ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಚಿನ್ನದ ಬೆಲೆ ಗಗನಕ್ಕೆ: 10 ಗ್ರಾಂ ಗೆ ರೂ.48,400!

ಚಿನ್ನದ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದ್ದು, ಶೀಘ್ರದಲ್ಲೇ 10 ಗ್ರಾಂ ಚಿನ್ನ ರೂ.50,000 ಗಡಿ ದಾಟಲಿದೆ.

ಸಂಗ್ರಹ ಚಿತ್ರ
Manjula VN
Updated On : 17 Jun 2020, 11:58 am

ನವದೆಹಲಿ: ಚಿನ್ನದ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದ್ದು, ಶೀಘ್ರದಲ್ಲೇ 10 ಗ್ರಾಂ ಚಿನ್ನ ರೂ.50,000 ಗಡಿ ದಾಟಲಿದೆ. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ ಮಂಗಳವಾರ ರೂ.761 ಏರಿಕೆಯಾಗಿದ್ದು, ರೂ.48,414ಕ್ಕೆ ತಲುಪಿದೆ. 

ಮತ್ತೊಂದೆಡೆ ಮುಂಬೈ ಚಿನ್ನದ ಮಾರುಕಟ್ಟೆಯಲ್ಲಿ 10 ಗ್ರಾಂ ಶುದ್ಧ ಚಿನ್ನದ ದರ 47,540 ಹಾಗೂ ಆಭರಣ ಚಿನ್ನದ ದರ ರೂ.47,350 ಆಗಿದೆ. 

Advertisement

Advertisement

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಮತ್ತು ರುಪಾಯಿ ಮೌಲ್ಯ ಕುಸಿತ ಚಿನ್ನದ ದರ ಏರಿಕೆಗೆ ಕಾರಣ  ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ವೇಳೆ ಒಂದು ಕೆಜಿ ಬೆಳ್ಳಿಯ ದರ ರೂ.1,308 ಏರಿಕೆಯಾಗಿದ್ದು, ರೂ.49,204 ಆಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement