ಸಂಗ್ರಹ ಚಿತ್ರ 
ವಾಣಿಜ್ಯ

ಷೇರುಮಾರುಕಟ್ಟೆ ಮೇಲೆ ಕೊರೋನಾ ವೈರಸ್ ಎಫೆಕ್ಟ್: 5 ನಿಮಿಷದಲ್ಲಿ 5 ಲಕ್ಷ ಕೋಟಿ ರೂ. ನಷ್ಟ!

ಚೀನಾ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಮರಣ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ಎಫೆಕ್ಟ್ ಭಾರತೀಯ ಷೇರುಮಾರುಕಟ್ಟೆ ಮೇಲೂ ಆಗಿದ್ದು, ಕೇವಲ 5 ನಿಮಿಷಗಳ ಅಂತರದಲ್ಲಿ ಹೂಡಿಕೆದಾರರು 5 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದ್ದಾರೆ.

ಮುಂಬೈ: ಚೀನಾ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಮರಣ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ಎಫೆಕ್ಟ್ ಭಾರತೀಯ ಷೇರುಮಾರುಕಟ್ಟೆ ಮೇಲೂ ಆಗಿದ್ದು, ಕೇವಲ 5 ನಿಮಿಷಗಳ ಅಂತರದಲ್ಲಿ ಹೂಡಿಕೆದಾರರು 5 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದ್ದಾರೆ.

ಚೀನಾ, ದಕ್ಷಿಣ ಕೊರಿಯಾ, ಇಟಲಿ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಉಂಟಾಗಿರುವ ಕೊರೋನಾ ವೈರಸ್ ಭೀತಿ ಉತ್ಪಾದನಾ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದರ ದುಷ್ಪರಿಣಾಮ ಇದೀಗ ಭಾರತೀಯ ಷೇರುಮಾರುಕಟ್ಟೆ ಮೇಲೂ ಆಗಿದೆ. ಇಂದು ಷೇರುಮಾರುಕಟ್ಟೆ ವಹಿವಾಟಿನ ವಾರದ ಕೊನೆಯ ದಿನವಾಗಿದ್ದು, ಇಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 1101 ಅಂಕಗಳ ಕಳೆದುಕೊಂಡಿತು. ಆ ಮೂಲಕ 38,661.81ಅಂಕಗಳಿಗೆ ಸೆನ್ಸೆಕ್ಸ್ ಕುಸಿಯಿತು. ಮಾರುಕಟ್ಟೆಯಲ್ಲಿ ಈ ದಿಢೀರ್ ನಕಾರಾತ್ಮಕ ಬೆಳವಣಿಗೆಯಿಂದಾಗಿ ಹೂಡಿಕೆದಾರರು ಬರೊಬ್ಬರಿ 5 ಲಕ್ಷ ಕೋಟಿ ರೂಗಳ ನಷ್ಟ ಅನುಭವಿಸುವಂತಾಗಿದೆ.

ರಾಷ್ಟ್ರೀಯ ಷೇರು ಪೇಟೆ ಸೂಚ್ಯಂಕ, ನಿಫ್ಟಿ 348 ಅಂಕ ಕುಸಿದು, 11,285 ಕ್ಕೆ ಇಳಿದಿದೆ.
  
ವಾರದ ಕೊನೆಯ ದಿನದ ಆರಂಭಿಕ ವಹಿವಾಟು 39087.47 ಅಂಕದೊಂದಿಗೆ  ಆರಂಭವಾಯಿತು. ಕೆಲವೇ ಹೊತ್ತಿನಲ್ಲಿ ಮಾರಾಟದ ಒತ್ತಡದಿಂದ 38600.81 ಕ್ಕೆ ಕುಸಿಯಿತು.
  
ಒಟ್ಟಾರೆ ಮಾರಾಟ ಒತ್ತಡದಿಂದ ರಾಷ್ಟ್ರೀಯ ಷೇರು ಪೇಟೆ ಸೂಚ್ಯಂಕ, ನಿಫ್ಟಿ 300 ಅಂಕ ಕುಸಿಯಿತು. ಸದ್ಯ, 290 ಅಂಕ ಕುಸಿತದೊಂದಿಗೆ 11,343ರಲ್ಲಿ ವಹಿವಾಟು ನಡೆಯುತ್ತಿದೆ. 

ಇಂದಿನ ವಹಿವಾಟಿನಲ್ಲಿ ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಮಹೀಂದ್ರಾ ಮತ್ತು ಮಹೀಂದ್ರಾ, ಬಜಾಜ್ ಫೈನಾನ್ಸ್, ಎಚ್‌ಸಿಎಲ್ ಟೆಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗಳು ಭಾರಿ ನಷ್ಠ ಅನುಭವಿಸಿದ್ದು, ಈ ಸಂಸ್ಥೆಗಳ ಷೇರುಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.

ಇನ್ನು ಕೊರೋನಾ ವೈರಸ್ ದಾಳಿಯಿಂದಾಗಿ ಗಂಭೀರ ಪರಿಣಾಮ ಎದುರಿಸುತ್ತಿರುವ ಚೀನಾದಲ್ಲಿ ನಿನ್ನೆ ಒಂದೇ ದಿನ ಮತ್ತೆ 44 ಮಂದಿ ಮೃತರಾಗಿದ್ದಾರೆ. ಆ ಮೂಲಕ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 2,788ಕ್ಕೇರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ'; ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ