ವಾಣಿಜ್ಯ

ಟ್ರೈನ್ 18 ಯೋಜನೆಯಿಂದ ಚೀನಾ ಕಂಪನಿಗಳನ್ನು ದೂರವಿಡಿ: ಸಿಎಐಟಿ

Srinivas Rao BV

ದೇಶಿಯ ರೈಲು ವಂದೇ ಭಾರತ್ ಎಂದೇ ಖ್ಯಾತಿ ಪಡೆದಿರುವ ಟ್ರೈನ್ 18 ಯೋಜನೆಯಿಂದ ಚೀನಾ ಕಂಪನಿಗಳನ್ನು ದೂರವಿಡಿ ಎಂದು ಕಾನ್ಪಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಆಗ್ರಹಿಸಿದೆ.

ಟ್ರೈನ್ 18 ಯೋಜನೆಗಾಗಿ ಆಹ್ವಾನಿಸಲಾಗಿರುವ ಜಾಗತಿಕ ಟೆಂಡರ್ ನಲ್ಲಿ ಚೀನಾ ಕಂಪನಿಗಳಿಗೆ ಅವಕಾಶ ನೀಡಬಾರದು ಎಂದು ಸಿಎಐಟಿ ಒತ್ತಾಯಿಸಿದೆ.

ಗಡಿ ಭಾಗದಲ್ಲಿ ಉಂಟಾದ ಸಂಘರ್ಷದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು,  ಚೀನಾ ಉತ್ಪನ್ನಗಳು ಸೇವೆಗಳನ್ನು ಬಹಿಷ್ಕರಿಸಲು ಕರೆ ನೀಡಲಾಗಿದೆ. ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ಸಿಎಐಟಿ ಟ್ರೈನ್ 18 ಯೋಜನೆಗೆ ಕರೆದಿರುವ ಟೆಂಡರ್ ನಿಂದ ಚೀನಾದ ಸಿಆರ್ ಆರ್ ಸಿ ಕಾರ್ಪೊರೇಷನ್ ನ್ನು ದೂರವಿಡಬೇಕೆಂದು ಮನವಿ ಮಾಡಿದೆ.

ಟ್ರೈನ್ 18 ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಯಡಿ ಮಾಡಲಾಗುತ್ತಿದೆ. ಆದ್ದರಿಂದ ಈಗಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚೀನಾ ಕಂಪನಿಗಳಿಗೆ ಅವಕಾಶ ನೀಡಬಾರದು ಎಂದು ಪತ್ರದ ಮನವಿ ಮಾಡಲಾಗಿದೆ. 

44 ಟ್ರೈನ್ 18 ಗಳಿಗೆ ಬೇಕಾಗಿರುವ ಭಾಗಗಳನ್ನು ಪೂರೈಸುವ 1,500 ಕೋಟಿ ಮೊತ್ತದ ಯೋಜನೆಗೆ ಕೇಂದ್ರ ಸರ್ಕಾರ ಟೆಂಡರ್ ಕರೆದಿತ್ತು. ಈ ಟೆಂಡರ್ ಗೆ ಚೀನಾದ ಸಂಸ್ಥೆಯೂ ಬಿಡ್ ಮಾಡಿತ್ತು.

SCROLL FOR NEXT