ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಗಗನಕ್ಕೇರಿದ್ದ ಚಿನ್ನದ ದರದಲ್ಲಿ ಇಳಿಕೆ: ಇಂದಿನ ದರ ಪಟ್ಟಿ ಹೀಗಿದೆ

ಗಗನಕ್ಕೇರಿದ್ದ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದು, ರಾಜ್ಯದಲ್ಲಿ ಬಂಗಾರದ ಧಾರಣೆಯ ಇಂದಿನ ದರ ಇಂತಿದೆ.

ಚಿನ್ನದ ದರ (ಸಂಗ್ರಹ ಚಿತ್ರ)
Srinivasa Murthy VN
Updated On : 6 Dec 2023, 2:11 pm

ಬೆಂಗಳೂರು: ಗಗನಕ್ಕೇರಿದ್ದ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದು, ರಾಜ್ಯದಲ್ಲಿ ಬಂಗಾರದ ಧಾರಣೆಯ ಇಂದಿನ ದರ ಇಂತಿದೆ.

22 ಕ್ಯಾರೆಟ್‌ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, 22 ಕ್ಯಾರೆಟ್ ಚಿನ್ನದಲ್ಲಿ 40 ರೂ ಮತ್ತು 24 ಕ್ಯಾರೆಟ್ ಚಿನ್ನದ ದರದಲ್ಲಿ 44ರೂ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನ 5745ರೂ ದರದಲ್ಲಿದ್ದು, ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ 6,267 ಆಗಿದೆ.

ಇದನ್ನೂ ಓದಿ: ಸಾರ್ವಕಾಲಿಕ ದಾಖಲೆ ಕಂಡ ಷೇರು ಮಾರುಕಟ್ಟೆ: ಸೆನ್ಸೆಕ್ಸ್, ನಿಫ್ಟಿ ಜಿಗಿತ

Advertisement

Advertisement

ಒಂದು ಗ್ರಾಂ ಬೆಳ್ಳಿಯ ಬೆಲೆ 77.25 ರೂನಷ್ಟಿದ್ದು, ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ಅನಿಶ್ಚಿತತೆಯ ಸಮಯದಲ್ಲಿ, ಚಿನ್ನವನ್ನು ಸುರಕ್ಷಿತ ಆಸ್ತಿಯಾಗಿ ನೋಡಲಾಗುತ್ತದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಅಮೆರಿಕ ಡಾಲರ್ ದುರ್ಬಲತೆ ಮತ್ತು ಅಮೆರಿಕ ಖಜಾನೆ ಇಳುವರಿಯಲ್ಲಿ ಇಳಿಕೆಯ ನಡುವೆ ಕಳೆದೊಂದು ವಾರದಿಂದ ಚಿನ್ನದ ಬೆಲೆಯಲ್ಲಿ ಜಿಗಿತ ಕಂಡುಬಂದಿತ್ತು.

ಇದನ್ನೂ ಓದಿ: ಚಿನ್ನದ ಬೆಲೆ ದಿಢೀರ್ ಏರಿಕೆ: ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹ, ಇಂದಿನ ದರ ಪಟ್ಟಿ ಇಂತಿದೆ

ಜಾಗತಿಕ ಆರ್ಥಿಕತೆಯಲ್ಲಿನ ಮಂದಗತಿಗೆ ಸಂಬಂಧಿಸಿದ ಕಳವಳಗಳ ನಡುವೆಯೇ, ಸುರಕ್ಷಿತ ಆಸ್ತಿಯ ಚಿನ್ನದ ಮೇಲೆ ಹೂಡಿಕೆದಾರರ ಆಸಕ್ತಿ ಹೆಚ್ಚಿದೆ. ಇದೀಗ ಅಲ್ಪ ಪ್ರಮಾಣದಲ್ಲಿ ದರ ಇಳಿಕೆಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement