ಸಾಂದರ್ಭಿಕ ಚಿತ್ರ 
ವಾಣಿಜ್ಯ

ಕ್ವಾರ್ಟರ್ 2 ವರದಿ: 2,112 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದ ಮಾರುತಿ ಸುಜುಕಿ

ಪ್ರಮುಖ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ತನ್ನ ಕ್ವಾರ್ಟರ್ 2 ವರದಿ ಬಿಡುಗಡೆ ಮಾಡಿದ್ದು, ಸಂಸ್ಥೆಯು 2,112 ಕೋಟಿ ರೂ ನಿವ್ವಳ ಲಾಭ ದಾಖಲಿಸಿದೆ ಎನ್ನಲಾಗಿದೆ.

ನವದೆಹಲಿ: ಪ್ರಮುಖ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ತನ್ನ ಕ್ವಾರ್ಟರ್ 2 ವರದಿ ಬಿಡುಗಡೆ ಮಾಡಿದ್ದು, ಸಂಸ್ಥೆಯು 2,112 ಕೋಟಿ ರೂ ನಿವ್ವಳ ಲಾಭ ದಾಖಲಿಸಿದೆ ಎನ್ನಲಾಗಿದೆ.

ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 2,112 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ನಾಲ್ಕುಪಟ್ಟು ಹೆಚ್ಚಳ ಕಂಡುಬಂದಿದೆ.

ಹಿಂದಿನ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 487 ಕೋಟಿ ರೂ ನಿವ್ವಳ ಲಾಭ ದಾಖಲಿಸಿತ್ತು. ಈ ಅಂಕಿಅಂಶಗಳಿಗೆ ಹೋಲಿಕೆ ಮಾಡಿದರೆ ಹಾಲಿ ಲಾಭಾಂಶ ನಾಲ್ಕು ಪಟ್ಟು ಹೆಚ್ಚು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಸಂಸ್ಥೆಯ ಕಾರ್ಯಾಚರಣಾ ವರಮಾನವು 20,550 ಕೋಟಿಯಿಂದ 29,942 ಕೋಟಿ ರೂಗಳಿಗೆ ಅಂದರೆ ಶೇ.46ರಷ್ಟು ಏರಿಕೆಯಾಗಿದೆ. ಮಾರಾಟ ಪ್ರಮಾಣವು ದಾಖಲೆ ಪ್ರಮಾಣದಲ್ಲಿ ಹೆಚ್ಚಳ ಆಗಿರುವುದೇ ಇದಕ್ಕೆ ಕಾರಣ ಎಂದು ಕಂಪನಿ ತಿಳಿಸಿದೆ. 

ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು 5.17 ಲಕ್ಷ ವಾಹನಗಳನ್ನು ಮಾರಾಟ ಮಾಡಿದ್ದು, ತ್ರೈಮಾಸಿಕವೊಂದರಲ್ಲೇ ಆಗಿರುವ ಗರಿಷ್ಠ ಮಾರಾಟ ಇದಾಗಿದೆ. ವಾಹನಗಳ ದೇಶಿ ಮಾರಾಟ 4.54 ಲಕ್ಷ, ರಫ್ತು 63,195ಕ್ಕೆ ತಲುಪಿದೆ ಎಂದು ಕಂಪನಿ ತಿಳಿಸಿದೆ.

ಅಗ್ಗದ ಕಾರುಗಳನ್ನು ಮಾರಾಟ ಮಾಡಲು ಹೆಸರುವಾಸಿಯಾಗಿರುವ ಮಾರುತಿ ಸಂಸ್ಥೆ, ಹೆಚ್ಚಿನ ಸರಕುಗಳ ಬೆಲೆಗಳಿಂದಾಗಿ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚವನ್ನು ಸರಿದೂಗಿಸಲು ವಾಹನಗಳ ಬೆಲೆಯನ್ನು ಹೆಚ್ಚಿಸುತ್ತಿದೆ. ದೆಹಲಿ ಮೂಲದ ಈ ವಾಹನ ತಯಾರಕ ಸಂಸ್ಥೆಯು ಏಪ್ರಿಲ್‌ನಲ್ಲಿ ತನ್ನ ಎಲ್ಲ ಮಾದರಿಗಳಾದ್ಯಂತ ಸರಾಸರಿ 1.3% ರಷ್ಟು ಬೆಲೆ ಏರಿಕೆಯನ್ನು ಘೋಷಿಸಿತ್ತು. ಅದಾಗ್ಯೂ ನಿವ್ವಳ ಲಾಭಾಂಶದಲ್ಲಿ ಏರಿಕೆ ಕಂಡುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ಇರಾನ್ ಮೇಲಿನ ಯುದ್ಧ ಇನ್ನು 4-5 ವಾರಗಳ ಕಾಲ ನಡೆಯಲಿದೆ- ಡೊನಾಲ್ಡ್ ಟ್ರಂಪ್

ಇದು ಅಂತ್ಯವಿಲ್ಲದ ಯುದ್ಧವಲ್ಲ; ಯುದ್ಧ ಶುರು ಮಾಡಿದ್ದು ಇರಾನ್, ನಾವು ಮುಗಿಸುತ್ತೇವೆ: ಅಮೆರಿಕ ರಕ್ಷಣಾ ಕಾರ್ಯದರ್ಶಿ!

ನೆತನ್ಯಾಹು ಹತ್ಯೆ? ಶಕ್ತಿಶಾಲಿ ಖೈಬರ್ ಬ್ಯಾಲಿಸ್ಟಿಕ್ ಕ್ಷಿಪಣಿ ಮೂಲಕ ಇಸ್ರೇಲ್ ಪ್ರಧಾನಿ ಕಚೇರಿ ಮೇಲೆ ದಾಳಿ; ಇರಾನ್ ಹೇಳಿಕೆ

Iran vs Israel: 'ಇರಾನ್ ದುರಾಡಳಿತ ಅಂತ್ಯಕ್ಕೆ ಮುಹೂರ್ತ ಫಿಕ್ಸ್', 'ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ': ಇಸ್ರೇಲ್ ಪ್ರಧಾನಿ ನೇತನ್ಯಾಹು!

ಬಹ್ರೇನ್ ರಾಜ, ಸೌದಿ ಕ್ರೌನ್ ಪ್ರಿನ್ಸ್ ಜತೆ ಪ್ರಧಾನಿ ಮೋದಿ ಮಾತುಕತೆ; ಇರಾನ್ ದಾಳಿ ಖಂಡಿಸಿದ ಭಾರತ

SCROLL FOR NEXT