ವಾಣಿಜ್ಯ

ರಜೆ ನಗದೀಕರಣ ಮೇಲಿನ ತೆರಿಗೆ ವಿನಾಯಿತಿ ಮಿತಿ 25 ಲಕ್ಷ ರೂ.ಗೆ ಹೆಚ್ಚಳ

Lingaraj Badiger

ನವದೆಹಲಿ: ಕೇಂದ್ರ ಸರ್ಕಾರ 2023-24ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದ್ದಕ್ಕೆ ಅನುಗುಣವಾಗಿ, ಹಣಕಾಸು ಸಚಿವಾಲಯ ಗುರುವಾರ ಖಾಸಗಿ ವಲಯದ ಸಂಬಳದ ಉದ್ಯೋಗಿಗಳಿಗೆ ನಿವೃತ್ತಿಯ ನಂತರ ಪಡೆಯುವ ರಜೆ ಎನ್‌ಕ್ಯಾಶ್‌ಮೆಂಟ್‌ಗೆ ನೀಡಲಾಗಿದ್ದ ತೆರಿಗೆ ವಿನಾಯಿತಿ ಮಿತಿಯನ್ನು 25 ಲಕ್ಷ ರೂ.ಗೆ ಹೆಚ್ಚಿಸಿದೆ.

ಇಲ್ಲಿಯವರೆಗೆ, ಸರ್ಕಾರೇತರ ಉದ್ಯೋಗಿಗಳಿಗೆ ರಜೆ ಎನ್‌ಕ್ಯಾಶ್‌ಮೆಂಟ್‌ ಮೇಲಿನ ತೆರಿಗೆ ವಿನಾಯಿತಿ ಮಿತಿ 3 ಲಕ್ಷ ರೂ. ಇತ್ತು. ಇದೀಗ ಅದನ್ನು 25 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.

ಸೆಕ್ಷನ್ 10(10AA)(ii) ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದ ಒಟ್ಟು ಮೊತ್ತವು 25 ಲಕ್ಷ ರೂಪಾಯಿ ಮೀರಬಾರದು ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್ 1, 2023 ರಿಂದ ಅನ್ವಯವಾಗುವಂತೆ ನಿವೃತ್ತಿ ಅಥವಾ ಸರ್ಕಾರೇತರ ಸಂಬಳದ ಉದ್ಯೋಗಿಗಳ ರಜೆ ಎನ್‌ಕ್ಯಾಶ್‌ಮೆಂಟ್ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 25 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.

'2023ರ ಬಜೆಟ್ ಭಾಷಣದಲ್ಲಿನ ಪ್ರಸ್ತಾವನೆಗೆ ಅನುಸಾರವಾಗಿ,... ಕೇಂದ್ರ ಸರ್ಕಾರವು ನಿವೃತ್ತಿ ಅಥವಾ ಸರ್ಕಾರೇತರ ವೇತನದಾರರ ಉದ್ಯೋಗಿಗಳ ರಜೆ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 25 ಲಕ್ಷ ರೂ.ಗೆ ಹೆಚ್ಚಿಸಿದೆ' ಎಂದು CBDT ತಿಳಿಸಿದೆ.

SCROLL FOR NEXT