ಇರಾನ್‌ ಮೇಲೆ ವೈಮಾನಿಕ ದಾಳಿ: ಟೆಹ್ರಾನ್‌ನಿಂದ 200ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಕ್ವಾಮ್‌ಗೆ ಸ್ಥಳಾಂತರ

ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಲ್ಲಾ ವ್ಯವಸ್ಥೆಗಳನ್ನು ಸುಗಮಗೊಳಿಸಿತು. ವಿದ್ಯಾರ್ಥಿಗಳನ್ನು ಐದು ಬಸ್‌ಗಳಲ್ಲಿ ಸ್ಥಳಾಂತರಿಸಲಾಯಿತು.
Over 200 Indian students shifted from Tehran to Qom amid strikes in Iran
ಇರಾನ್‌ ಮೇಲೆ ವೈಮಾನಿಕ ದಾಳಿ
Updated on

ನವದೆಹಲಿ: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರ, ಟೆಹ್ರಾನ್‌ನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ 200ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು 140 ಕಿ.ಮೀ ದೂರದ ದಕ್ಷಿಣ ಇರಾನ್‌ನ ಸುರಕ್ಷಿತ ನಗರವಾದ ಕ್ವಾಮ್‌ಗೆ ಸ್ಥಳಾಂತರಿಸಲಾಗಿದೆ.

ಭಾರತೀಯ ವಿದ್ಯಾರ್ಥಿಗಳನ್ನು ಮಂಗಳವಾರ ಬೆಳಗ್ಗೆ ಬಸ್‌ಗಳಲ್ಲಿ ಸ್ಥಳಾಂತರಿಸಲಾಯಿತು.

ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ವಿದ್ಯಾರ್ಥಿಗಳು ಟೆಹ್ರಾನ್‌ನ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ, ಶಾಹಿದ್ ಬೆಹೆಶ್ಟಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಟೆಹ್ರಾನ್‌ನ ಇರಾನ್ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ. ಕೆಲವು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಹ ಇರಾನ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

Over 200 Indian students shifted from Tehran to Qom amid strikes in Iran
Watch | ಇರಾನ್: 150 ಕ್ಕೂ ಹೆಚ್ಚು ಶಾಲಾ ಬಾಲಕಿಯರ ಸಾಮೂಹಿಕ ಅಂತ್ಯಸಂಸ್ಕಾರ; ಜನಸಾಗರ

"ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಲ್ಲಾ ವ್ಯವಸ್ಥೆಗಳನ್ನು ಸುಗಮಗೊಳಿಸಿತು. ವಿದ್ಯಾರ್ಥಿಗಳನ್ನು ಐದು ಬಸ್‌ಗಳಲ್ಲಿ ಸ್ಥಳಾಂತರಿಸಲಾಯಿತು ಮತ್ತು ಇದೀಗ ಅವರು ಸುರಕ್ಷಿತವಾಗಿ ಕ್ವಾಮ್ ತಲುಪಿದ್ದಾರೆ. ಇರಾನ್‌ನ ಇತರ ಸ್ಥಳಗಳಲ್ಲಿರುವ ಇತರ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಯೋಜನೆ ನಡೆಯುತ್ತಿದೆ" ಎಂದು ಅಖಿಲ ಭಾರತ ವೈದ್ಯಕೀಯ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ಪ್ರತಿನಿಧಿ ಡಾ. ಮೊಹಮ್ಮದ್ ಮೋಮಿನ್ ಖಾನ್ ಅವರು TNIE ಗೆ ತಿಳಿಸಿದ್ದಾರೆ.

"ಟೆಹ್ರಾನ್‌ನಲ್ಲಿ ನಾವು ನಿರಂತರವಾಗಿ ಸ್ಫೋಟದ ಶಬ್ದಗಳನ್ನು ಕೇಳುತ್ತಿದ್ದರಿಂದ ಆತಂಕಗೊಂಡಿದ್ದೇವು. ಆದರೆ ನಾವು ಈಗ ಸುರಕ್ಷಿತವಾಗಿ ಕ್ವಾಮ್ ತಲುಪಿದ್ದೇವೆ" ಎಂದು ಸ್ಥಳಾಂತರಿಸಲ್ಪಟ್ಟವರಲ್ಲಿ ಒಬ್ಬರಾದ ಎಂಜಿನಿಯರಿಂಗ್ ವಿದ್ಯಾರ್ಥಿ ಸೈಯದ್ ಫಾಜಿಲ್ TNIE ಗೆ ಹೇಳಿದ್ದಾರೆ.

ವಿದ್ಯಾರ್ಥಿಗಳ ಸ್ಥಳಾಂತರ ಸಂಬಂಧ ಭಾರತ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಪದೇ ಪದೇ ಕೋರಿದ್ದ ವೈದ್ಯಕೀಯ ಸಂಘವು ಈಗ ರಾಯಭಾರ ಕಚೇರಿಗೆ ಧನ್ಯವಾದ ತಿಳಿಸಿದೆ.

ಇರಾನ್ ಮತ್ತು ಕೊಲ್ಲಿ ಪ್ರದೇಶದ ಅನೇಕ ದೇಶಗಳ ವಾಯುಪ್ರದೇಶವನ್ನು ಫೆಬ್ರವರಿ 28 ರಿಂದ ಬಂದ್ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com