ವಾಣಿಜ್ಯ

ಮಣಿಪಾಲ್ ಹಾಸ್ಪಿಟಲ್ಸ್​ ತೆಕ್ಕೆಗೆ ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್

Lingaraj Badiger

ನವದೆಹಲಿ: ಭಾರತದಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಖಚಿತ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಣಿಪಾಲ್ ಹಾಸ್ಪಿಟಲ್ಸ್ ಸೋಮವಾರ ತಿಳಿಸಿದೆ.

ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ಅನ್ನು ಮಣಿಪಾಲ್ ಹಾಸ್ಪಿಟಲ್ಸ್ ಬರೋಬ್ಬರಿ 2,000 ಕೋಟಿ ರೂ. ಗೆ ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್(ಕೊಲಂಬಿಯಾ ಏಷ್ಯಾ)ನ ಶೇ. 100 ರಷ್ಟು ಪಾಲನ್ನು ಖರೀದಿಸಲು ಕಂಪನಿ ಉದ್ದೇಶಿಸಿದೆ. ಈ ಸಂಬಂಧ ಈಗಾಗಲೇ ರೆಗುಲೇಟರಿ ಅಪ್ರೂವಲ್ ಗಳನ್ನು ಪಡೆದುಕೊಂಡಿದ್ದು, ಉಳಿದ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ ಎಂದು ಮಣಿಪಾಲ್ ಹಾಸ್ಪಿಟಲ್ಸ್  ಪ್ರಕಟಣೆಯಲ್ಲಿ ತಿಳಿಸಿದೆ.

ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳನ್ನು ಮಣಿಪಾಲ್ ಕುಟುಂಬಕ್ಕೆ ಸ್ವಾಗತಿಸಲು ತುಂಬಾ ಸಂತೋಷವಾಗುತ್ತಿದೆ ಮತ್ತು ಹಲವು ವರ್ಷಗಳ ಕಾಲ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಿದ ಕೊಲಂಬಿಯಾ ಆಸ್ಪತ್ರೆಯ ಸಾಧನೆಯನ್ನು ನಾವು ಪರಿಗಣಿಸುತ್ತೇವೆ ಎಂದು ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಗ್ರೂಪ್(ಎಂಇಎಂಜಿ) ಅಧ್ಯಕ್ಷ ರಂಜನ್ ಪೈ ಹೇಳಿದ್ದಾರೆ.

SCROLL FOR NEXT