ಪೇಟಿಎಂ ಆಪ್ 
ವಾಣಿಜ್ಯ

ಎರಡನೇ ಬಾರಿ ಪೇಟಿಎಂ ಷೇರುಗಳು ತೀವ್ರ ಕುಸಿತ, ಹೂಡಿಕೆದಾರರಿಗೆ 55 ಸಾವಿರ ಕೋಟಿ ರೂಪಾಯಿ ನಷ್ಟ!

ಸೋಮವಾರದಂದು (ನ.22) ರಂದು ಪೇಟಿಎಂ ಷೇರುಗಳು ಎರಡನೇ ಬಾರಿಗೆ ತೀವ್ರ ಕುಸಿತ ಕಂಡಿದ್ದು, ಎರಡು ಸೆಷನ್ ಗಳಲ್ಲಿ ಹೂಡಿಕೆದಾರರಿಗೆ ಒಟ್ಟು 55,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. 

ಮುಂಬೈ: ಸೋಮವಾರದಂದು (ನ.22) ರಂದು ಪೇಟಿಎಂ ಷೇರುಗಳು ಎರಡನೇ ಬಾರಿಗೆ ತೀವ್ರ ಕುಸಿತ ಕಂಡಿದ್ದು, ಎರಡು ಸೆಷನ್ ಗಳಲ್ಲಿ ಹೂಡಿಕೆದಾರರಿಗೆ ಒಟ್ಟು 55,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. 

ಷೇರು ಮಾರುಕಟ್ಟೆಯಲ್ಲಿ ಒನ್ 97 ಕಮ್ಯುನಿಕೇಷನ್ಸ್ ಎಂದು ಪಟ್ಟಿಯಾಗಿರುವ ಪೇಟಿಎಂ ನ ಷೇರುಗಳು ಮಧ್ಯಾಹ್ನ 12.01 ರ ವೇಳೆಗೆ ಶೇ.17 ರಷ್ಟು ಕುಸಿದಿದ್ದು, ಬಿಎಸ್ಇ ಯಲ್ಲಿ ಈ ಹಿಂದಿನ ಮುಕ್ತಾಯದ ಅವಧಿಯಲ್ಲಿ ರೂಪಾಯಿ 1,564.15 ಕ್ಕೆ ಷೇರುಗಳ ಮೌಲ್ಯ 1,289 ಕ್ಕೆ ಕುಸಿದಿತ್ತು. 

ಸಂಸ್ಥೆಯ ಮಾರುಕಟ್ಟೆ ಕ್ಯಾಪ್ ಈಗ 85,000 ಕೋಟಿ ರೂಪಾಯಿಗಿಂತ ಕೆಳಗೆ ಕುಸಿದಿದೆ. ಷೇರುಗಳು ವಿನಿಮಯ ಕೇಂದ್ರಕ್ಕೆ ಬರುವುದಕ್ಕಿಂತಲೂ ಮುಂಚೆ ಎಂ-ಕ್ಯಾಪ್ 1.39 ಲಕ್ಷ ಕೋಟಿಯಷ್ಟಿತ್ತು. 

ಈ ಕುಸಿತದ ಮೂಲಕ ಪೇಟಿಎಂ ನ ಷೇರುಗಳು, ಐಪಿಒ ವಿತರಣೆ ಬೆಲೆಯಾದ 2,150 ರೂಪಾಯಿಗಳಿಗೆ ಹೋಲಿಕೆ ಮಾಡಿದಲ್ಲಿ ಶೇ.40 ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ. ವಾರಾಂತ್ಯದಲ್ಲಿ ಪೇಟಿಎಂ ನ ಒಟ್ಟು ವ್ಯಾಪಾರದ ಮೌಲ್ಯ (ಅಥವಾ ಈ ವೇದಿಕೆಯ ಮೂಲಕ ನಡೆದ ವಹಿವಾಟು) ಶೇ.131 ರಷ್ಟು-11.2 ಬಿಲಿಯನ್ ಡಾಲರ್ ಗೆ ಏರಿಕೆಯಾಗಿರುವುದರ ಹೊರತಾಗಿಯೂ ಷೇರು ಮಾರುಕಟ್ಟೆಯಲ್ಲಿ ಈ ಕುಸಿತ ದಾಖಲಾಗಿದೆ. 

ಪೇಟಿಎಂ ನ ಮಾಸಿಕ ವಹಿವಾಟು ಬಳಕೆದಾರರು (ಎಂಟಿಯು) ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಶೇ.25 ರಷ್ಟು ಬೆಳವಣಿಗೆಯಾಗಿದೆ ಎಂದು ಪೇಟಿಎಂ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!

'ಯಾರು ಚಿತ್ರೀಕರಿಸುತ್ತಿದ್ದರು?': ಜಮುಯಿ ದುರಂತಕ್ಕೆ ವಿಪಕ್ಷಗಳೇ ಕಾರಣ-ಬಿಜೆಪಿ ಸಚಿವ

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಬಿಹಾರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ? ಮಂದಾರ್ ಬೆಟ್ಟದಲ್ಲಿ ಯುವತಿಗೆ ಕಾಮುಕರಿಂದ ಕಿರುಕುಳ; ಒಂದೇ ವಾರದಲ್ಲಿ 3ನೇ ಪ್ರಕರಣ..!

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!