ವಾಣಿಜ್ಯ

2ನೇ ತ್ರೈಮಾಸಿಕ ಜಿಡಿಪಿ: ಭಾರತದ ಆರ್ಥಿಕತೆ ಜುಲೈ-ಸೆಪ್ಟೆಂಬರ್‌ನಲ್ಲಿ ಶೇ.8.4 ರಷ್ಟು ಬೆಳವಣಿಗೆ

Lingaraj Badiger

ನವದೆಹಲಿ: ಭಾರತದ ಜಿಡಿಪಿಯು 2021-22ರ ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 8.4 ರಷ್ಟು  ಬೆಳವಣಿಗೆ ಸಾಧಿಸಿದ್ದು,  ದೇಶದ ಆರ್ಥಿಕತೆಯು ಕೋವಿಡ್ ಪೂರ್ವದ ಮಟ್ಟವನ್ನು ಮೀರಿದೆ ಎಂದು ಸರ್ಕಾರದ ಅಧಿಕೃತ ಅಂಕಿ-ಅಂಶಗಳು ಮಂಗಳವಾರ ತಿಳಿಸಿವೆ.

ರಾಷ್ಟ್ರೀಯ ಅಂಕಿ-ಅಂಶ ಕಚೇರಿ(NSO) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಕಚ್ಚಾತೈಲದ ಉತ್ಪಾದನೆಯಲ್ಲಿ ಶೇಕಡಾ 2.2 ರಷ್ಟು ಬೆಳವಣಿಗೆ ಕುಸಿತವಾಗಿದೆ. ಆದರೆ ಎಂಟು ಮೂಲಸೌಕರ್ಯ ವಲಯಗಳಲ್ಲಿ ಒಟ್ಟಾರೆ ಶೇಕಡಾ 7.4 ರಷ್ಟು ಬೆಳವಣಿಗೆ ಆಗಿದೆ.

ಇನ್ನು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಉಕ್ಕಿನ ಕ್ಷೇತ್ರದಲ್ಲಿ ಶೇಕಡಾ 0.9 ರಷ್ಟು ಬೆಳವಣಿಗೆ ಆಗಿದ್ದರೆ, ಸಿಮೆಂಟ್ ವಲಯದಲ್ಲಿ ಶೇ 14.5 ರಷ್ಟು, ಕಲ್ಲಿದ್ದಲು ಶೇ. ‌14.6 ರಷ್ಟು ಏರಿಕೆ ಆಗಿದೆ.

ಅಧಿಕೃತ ಬಿಡುಗಡೆಯ ಪ್ರಕಾರ, ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕವು ಅಕ್ಟೋಬರ್ 2021ರಲ್ಲಿ 136.2 ರಷ್ಟಿದೆ. ಕಲ್ಲಿದ್ದಲು, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಹೆಚ್ಚಾಗಿದೆ.

SCROLL FOR NEXT