ವಾಣಿಜ್ಯ

ತೀವ್ರ ಟೀಕೆಯ ನಂತರ 'ಮೊಟ್ಟೆ ಜಾಹೀರಾತು' ಫಲಕ ತೆಗೆದುಹಾಕಿದ ಸ್ವಿಗ್ಗಿ

Lingaraj Badiger

ನವದೆಹಲಿ: ಆಹಾರ ಡೆಲಿವರಿ ಸಂಸ್ಥೆ ಸ್ವಿಗ್ಗಿ ಹೋಳಿ ಹಬ್ಬಕ್ಕಾಗಿ ನೀಡಿದ್ದ ಮೊಟ್ಟೆಯ ಜಾಹೀರಾತು ಫಲಕಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ವರ್ಗದ ಜನರಿಂದ ತೀವ್ರ "ಆಕ್ರೋಶ" ವ್ಯಕ್ತವಾದ ನಂತರ ಅದನ್ನು ತೆಗೆದುಹಾಕಲಾಗಿದೆ. 

ಹೋಳಿ ಹಬ್ಬದ ವೇಳೆಯಲ್ಲಿ ತಲೆಯ ಮೇಲೆ ಮೊಟ್ಟೆ ಹೊಡೆಯದಿರಿ. ಆಮ್ಲೆಟ್‌ ಮಾಡಿಕೊಂಡು ತಿನ್ನಿರಿ ಎಂದು ಸ್ವಿಗ್ಗಿ ನೀಡಿದ್ದ ಜಾಹೀರಾತಿನ ವಿರುದ್ಧ #ಹಿಂದೂಪೊಬಿಕ್‌ಸ್ವಿಗ್ಗಿ(#HinduPhobicSwiggy) ಹ್ಯಾಷ್‌ ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು.

ತಕ್ಷಣ ಎಚ್ಚೆತ್ತುಕೊಂಡ ಸ್ವಿಗ್ಗಿ, ದೆಹಲಿ-ಎನ್‌ಸಿಆರ್‌ನಲ್ಲಿ ಹಾಕಲಾಗಿದ್ದ ವಿವಾದಿತ ಜಾಹೀರಾತು ಫಲಕಗಳನ್ನು ತೆಗೆದುಹಾಕಲಾಗಿದೆ ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಮೊಟ್ಟೆಗಳನ್ನು ಹೊಡೆಯಬೇಡಿ ಎಂದಿರುವುದು ಅನಗತ್ಯವಾಗಿದೆ. ಇದು ಹಿಂದೂ ವಿರೋಧಿ ನಿಲುವು ಎಂದು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಲಾಗಿತ್ತು.

“ಸ್ವಿಗ್ಗಿ, ನಿಮ್ಮ ಕ್ರಮಗಳು ಲಕ್ಷಾಂತರ ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಎಲ್ಲಾ ಹಬ್ಬಗಳಿಗೆ ಗೌರವವನ್ನು ತೋರಿಸಲು ಕಲಿಯಿರಿ ಮತ್ತು ಆಕ್ಷೇಪಾರ್ಹ ಜಾಹೀರಾತು ತೆಗೆದುಹಾಕಿ. ಹಿಂದೂಯೇತರ ಹಬ್ಬಗಳಲ್ಲಿ ಇಂತಹದ್ದನ್ನು ಏಕೆ ಮಾಡುವುದಿಲ್ಲ?” ಎಂದು ಪ್ರಶ್ನಿಸಲಾಗಿತ್ತು.

SCROLL FOR NEXT