ವಾಣಿಜ್ಯ

2023 ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತ, ಚೀನಾ ಅರ್ಧದಷ್ಟು ಕೊಡುಗೆ: ಐಎಂಎಫ್

Nagaraja AB

ವಾಷಿಂಗ್ಟನ್: 2023 ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯ ಅರ್ಧದಷ್ಟು ಭಾಗವನ್ನು ಭಾರತ ಮತ್ತು ಚೀನಾ ಹೊಂದುವ ನಿರೀಕ್ಷೆಯಿದ್ದು, ಈ ವರ್ಷ ವಿಶ್ವ ಆರ್ಥಿಕತೆಯು ಶೇಕಡಾ 3 ಕ್ಕಿಂತ ಕಡಿಮೆ ಬೆಳವಣಿಗೆಯಾಗುವ ನಿರೀಕ್ಷೆಯಿದೆ ಎಂದು ಐಎಂಎಫ್ ಮುಖ್ಯಸ್ಥರು ಗುರುವಾರ ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಮತ್ತು ಉಕ್ರೇನ್‌ ಮೇಲಿನ ರಷ್ಯಾದ ಮಿಲಿಟರಿ ಆಕ್ರಮಣದಿಂದಾಗಿ ಕಳೆದ ವರ್ಷಉಲ್ಬಣಗೊಂಡ ಜಾಗತಿಕ ಆರ್ಥಿಕತೆಯಲ್ಲಿನ ತೀವ್ರ ಕುಸಿತ ಈ ವರ್ಷವೂ ಮುಂದುವರಿಯುತ್ತದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಎಚ್ಚರಿಸಿದ್ದಾರೆ.

ಕಳೆದ ವರ್ಷ ವಿಶ್ವ ಆರ್ಥಿಕತೆ ಶೇ. 3.4ಕ್ಕಿಂತ ಕಡಿಮೆಯಾಗಿದ್ದು, ಜಾಗತಿಕ ಹಸಿವು ಮತ್ತು ಬಡತನದ ಅಪಾಯವನ್ನು ಹೆಚ್ಚಿಸುತ್ತಿದೆ. ನಿಧಾನಗತಿಯ ಆರ್ಥಿಕ ಚಟುವಟಿಕೆಯ ಅವಧಿಯು ದೀರ್ಘವಾಗಿರುತ್ತದೆ, ಮುಂದಿನ ಐದು ವರ್ಷಗಳ ಬೆಳವಣಿಗೆಯು ಶೇಕಡಾ 3 ರಷ್ಟಿದೆ ಇರಲಿದೆ.

ಇದು 1990 ರಿಂದ ನಮ್ಮ ಅತ್ಯಂತ ಕಡಿಮೆ ಮಧ್ಯಮ-ಅವಧಿಯ ಬೆಳವಣಿಗೆಯ ಮುನ್ಸೂಚನೆ ಎಂದು ಕರೆದಿರುವ ಕ್ರಿಸ್ಟಲಿನಾ ಜಾರ್ಜಿವಾ,ಕಳೆದ ಎರಡು ದಶಗಳಲ್ಲಿ ಸರಾಸರಿ  ಶೇ. 3.8ಕ್ಕಿಂತ  ಕಡಿಮೆಯಾಗಿದೆ. ಭಾರತ ಮತ್ತು ಚೀನಾ 2023 ರಲ್ಲಿ ಜಾಗತಿಕ ಬೆಳವಣಿಗೆಯ ಅರ್ಧದಷ್ಟು ಭಾಗವನ್ನು ಹೊಂದುವ ನಿರೀಕ್ಷೆಯಿದೆ. ಆದರೆ ಇತರರು ಇನ್ನೂ ಸಂಕಷ್ಟದಲ್ಲಿರುವುದಾಗಿ  ಅವರು ವಿವರಿಸಿದರು. 

2021 ರಲ್ಲಿ ಆರ್ಥಿಕ ಚೇತರಿಕೆಯ ನಂತರ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದ ಅದರ ವ್ಯಾಪಕ ಪರಿಣಾಮಗಳು "2022 ರಲ್ಲಿ ಜಾಗತಿಕ ಬೆಳವಣಿಗೆಯು ಸುಮಾರು ಅರ್ಧದಷ್ಟು ಅಂದರೆ ಶೇ. 6.1 ರಿಂದ 3.4 ಕ್ಕೆ ಕುಸಿತಕ್ಕೆ ಕಾರಣವಾಗಿದೆ. 

SCROLL FOR NEXT