ಸಂಗ್ರಹ ಚಿತ್ರ 
ವಾಣಿಜ್ಯ

ಕೊರೋನಾವೈರಸ್: ಜಾಗತಿಕ ಆರ್ಥಿಕತೆ ಮಹಾಪತನದ ಸೂಚನೆ ನೀಡಿದ ಮೂಡೀಸ್

ಕೋವಿಡ್--19 ವಿಶ್ವಾದ್ಯಂತ ಆರ್ಥಿಕ ಸುನಾಮಿಯನ್ನು ಸೃಷ್ಟಿಸಿದೆ ಮತ್ತು ಜಾಗತಿಕ ಆರ್ಥಿಕತೆಯು ಗಂಭೀರ ಕುಸಿತದಲ್ಲಿ ಮುಳುಗಿದೆ ಎಂದು ಮೂಡಿಸ್ ಅನಾಲಿಟಿಕ್ಸ್ ತಿಳಿಸಿದೆ

ಕೋವಿಡ್--19 ವಿಶ್ವಾದ್ಯಂತ ಆರ್ಥಿಕ ಸುನಾಮಿಯನ್ನು ಸೃಷ್ಟಿಸಿದೆ ಮತ್ತು ಜಾಗತಿಕ ಆರ್ಥಿಕತೆಯು ಗಂಭೀರ ಕುಸಿತದಲ್ಲಿ ಮುಳುಗಿದೆ ಎಂದು ಮೂಡಿಸ್ ಅನಾಲಿಟಿಕ್ಸ್ ತಿಳಿಸಿದೆ

ಏಷ್ಯಾ ಹಾಗೂ ಯುರೋಪ್ ಃಆಗೂ ಅಮೆರಿಕಾ ಆರ್ಥಿಕತೆಗಳ ಮೇಲೆ ಈ ಕೊರೋನಾವೈರಸ್ ಮಾರಕ ಹೊಡೆತ ನೀಡಿದೆ.

"ಸೋಂಕು ಮಾರಕವಾಗಿದ್ದು ಹರಡುವಿಕೆ ಹೆಚ್ಚುತ್ತಿದೆ. ಇದರೊಡನೆ ಹೆಚ್ಚಿನ ಆರ್ಥಿಕ ಸಂಕಷ್ಟಗಳು ಶೀಘ್ರವಾಗಿ ಬರಲಿವೆ, ವ್ಯವಹಾರ,  ಹೂಡಿಕೆಯನ್ನು ಕಡಿತಗೊಳಿಸುತ್ತವೆಮುಂಬರುವ ವಾರಗಳಲ್ಲಿ ಲಕ್ಷಾಂತರ ಉದ್ಯೋಗ ನಷ್ಟಗಳು ಸಂಭವಿಸುವ ಸಾಧ್ಯತೆಯಿದೆ, ಅದರಲ್ಲೂ ವಿಶೇಷವಾಗಿ ಸಂಬಳ  ನಂಬಿ ಬದುಕುವ ಮನೆಗಳಲ್ಲಿ ತೀವ್ರ ಕಷ್ಟದ ದಿನ ಎದುರಾಗಲಿದೆ"ವಿಶ್ಲೇಷಣೆಯಲ್ಲಿ  ಹೇಳಿದೆ.

ಜನವರಿಯಲ್ಲಿ, ವೈರಸ್‌ ಹಾವಳಿಗೆ ಮುನ್ನ ಮೂಡೀಸ್  2020 ರಲ್ಲಿ ಜಾಗತಿಕ ನೈಜ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 2.6ಕ್ಕೆ ಕಡಿತಗೊಳಿಸಿತ್ತು. ಈಗ ಪ್ರಯಾಣ, ವ್ಯಾಪಾರ ಮತ್ತು ಅನೇಕ ವ್ಯವಹಾರಗಳನ್ನು ಸ್ಥಗಿತಗೊಳಿಸುವುದರೊಂದಿಗೆ, ಜಾಗತಿಕ ಆರ್ಥಿಕತೆಯು ನಿಜವಾದ ಜಿಡಿಪಿ ಶೇಕಡಾ 0.4 ರಷ್ಟಕ್ಕೆ ಕುಸಿಯುವ ಸಂಬವವಿದೆ.

ಮೊದಲ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ವಾರ್ಷಿಕ ದರಶೇಕಡಾ 27 ರಷ್ಟು ಕುಸಿತ ಕಂಡಿದೆ. ಯುಎಸ್ ಉದ್ಯೋಗದಾತರು ತಕ್ಷಣವೇ ಕೆಲಸಗಾರರನ್ನು ವಜಾಗೊಳಿಸಿವೆ. ನಿರುದ್ಯೋಗ ವಿಮೆಯ ಆರಂಭಿಕ ಹಕ್ಕುಗಳ ಮಟ್ಟ ಕಳೆದೊಂದು ವಾರದಲ್ಲಿ ಸುಮಾರು 210,000 ದಿಂದ 280,000 ಕ್ಕೆ ಏರಿತು. ಕಳೆದ ವರ್ಷ ಫೆಡರಲ್ ರಿಸರ್ವ್ ನಡೆಸಿದ ಸಮೀಕ್ಷೆಯ ಪ್ರಕಾರ, ಅರ್ಧದಷ್ಟು ಅಮೆರಿಕನ್ನರು ಉದ್ಯೋಗ ಕಳೆದುಕೊಂಡಿದ್ದಾರೆ.

ಕೋವಿಡ್-19  ಜಾಗತಿಕ ಸಾಂಕ್ರಾಮಿಕ ಮತ್ತು ಆರ್ಥಿಕ ಆಘಾತವಾಗಿದೆ . ಜಗತ್ತಿನಾದ್ಯಂತದ ಆರ್ಥಿಕತೆಗಳು ಸ್ಥಗಿತಗೊಳ್ಳುತ್ತಿವೆ ಮತ್ತು ವ್ಯವಹಾರವನ್ನು ಹಠಾತ್ತನೆ ಸ್ಥಗಿತಗೊಳಿಸುವುದರಿಂದ ಗಂಭೀರ ಆರ್ಥಿಕ ಹಾನಿ ಉಂಟಾಗುತ್ತದೆ ಎಂದು ಅದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT