ನೀತಾ ಅಂಬಾನಿ 
ವಾಣಿಜ್ಯ

ಭಾರತದಲ್ಲಿ ಡಿಸ್ನಿ-ರಿಲಯನ್ಸ್ ಒಡೆತನದ ಮಾಧ್ಯಮ ಸಂಸ್ಥೆಗಳ ವಿಲೀನ; ನೀತಾ ಅಂಬಾನಿ ಮುಖ್ಯಸ್ಥೆ

ಅಮೆರಿಕದ ವಾಲ್ಟ್ ಡಿಸ್ನಿ ಕೋ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಬುಧವಾರ ಭಾರತದಲ್ಲಿ ತಮ್ಮ ಮಾಧ್ಯಮ ಕಾರ್ಯಾಚರಣೆಗಳನ್ನು ವಿಲೀನಗೊಳಿಸಿದೆ.

ಮುಂಬೈ: ಅಮೆರಿಕದ ವಾಲ್ಟ್ ಡಿಸ್ನಿ ಕೋ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಬುಧವಾರ ಭಾರತದಲ್ಲಿ ತಮ್ಮ ಮಾಧ್ಯಮ ಕಾರ್ಯಾಚರಣೆಗಳನ್ನು ವಿಲೀನಗೊಳಿಸಿದ್ದು, 70,000 ಕೋಟಿ ರೂ. ಮೌಲ್ಯದ ಈ ಹೊಸ ಉದ್ಯಮ ಆಡಳಿತ ಮಂಡಳಿಗೆ ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ಮುಖ್ಯಸ್ಥೆಯಾಗಲಿದ್ದಾರೆ.

ರಿಲಯನ್ಸ್ ಮತ್ತು ಅದರ ಅಂಗಸಂಸ್ಥೆಗಳು ಸಂಯೋಜಿತ ಘಟಕದಲ್ಲಿ ಶೇ. 63.16 ರಷ್ಟು ಪಾಲು ಹೊಂದಿದ್ದು, ಉಳಿದ ಶೇ. 36.84 ರಷ್ಟು ಷೇರನ್ನು ಡಿಸ್ನಿ ಹೊಂದಲಿದೆ ಎಂದು ಕಂಪನಿಗಳು ಪ್ರಕಟಣೆಯಲ್ಲಿ ತಿಳಿಸಿವೆ.

ರಿಲಯನ್ಸ್ ಇಂಡಸ್ಟ್ರೀಸ್, ಒಟಿಟಿ ವ್ಯವಹಾರವನ್ನು ಬೆಳೆಸಲು ಜಂಟಿ ಉದ್ಯಮದಲ್ಲಿ ಸುಮಾರು 11,500 ಕೋಟಿ ರೂಪಾಯಿ ಹೂಡಿಕೆ ಮಾಡಲು ಒಪ್ಪಿಕೊಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಈ ಜಂಟಿ ಉದ್ಯಮದ ಮುಖ್ಯಸ್ಥೆಯಾಗಲಿದ್ದು, ಉದಯ್ ಶಂಕರ್ ಅವರು ಉಪಾಧ್ಯಕ್ಷರಾಗಿರುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT