ವಾಣಿಜ್ಯ

ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ 100 ದಿನಗಳಲ್ಲಿ 15 ಲಕ್ಷ ಕೋಟಿ ನಷ್ಟ! 

Srinivas Rao BV

ನವದೆಹಲಿ: ಭಾರತದ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಿಗೂ ಕೊರೋನಾ ವೈರಸ್ ತಡೆಯಲಾರದ ಪೆಟ್ಟು ನೀಡಿದ್ದು ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ 100 ದಿನಗಳಲ್ಲಿ 15 ಲಕ್ಷ ಕೋಟಿ ರೂಪಾಯಿ ನಷ್ಟ ಎದುರಾಗಿದೆ.

ಕಾನ್ಫೆಡರೇಷನ್ (ಸಿಎಐಟಿ) ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ದೇಶಾದ್ಯಂತ ಇರುವ ವ್ಯಾಪಾಗಳು ಗ್ರಾಹಕರ ಬೇಡಿಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಅತಿ ಹೆಚ್ಚು ನಷ್ಟ ಎದುರಿಸುತ್ತಿದ್ದಾರೆ, ಆದರೂ ಸಹ ಹಲವಾರು ಆರ್ಥಿಕ ಹೊಣೆಗಳನ್ನು ನಿಭಾಯಿಸಬೇಕಿದೆ ಎಂದು ಹೇಳಿದೆ.

"ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವ್ಯಾಪಾರಿಗಳ ನಷ್ಟಕ್ಕೆ ಸಹಾಯ ಯೋಜನೆಗಳು ಲಭ್ಯವಾಗುತ್ತಿಲ್ಲ. ಇದೂ ಸಹ ವ್ಯಾಪಾರಿಗಳ ನೋವಿಗೆ ಕಾರಣವಾಗಿದೆ ಎಂದು (ಸಿಎಐಟಿ) ಹೇಳಿದೆ.

ಈ ಬಗ್ಗೆ ಸಿಎಐಟಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇವಾಲ್ ಮಾತನಾಡಿದ್ದು, ದೇಶೀಯ ವ್ಯಾಪಾರದ ಪರಿಸ್ಥಿತಿ ಹದಗೆಟ್ಟಿದೆ. ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ ಶೇ.20 ರಷ್ಟು ಅಂಗಡಿಗಳು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ತಿಳಿಸಿದ್ದಾರೆ.
 

SCROLL FOR NEXT