ವಾಣಿಜ್ಯ

ಮತ್ತೆ ಪುಟಿದೆದ್ದ ಗೌತಮ್ ಅದಾನಿ: ಮತ್ತೊಮ್ಮೆ 100 ಬಿಲಿಯನ್ ಡಾಲರ್ ಕ್ಲಬ್‌ಗೆ ಸೇರ್ಪಡೆ!

Vishwanath S

ನವದೆಹಲಿ: ಹಿಂಡೆನ್‌ಬರ್ಗ್ ವರದಿಯ ನಂತರ ತೀವ್ರ ಕುಸಿತ ಕಂಡಿದ್ದ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಮತ್ತೆ ಪುನರಾಗಮನ ಮಾಡಿದ್ದಾರೆ. ಮತ್ತೊಮ್ಮೆ 100 ಬಿಲಿಯನ್ ಡಾಲರ್ ಕ್ಲಬ್ ಸೇರಿದ್ದಾರೆ. 2023ರಲ್ಲಿ ಹಿಂಡೆನ್‌ಬರ್ಗ್ ಸಂಶೋಧನೆಯ ಕುಸಿತದಿಂದಾಗಿ ಅವರ ಸಂಪತ್ತು 130 ಶತಕೋಟಿ ಡಾಲರ್ ನಿಂದ 50 ಶತಕೋಟಿ ಡಾಲರ್ ಕುಸಿಯಿತು.

ಅದಾನಿಯವರ ನಿವ್ವಳ ಮೌಲ್ಯವು 100.7 ಶತಕೋಟಿ ಡಾಲರ್ ಗೆ ಏರಿದೆ. ಬ್ಲೂಮ್‌ಬರ್ಗ್ ಸುದ್ದಿ ಸಂಸ್ಥೆ ಪ್ರಕಾರ, ಅವರು ವಿಶ್ವದ 12ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅದಾನಿ ಈ ವರ್ಷದ ಟಾಪ್ ಗೇನರ್‌ಗಳ ಪಟ್ಟಿಯಲ್ಲಿದ್ದಾರೆ. ಇದುವರೆಗೆ ಅವರ ಸಂಪತ್ತು 16.4 ಬಿಲಿಯನ್ ಡಾಲರ್ ಚೇತರಿಸಿಕೊಂಡಿದೆ.

ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ವಂಚನೆಯ ಆರೋಪದ ನಂತರ ಅದಾನಿ ಅವರ ಸಂಪತ್ತು 80 ಶತಕೋಟಿ ಡಾಲರ್ ಗಿಂತ ಹೆಚ್ಚು ಕುಸಿದಿತ್ತು. ಆದರೆ ನಂತರ ಅದು ಮತ್ತೆ ಹೆಚ್ಚಾಗಿದೆ. 2023ರಲ್ಲಿ ಮಾತ್ರ ಅದಾನಿ ಗ್ರೂಪ್ ತನ್ನ ಮಾರುಕಟ್ಟೆ ಕ್ಯಾಪ್ನಲ್ಲಿ 150 ಶತಕೋಟಿ ಡಾಲರ್ ಗಿಂತ ಹೆಚ್ಚು ಕಳೆದುಕೊಂಡಿದೆ. ಹೂಡಿಕೆದಾರರು ಮತ್ತು ಸಾಲದಾತರನ್ನು ಆಕರ್ಷಿಸಲು, ಸಾಲವನ್ನು ಮರುಪಾವತಿಸಲು ಮತ್ತು ನಿಯಂತ್ರಕ ಕಾಳಜಿಗಳನ್ನು ಪರಿಹರಿಸಲು ಅದಾನಿ ಹಗಲಿರುಳು ಶ್ರಮಿಸಿದರು.

GQG ಪಾರ್ಟ್‌ನರ್ಸ್ LLC ಸೇರಿದಂತೆ ಪ್ರಮುಖ ಹೂಡಿಕೆದಾರರಿಂದ ಅದಾನಿ ಗ್ರೂಪ್ ಹೊಸದಾಗಿ ಇಕ್ವಿಟಿ ಬಂಡವಾಳವನ್ನು ಪಡೆದುಕೊಂಡಿದೆ. ರಾಜೀವ್ ಜೈನ್ ಅವರ GQG ಪಾರ್ಟ್‌ನರ್ಸ್ LLC ಕಳೆದ ವರ್ಷ ಅದಾನಿ ಗ್ರೂಪ್ ಕಂಪನಿಗಳಲ್ಲಿ ಸುಮಾರು $4 ಬಿಲಿಯನ್ ಹೂಡಿಕೆ ಮಾಡಿದ್ದರೆ, ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿ ಸುಮಾರು 500 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಟೋಟಲ್ ಎನರ್ಜಿಸ್ SE ಅದಾನಿ ಗ್ರೀನ್ ಎನರ್ಜಿ ಜೊತೆ ಜಂಟಿ ಉದ್ಯಮದಲ್ಲಿ 300 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ.

SCROLL FOR NEXT