ಏರ್ ಇಂಡಿಯಾ ಎಕ್ಸ್‌ಪ್ರೆಸ್ 
ವಾಣಿಜ್ಯ

ಬೆಂಗಳೂರು-ಅಬು ಧಾಬಿ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸಂಚಾರ ಆರಂಭ!

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಬು ಧಾಬಿ- ಬೆಂಗಳೂರು, ಕಣ್ಣೂರು, ಕೊಚ್ಚಿ, ಕೋಝಿಕ್ಕೋಡ್, ಮಂಗಳೂರು, ಮುಂಬೈ, ತಿರುವನಂತಪುರಂ ಮತ್ತು ತಿರುಚಿರಾಪಳ್ಳಿಗೆ ಸಂಪರ್ಕಿಸುವ ನೇರ ವಿಮಾನಗಳನ್ನು ನಿರ್ವಹಿಸುತ್ತದೆ.

ಬೆಂಗಳೂರು: ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ನೆಟ್‌ವರ್ಕ್ ವಿಸ್ತರಣೆಯನ್ನು ಮುಂದುವರೆಸಿದ್ದು, ಮಂಗಳವಾರ ಬೆಂಗಳೂರು-ಅಬು ಧಾಬಿ ನಡುವೆ ಮೊದಲ ನೇರ ಅಂತಾರಾಷ್ಟ್ರೀಯ ವಿಮಾನವನ್ನು ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 200 ವಾರದ ವಿಮಾನಗಳೊಂದಿಗೆ ಬೆಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಅತಿದೊಡ್ಡ ನಿಲ್ದಾಣವಾಗಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು-ಅಬುಧಾಬಿ ಮಧ್ಯೆ ವಿಮಾನ ಹಾರಾಟ ಆರಂಭವಾಗುವುದರೊಂದಿಗೆ ಅಯೋಧ್ಯೆ, ಬಾಗ್ಡೋಗ್ರಾ, ಭುವನೇಶ್ವರ, ಚೆನ್ನೈ, ಗೋವಾ, ಗುವಾಹಟಿ, ಗ್ವಾಲಿಯರ್, ಹೈದರಾಬಾದ್, ಇಂದೋರ್, ಜೈಪುರ, ಕೋಲ್ಕತ್ತಾ, ಲಕ್ನೋ, ಪುಣೆ, ರಾಂಚಿ, ವಾರಣಾಸಿ ಮುಂತಾದ ನಗರಗಳಿಂದ ಬರುವ ಅತಿಥಿಗಳು ಈಗ ಬೆಂಗಳೂರು ಮಾರ್ಗವಾಗಿ ಅಬು ಧಾಬಿಗೆ ಪ್ರಯಾಣಿಸುವ ಆಯ್ಕೆ ಹೊಂದಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಬುಧಾಬಿ- ಬೆಂಗಳೂರು, ಕಣ್ಣೂರು, ಕೊಚ್ಚಿ, ಕೋಝಿಕ್ಕೋಡ್, ಮಂಗಳೂರು, ಮುಂಬೈ, ತಿರುವನಂತಪುರಂ ಮತ್ತು ತಿರುಚಿರಾಪಳ್ಳಿಗೆ ಸಂಪರ್ಕಿಸುವ ನೇರ ವಿಮಾನಗಳನ್ನು ನಿರ್ವಹಿಸುತ್ತದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ?: ಸಂತ್ರಸ್ತೆಯ ಮಗಳ ಮೇಲೂ ಕಣ್ಣು, ಆಡಿಯೋ-ವಿಡಿಯೋ ವೈರಲ್..! ಅಮಾನತು

'ಸಚಿವರೇ ಇಲ್ಲ.. ಏನ್ ಮಾಡ್ಬೇಕು..?' ಆಗ ಯುಟಿ ಖಾದರ್, ಈಗ ಹೊರಟ್ಟಿ..: ಅಧಿವೇಶನಕ್ಕೆ ಸಚಿವರ ಗೈರು ಕುರಿತು ಪರಿಷತ್ ಸಭಾಪತಿ ಅಸಮಾಧಾನ!

ಬಂಗಾಳ ಚುನಾವಣೆ: 291 ಸ್ಥಾನಗಳಲ್ಲಿ ಮಾತ್ರ TMC ಸ್ಪರ್ಧೆ; ಉಳಿದ ಸ್ಥಾನಗಳ ಕಥೆ ಏನು?

Bengaluru Rain: ಯುಗಾದಿ ಮುನ್ನವೇ ಬೆಂಗಳೂರಿನ ಗಾಳಿ ಸಹಿತ ಮಳೆ, ಸುರಿದ ಆಲಿಕಲ್ಲು.. 3-4 ದಿನ ವರ್ಷಧಾರೆ ಸಾಧ್ಯತೆ!

ಭಾರತದ ಪದವೀಧರರಲ್ಲಿ ಶೇ. 40 ರಷ್ಟು ಜನರಿಗೆ ಉದ್ಯೋಗ ಸಿಗುತ್ತಿಲ್ಲ: ವರದಿ

SCROLL FOR NEXT