ವಾಣಿಜ್ಯ

ಡಿಜಿಟಲ್ ಪಾವತಿ ವ್ಯವಸ್ಥೆ 'ಇ-ರೂಪಿ'ಗೆ ಪ್ರಧಾನಿ ಮೋದಿ ಚಾಲನೆ

Lingaraj Badiger

ನವದೆಹಲಿ: ದೇಶದಲ್ಲಿ ನಗದು ರಹಿತ ವಹಿವಾಟು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇವುಗಳನ್ನು ಮತ್ತಷ್ಟು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಮತ್ತೊಂದು ಹೊಸ ಕಾರ್ಯಕ್ರಮ ಆರಂಭಿಸಿದೆ.

ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆ ಇ- ರುಪಿ(E-RUPI))ಗೆ ಚಾಲನೆ ನೀಡಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಮೋದಿ, ಭಾರತದಲ್ಲಿ ಡಿಜಿಟಲ್ ಪಾವತಿಗಳ ಪ್ರಕ್ರಿಯೆಯನ್ನು ವಿಸ್ತರಿಸುವುದರ ಜೊತೆಗೆ ಮಧ್ಯವರ್ತಿ ಸಾಧನಗಳ ಅವಶ್ಯಕತೆಯನ್ನು ತಗ್ಗಿಸುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ. ಈ ವ್ಯವಸ್ಥೆ ನ್ಯಾಷನಲ್ ಪೇಮೆಂಟ್ಸ್ ಆಫ್ ಇಂಡಿಯಾ, ಆರ್ಥಿಕ ಸಚಿವಾಲಯ, ಆರೋಗ್ಯ ಸಚಿವಾಲಯ, ನ್ಯಾಷನಲ್‌ ಹೆಲ್ತ್‌ ಅಥಾರಿಟಿ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಲಾಗಿದೆ ಎಂದರು.

ಇ- ರುಪಿ ಎಂದರೇನು..?
ಡಿಜಿಟಲ್ ಪಾವತಿಗಳನ್ನು ಸುಲಭಗೊಳಿಸಲು ಇ- ರುಪಿಯನ್ನು ತರಲಾಗಿದೆ. ಸುರಕ್ಷತೆ, ಭದ್ರತೆ ಆಧಾರದ ಮೇಲೆ ಇ -ರುಪಿ ಬಳಕೆಗೆ ಲಭ್ಯವಾಗಲಿದೆ. ಇ-ರುಪಿ ವಿಧಾನದಲ್ಲಿ ಗ್ರಾಹಕರ ವಿವರಗಳು ಗೋಪ್ಯವಾಗಿರುತ್ತವೆ. ಕ್ಯೂ ಆರ್ ಕೋಡ್, ಎಸ್ ಎಂ ಎಸ್ ಸ್ಟ್ರಿಂಗ್ ಓಚರ್‌ ಗಳನ್ನು ಗ್ರಾಹಕರಿಗೆ ಕಳುಹಿಸುವ ಮೂಲಕ ಪಾವತಿಗಳು ನಡೆಯುತ್ತವೆ. ಬ್ಯಾಂಕ್ ಖಾತೆಗಳು, ಕಾರ್ಡುಗಳು, ಆಪ್‌ಗಳೊಂದಿಗೆ ಸಂಬಂಧವಿಲ್ಲದೆ ಗ್ರಾಹಕರು ವಹಿವಾಟು ನಡೆಸಬಹುದು. ಇದರ ಮತ್ತೊಂದು ಉದ್ದೇಶ ಏನೆಂದರೆ ಕಾರ್ಡ್, ಪೇಮೆಂಟ್ ಆಪ್, ಇಂಟರ್ನೆಟ್ ಬ್ಯಾಂಕಿಂಗ್ ಇಲ್ಲದೆ ಪಾವತಿಗಳನ್ನು ಮಾಡಬಹುದು. ಪ್ರಸ್ತುತ 8 ಬ್ಯಾಂಕುಗಳ ಮೂಲಕ ಇ-ರುಪಿ ಸೇವೆಗಳು ಲಭ್ಯವಾಗಲಿವೆ.

SCROLL FOR NEXT