡಿಯಾ ಸಂಸ್ಥೆ ತನ್ನ ಅಸ್ಥಿತ್ವವನ್ನು ಟೆಲಿಕಾಂ ಕ್ಷೇತ್ರದವರೆಗೆ ವಿಸ್ತರಿಸಿದ್ದು 5.7 ಶತಕೋಟಿ ಡಾಲರ್ (43 ಸಾವಿರದ 574 ಕೋಟಿ ರೂಪಾಯಿ)ಗಳಷ್ಟು ಹೂಡಿಕೆ ಮಾಡುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಹ ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿ, ಜಿಯೊ ಟೆಲಿಕಾಂ ಕ್ಷೇತ್ರದಲ್ಲಿ ಫೇಸ್ ಬುಕ್ 4.62 ಲಕ್ಷ ಕೋಟಿ ರೂಪಾಯಿ ಪೂರ್ವ ಹಣ ಉದ್ಯಮ ಮೊತ್ತವಾಗಿ ಹೂಡಿಕೆ ಮಾಡುತ್ತಿದ್ದು ಇದರಿಂದ ಫೇಸ್ ಬುಕ್ ನ ಹೂಡಿಕೆ ಜಿಯೊದಲ್ಲಿ ಶೇಕಡಾ 9.99ರಷ್ಟು ಪಾಲು ಆಗಲಿದೆ ಎಂದಿದೆ.

ಸಂಪೂರ್ಣವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಜಿಯೊ ಡಿಜಿಟಲ್ ಸೇವಾ ಕಂಪೆನಿಯಾಗಿದ್ದು ರಿಲಯನ್ಸ್ ಜಿಯೊ ಇನ್ಫೊಕಾಮ್ ಲಿ. 388 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಸಾಲದಿಂದ ಮುಕ್ತವಾಗಲು ರಿಲಯನ್ಸ್ ಇಂಡಸ್ಟ್ರೀಸ್ ಫೇಸ್ ಬುಕ್ ನ ಜೊತೆ ಕೈಜೋಡಿಸಿದೆ.

SCROLL FOR NEXT