ನವದೆಹಲಿ: ದೇಶದ ಅತಿ ದೊಡ್ಡ ಇಂಧನ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ರಿಲಾಯನ್ಸ್ ನ ಕೆಜಿ ಗ್ಯಾಸ್ ಗೆ ಅತಿ ದೊಡ್ಡ ಬಿಡ್ಡರ್ ಆಗಿ ಹೊರಹೊಮ್ಮಿದೆ.
ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಅದರ ಪಾಲುದಾರಿಕಾ ಸಂಸ್ಥೆ ಯುಕೆಯ ಬಿಪಿ ಇತ್ತೀಚೆಗೆ ನಡೆಸಿದ ಹರಾಜಿನಲ್ಲಿ ಅರ್ಧದಷ್ಟು ನೈಸರ್ಗಿಕ ಅನಿಲವನ್ನು ಪಡೆದಿದೆ. ಈ ಹರಾಜಿನಲ್ಲಿ ಲಭ್ಯವಾಗುವ ಇಂಧನವನ್ನು ವಿದ್ಯುತ್ ಉತ್ಪಾದನೆ, ಗೊಬ್ಬರ ಉತ್ಪಾದನೆ, ಸಿಎನ್ ಜಿಯನ್ನಾಗಿಸುವುದಕ್ಕೆ ಹಾಗೂ ಅಡುಗೆ ತಯಾರಿಕೆಗೆ ಬಳಕೆ ಮಾಡಲಾಗುತ್ತದೆ.
ಹರಾಜಿನಲ್ಲಿ ಐಒಸಿಗೆ ದಿನಂಪ್ರತಿ 2.5 ಮಿಲಿಯನ್ ಸ್ಟ್ಯಾಂಡರ್ಡ್ ಕ್ಯುಬಿಕ್ ಮೀಟರ್ಸ್ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ. ಕಳೆದ ಬಾರಿಯ ಹರಾಜಿನಲ್ಲಿ ಇಂಡಿಯನ್ ಆಯಿಲ್ ಅಗ್ರ ಬಿಡ್ಡರ್ ಆಗಿತ್ತು ಏಳು ರಸಗೊಬ್ಬರ ಸ್ಥಾವರಗಳ ಪರವಾಗಿ ಬಿಡ್ ಮಾಡಿತ್ತು.