ವಾಣಿಜ್ಯ

ಮಾಧ್ಯಮ ಕ್ಷೇತ್ರದಲ್ಲಿ ಅದಾನಿ ಸಮೂಹ ಹೂಡಿಕೆ ವಿಸ್ತರಣೆ: ಐಎಎನ್ಎಸ್ ಸುದ್ದಿಸಂಸ್ಥೆಯ ಹೆಚ್ಚಿನ ಪಾಲು ಖರೀದಿ

Sumana Upadhyaya

ನವದೆಹಲಿ: ಬಿಲಿಯನೇರ್ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆಯು ಸುದ್ದಿ ಸಂಸ್ಥೆ ಐಎಎನ್‌ಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಬಹುಪಾಲು ಷೇರನ್ನು ಬಹಿರಂಗಪಡಿಸದ ಮೊತ್ತಕ್ಕೆ ಖರೀದಿಸಿದ್ದು, ಸಮೂಹವು ಮಾಧ್ಯಮ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿದೆ.

ನಿಯಂತ್ರಕ ಸಲ್ಲಿಕೆಯಲ್ಲಿ, ಅದಾನಿ ಎಂಟರ್‌ಪ್ರೈಸಸ್ ಸಮೂಹದ ಮಾಧ್ಯಮ ಆಸಕ್ತಿಯನ್ನು ಹೊಂದಿರುವ ಸಂಸ್ಥೆ, ಅದರ ಅಂಗಸಂಸ್ಥೆ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ ಐಎಎನ್‌ಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಈಕ್ವಿಟಿ ಷೇರುಗಳನ್ನು ಒಳಗೊಂಡಿರುವ ಶೇಕಡಾ 50. 50 ಪಾಲನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ. ಆದರೆ ಕಂಪೆನಿಯು ಸ್ವಾಧೀನದ ಬೆಲೆಯನ್ನು ಬಹಿರಂಗಪಡಿಸಲಿಲ್ಲ.

ಕಳೆದ ವರ್ಷ ಮಾರ್ಚ್‌ನಲ್ಲಿ ಸುದ್ದಿ ಡಿಜಿಟಲ್ ಮಾಧ್ಯಮ ಪ್ಲಾಟ್‌ಫಾರ್ಮ್ BQ ಪ್ರೈಮ್ ನ್ನು ನಿರ್ವಹಿಸುವ ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅದಾನಿ ಸಂಸ್ಥೆ ಮಾಧ್ಯಮ ವ್ಯವಹಾರಕ್ಕೆ ಪ್ರವೇಶಿಸಿತ್ತು. ನಂತರ ಕಳೆದ ಡಿಸೆಂಬರ್‌ನಲ್ಲಿ ಎನ್ ಡಿಟಿವಿಯ ಸುಮಾರು ಶೇಕಡಾ 65ರಷ್ಟು ಪಾಲನ್ನು ತೆಗೆದುಕೊಂಡಿತು. AMNL ಈ ಸ್ವಾಧೀನಗಳಿಗೆ ವಾಹಕವಾಗಿದೆ.

ನಿಯಂತ್ರಕ ಸಲ್ಲಿಕೆಯಲ್ಲಿ ಸಂಸ್ಥೆಯು, ಐಎಎನ್‌ಎಸ್‌ಗೆ ಸಂಬಂಧಿಸಿದಂತೆ ತಮ್ಮ ಅಂತರ-ಸೇವಾ ಹಕ್ಕುಗಳನ್ನು ದಾಖಲಿಸಲು ಐಎಎನ್‌ಎಸ್ ಮತ್ತು ಐಎಎನ್‌ಎಸ್‌ನ ಷೇರುದಾರ ಸಂದೀಪ್ ಬಾಮ್‌ಜಾಯ್ ಜೊತೆ ಎಎಮ್‌ಎನ್‌ಎಲ್ ಷೇರುದಾರರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಹೇಳಲಾಗಿದೆ. 

2022-23 ಹಣಕಾಸು ವರ್ಷದಲ್ಲಿ (ಏಪ್ರಿಲ್ 2022 ರಿಂದ ಮಾರ್ಚ್ 2023) ಐಎಎನ್‌ಎಸ್ 11.86 ಕೋಟಿ ಆದಾಯವನ್ನು ಹೊಂದಿತ್ತು. ಐಎಎನ್ ಎಸ್ ನ ಎಲ್ಲಾ ಕಾರ್ಯಾಚರಣೆ ಮತ್ತು ನಿರ್ವಹಣೆಯ ನಿಯಂತ್ರಣವು AMNL ಜೊತೆಗೆ ಇರುತ್ತದೆ ಮತ್ತು AMNL ಐಎಎನ್ ಎಸ್ ನ ಎಲ್ಲಾ ನಿರ್ದೇಶಕರನ್ನು ನೇಮಿಸುವ ಹಕ್ಕನ್ನು ಹೊಂದಿರುತ್ತದೆ ಎಂದು ಸಲ್ಲಿಕೆಯಲ್ಲಿ ಹೇಳಲಾಗಿದೆ. 

ಮೊದಲ ತಲೆಮಾರಿನ ವಾಣಿಜ್ಯೋದ್ಯಮಿ, ಅದಾನಿ ಅವರು 1988 ರಲ್ಲಿ ಸರಕುಗಳ ವ್ಯಾಪಾರಿಯಾಗಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. 13 ಬಂದರುಗಳು ಮತ್ತು ಎಂಟು ವಿಮಾನ ನಿಲ್ದಾಣಗಳೊಂದಿಗೆ ಮೂಲಸೌಕರ್ಯದಲ್ಲಿ ಭಾರತದ ಅತಿದೊಡ್ಡ ಖಾಸಗಿ ಹೂಡಿಕೆದಾರರಾಗಿ ತಮ್ಮ ವ್ಯಾಪಾರ ಆಸಕ್ತಿಗಳನ್ನು ವಿಸ್ತರಿಸಿದರು. ಇಷ್ಟು ವರ್ಷಗಳಲ್ಲಿ ಕಲ್ಲಿದ್ದಲು, ಶಕ್ತಿ ವಿತರಣೆ, ದತ್ತಾಂಶ ಕೇಂದ್ರಗಳು ಮತ್ತು ಇತ್ತೀಚೆಗೆ ಸಿಮೆಂಟ್ ಮತ್ತು ತಾಮ್ರವನ್ನು ಉತ್ಪಾದಿಸುವಲ್ಲಿ ಅದಾನಿ ಸಂಸ್ಥೆ ಹೂಡಿಕೆ ವಿಸ್ತರಿಸಿತು. 

ಖಾಸಗಿ ನೆಟ್‌ವರ್ಕ್ ನ್ನು ಸ್ಥಾಪಿಸಲು 5G ಟೆಲಿಕಾಂ ಸ್ಪೆಕ್ಟ್ರಮ್ ನ್ನು ಬಿಡ್ಡಿಂಗ್ ನಲ್ಲಿ ಪಡೆದುಕೊಂಡಿದೆ.

SCROLL FOR NEXT