(ಸಾಂಕೇತಿಕ ಚಿತ್ರ) 
ವಾಣಿಜ್ಯ

ಏಪ್ರಿಲ್-ನವೆಂಬರ್ ವರೆಗೆ ಭಾರತೀಯ ಸಂಸ್ಥೆಗಳಿಂದ 5.06 ಲಕ್ಷ ಕೋಟಿ ರೂ. ಸಂಗ್ರಹ; ಸಾಲದ್ದೇ ಸಿಂಹಪಾಲು! 

ಭಾರತೀಯ ಕಂಪನಿಗಳು ಏಪ್ರಿಲ್-ನವೆಂಬರ್ ಅವಧಿಯಲ್ಲಿ ಈಕ್ವಿಟಿ ಹಾಗೂ ಸಾಲದ ಮಾರ್ಗಗಳಿಂದ 5.06 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.

ನವದೆಹಲಿ: ಭಾರತೀಯ ಕಂಪನಿಗಳು ಏಪ್ರಿಲ್-ನವೆಂಬರ್ ಅವಧಿಯಲ್ಲಿ ಈಕ್ವಿಟಿ ಹಾಗೂ ಸಾಲದ ಮಾರ್ಗಗಳಿಂದ 5.06 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದು, ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.8.5 ರಷ್ಟು ಕುಸಿತ ಎಂದು ಮಂಗಳವಾರ ಮಂಡನೆಯಾದ 2022-23 ನೇ ಸಾಲಿನ ಆರ್ಥಿಕ ಸಮೀಕ್ಷೆ ಮೂಲಕ ತಿಳಿದುಬಂದಿದೆ.

ಪ್ರಸಕ್ತ ವರ್ಷದಲ್ಲಿ ಹಣದ ಕ್ರೋಢೀಕರಣದಲ್ಲಿ ಸಾಲದ್ದೇ ಸಿಂಹಪಾಲು ಇದೆ, 2023 ನೇ ಆರ್ಥಿಕ ವರ್ಷ (ನವೆಂಬರ್ 2022 ವರೆಗೆ) ಸಂಗ್ರಹವಾಗಿರುವ 5.06 ಲಕ್ಷ ಕೋಟಿ ರೂಪಾಯಿಗಳ ಪೈಕಿ 3.92 ಲಕ್ಷ ಕೋಟಿ ರೂಪಾಯಿಗಳನ್ನು ಸಾಲದ ಮಾರುಕಟ್ಟೆಯಿಂದ ಪಡೆಯಲಾಗಿದೆ.  ಹಾಗೂ 1.14 ಲಕ್ಷ ಕೋಟಿ ರೂಪಾಯಿಗಳು ಈಕ್ವಿಟಿ ಮಾರ್ಗದ ಮೂಲಕ ಬಂದಿದೆ ಎಂದು ಸಮೀಕ್ಷೆಯಲ್ಲಿರುವ ಅಂಕಿ-ಅಂಶಗಳು ಹೇಳಿವೆ.

ಈಕ್ವಿಟಿಯಲ್ಲಿ 89,166 ಕೋಟಿ ರೂಪಾಯಿಗಳನ್ನು ಐಪಿಒಗಳ ಮೂಲಕ ಏಪ್ರಿಲ್-ನವೆಂಬರ್-2021 ರ ಅವಧಿಯಲ್ಲಿ ಸಂಗ್ರಹಿಸಲಾಗಿದೆ.

ಸಮೀಕ್ಷೆಯ ಪ್ರಕಾರ, ಸ್ಥೂಲ ಆರ್ಥಿಕ ಮತ್ತು ಹಣಕಾಸು ಮಾರುಕಟ್ಟೆಯ ಬೆಳವಣಿಗೆಗಳು ಕೆಲವು ಪ್ರಭಾವವನ್ನು ಬೀರಿದ್ದರ ಪರಿಣಾಮ ಭಾರತದ ಬಂಡವಾಳ ಮಾರುಕಟ್ಟೆ ಜಾಗತಿಕ  2023 ರಲ್ಲಿ ಉತ್ತಮವಾದ ವರ್ಷವನ್ನು ಕಂಡಿತ್ತು. 

ಜಾಗತಿಕ ಸ್ಥೂಲ ಆರ್ಥಿಕತೆಯ ಅಸ್ಥಿರತೆ, ಹಿಂದೆಂದೂ ಕಾಣದಂತಹ ಹಣದುಬ್ಬರ, ಬಿಗಿ ವಿತ್ತೀಯ ನೀತಿಯ, ಅಸ್ಥಿರ ಮಾರುಕಟ್ಟೆಗಳು ಹೂಡಿಕೆದಾರರ ಮೇಲಿನ ಭಾವನೆಗಳ ಮೇಲೆ ಪರಿಣಾಮ ಬೀರಿತ್ತು. ಇದರಿಂದಾಗಿ 2022-23 ನೇ ಆರ್ಥಿಕ ವರ್ಷದಲ್ಲಿ ಜಾಗತಿಕ ಆರ್ಥಿಕ ಮಾರುಕಟ್ಟೆಗಳು ಕೆಳಮಟ್ಟದ ಕಾರ್ಯಕ್ಷಮತೆ ಹೊಂದಿತ್ತು ಎಂದು ಸಮೀಕ್ಷೆ ಹೇಳಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT