ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಸಾರ್ವಕಾಲಿಕ ದಾಖಲೆ ಬರೆದ ಭಾರತೀಯ ಷೇರುಮಾರುಕಟ್ಟೆ, 41,800ಕ್ಕೆ ತಲುಪಿದ ಸೆನ್ಸೆಕ್ಸ್

ಭಾರತೀಯ ಷೇರುಮಾರುಕಟ್ಟೆ ಮತ್ತೆ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದ್ದು, ಸೋಮವಾರದ ವಹಿವಾಟಿನ ಆರಂಭದಲ್ಲೇ 293.69 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 41,800 ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 13 Jan 2020, 11:17 am

ನವದೆಹಲಿ: ಭಾರತೀಯ ಷೇರುಮಾರುಕಟ್ಟೆ ಮತ್ತೆ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದ್ದು, ಸೋಮವಾರದ ವಹಿವಾಟಿನ ಆರಂಭದಲ್ಲೇ 293.69 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್  41,800 ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ.

ಕಳೆದ ಡಿಸೆಂಬರ್ 19ರ ವಹಿವಾಟಿನಲ್ಲೇ ಸೆನ್ಸೆಕ್ಸ್ 394 ಅಂಕಗಳ ಏರಿಕೆ ಕಾಣುವ ಮೂಲಕ ಸಾರ್ವಕಾಲಿಕೆ ದಾಖಲೆ ನಿರ್ಮಾಣ ಮಾಡಿದ್ದ ಸೆನ್ಸೆಕ್ಸ್ ಇಂದು ಮತ್ತೆ, 293.69 ಅಂಕಗಳ ಏರಿಕೆಯೊಂದಿಗೆ 41,800 ಅಂಕಗಳ ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ. ನಿಫ್ಟಿ ಕೂಡ ಇಂದು ದಾಖಲೆಯ 73.65 ಅಂಕಗಳ ಏರಿಕೆ ಕಾಣುವ ಮೂಲಕ 12,330.55 ಅಂಕಗಳಿಗೆ ಏರಿಕೆಯಾಗಿದ್ದು, ಶೇ.0.60ರಷ್ಟು ಏರಿಕೆ ಕಂಡಿದೆ.

ಇಂದಿನ ವಹಿವಾಟಿನಲ್ಲಿ ಔಷಧ ಮತ್ತು ರಿಯಾಲಿಟಿ ಸೆಕ್ಟರ್ ಗಳ ಷೇರುಮೌಲ್ಯ ಏರಿಕೆಯಾಗಿದ್ದು, ಉಕ್ಕು ವಿಭಾಗದ ಸಂಸ್ಥೆಯ ಷೇರುಗಳ ಮೌಲ್ಯ ಕೂಡ ಏರಿಕೆ ಕಂಡಿದೆ. ಪ್ರಮುಖವಾಗಿ ಸನ್ ಫಾರ್ಮಾ, ಐಟಿಸಿ, ಎಚ್‌ಸಿಎಲ್ ಟೆಕ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್ ಮತ್ತು ಕೊಟಕ್ ಬ್ಯಾಂಕ್ ಗಳ ಷೇರುಗಳದಲ್ಲಿ ಏರಿಕೆ ಕಂಡುಬಂದಿದೆ.

Advertisement

Advertisement

ಟಿಸಿಎಸ್, ಮಾರುತಿ, ಎಚ್ ಡಿಎಫ್ ಸಿ ಷೇರುಗಳ ಮೌಲ್ಯದಲ್ಲಿ ಅಲ್ಪ ಚೇತರಿಕೆ ಕಂಡುಬಂದಿದೆ. ಇನ್ನು ಹಾಂಕಾಂಗ್, ಶಾಂಘೈ ಮತ್ತು ಸಿಯೋಲ್ ಷೇರುಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ಭಾರತೀಯ ಷೇರುಮಾರುಕಟ್ಟೆ ಚೇತರಿಕೆಗೆ ಕಾರಣ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement