ನವದೆಹಲಿ: ದೂರಸಂಪರ್ಕ ಇಲಾಖೆ (Department of Telecommunications- DoT) ನೂತನ ಆದೇಶ ಹೊರಡಿಸಿದ್ದು, ಅದರನ್ವಯ 9ಕ್ಕಿಂತ ಹೆಚ್ಚು ಸಿಮ್ ಕಾರ್ಡುಗಳನ್ನು ಹೊಂದಿದ್ದರೆ ಹೆಚ್ಚುವರಿ ಸಿಮ್ ಗಳನ್ನು ಡೀಆಕ್ಟಿವೇಟ್ ಮಾಡಲಾಗುವುದು.
ಜಮ್ಮು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ 6ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಇದ್ದರೆ ರದ್ದಾಗುವುದು.
ಈ ಬಗ್ಗೆ ದೂರಸಂಪರ್ಕ ಇಲಾಖೆ ಸ್ಥೂಲ ಪರಿಶೀಲನೆ ನಡೆಸಲಿದ್ದು, ಯಾರೇ ಒಬ್ಬ ವ್ಯಕ್ತಿ ವಿವಿಧ ಟೆಲಿಕಾಂ ಸಂಸ್ಥೆಗಳಿಗೆ ಸೇರಿದ ಒಟ್ಟು 9ಕ್ಕೂ ಹೆಚ್ಚು ಸಿಮ್ ಕಾರ್ಡ್ ಹೊಂದಿರುವುದು ಪತ್ತೆಯಾದರೆ ಎಲ್ಲಾ ಸಿಮ್ ಕಾರ್ಡ್ ಸಂಪರ್ಕವನ್ನು ರೀವೆರಿಫಿಕೇಶನ್ ಮಾಡಬೇಕಾಗಿ ಬರಲಿದೆ.
ಇದನ್ನೂ ಓದಿ: 'ಗೂಗಲ್ ಪೇ, ಫೋನ್ ಪೇಗಳು ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿವೆ, ಈಗಲಾದರೂ ಎಚ್ಚೆತ್ತುಕೊಳ್ಳಿ': ಉದಯ್ ಕೋಟಕ್
ರೀವೆರಿಫಿಕೇಶನ್ ಪ್ರಕ್ರಿಯೆಯಲ್ಲಿ ಚಂದಾದಾರರು ತಮಗೆ ಅಗತ್ಯವಿರುವ ಸಿಮ್ ಕಾರ್ಡ್ ಉಳಿಸಿಕೊಂಡು ಅಗತ್ಯ ಇಲ್ಲದೇ ಇರುವ ಸಿಮ್ ಕಾರ್ಡನ್ನು ಡೀಆಕ್ಟಿವೇಟ್ ಮಾಡುವ ಆಯ್ಕೆ ಲಭ್ಯವಾಗಲಿದೆ.
ಇದನ್ನೂ ಓದಿ: ನಿಮ್ಗೆ ಗೊತ್ತಿಲ್ಲದೆ ನಿಮ್ಮ ಮೊಬೈಲ್ ಕ್ಯಾಮೆರಾ ಆನ್ ಆಗುತ್ತೆ! ಫೋಟೋ ತೆಗೆಯುತ್ತೆ: ಈ ಆ್ಯಪ್ ಬಗ್ಗೆ ಹುಷಾರಾಗಿರಿ!