ಭಾರತೀಯ ಷೇರುಮಾರುಕಟ್ಟೆ (ಸಾಂದರ್ಭಿಕ ಚಿತ್ರ) 
ವಾಣಿಜ್ಯ

Loksabha Election 2024 ಫಲಿತಾಂಶ: ಷೇರುಪೇಟೆ ಮತ್ತೆ ಜಿಗಿತ; ಸೆನ್ಸೆಕ್ಸ್ ದಾಖಲೆಯ 1619 ಅಂಕ ಏರಿಕೆ, 7 ಲಕ್ಷ ಕೋಟಿ ರೂ ಲಾಭ!

ಲೋಕಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಪಾತಾಳಕ್ಕೆ ಕುಸಿದಿದ್ದ ಭಾರತೀಯ ಷೇರುಮಾರುಕಟ್ಟೆ ಇದೀಗ ಮತ್ತೆ ಏರುಗತಿಯಲ್ಲಿ ಸಾಗಿದ್ದು, ಇಂದು ಮತ್ತೆ ಸೆನ್ಸೆಕ್ಸ್ 1619 ಅಂಕ ಏರಿಕೆ ಕಂಡಿದೆ.

ಮುಂಬೈ: ಲೋಕಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಪಾತಾಳಕ್ಕೆ ಕುಸಿದಿದ್ದ ಭಾರತೀಯ ಷೇರುಮಾರುಕಟ್ಟೆ ಇದೀಗ ಮತ್ತೆ ಏರುಗತಿಯಲ್ಲಿ ಸಾಗಿದ್ದು, ಇಂದು ಮತ್ತೆ ಸೆನ್ಸೆಕ್ಸ್ 1619 ಅಂಕ ಏರಿಕೆ ಕಂಡಿದೆ.

ಲೋಕಸಭೆ ಚುನಾವಣೆ ಫಲಿತಾಂಶದ ದಿನ ಅಂದರೆ ಜೂನ್ 4ರಂದು ಪಾತಾಳಕ್ಕೆ ಕುಸಿದಿದ್ದ ಭಾರತೀಯ ಷೇರುಮಾರುಕಟ್ಟೆ ಇದೀಗ ಮತ್ತೆ ಏರುಗತಿಯಲ್ಲಿ ಸಾಗಿದ್ದು, ಮತ್ತೆ ಲಯಕಂಡುಕೊಂಡಿರುವ ಷೇರುಮಾರುಕಟ್ಟೆ ಇಂದು ದಾಖಲೆಯ ಏರಿಕೆ ಕಂಡಿದೆ.

ಬಿಎಸ್‌ಇ ಸೆನ್ಸೆಕ್ಸ್‌ 1,618 ಪಾಯಿಂಟ್‌ಗಳ ಏರಿಕೆಯೊಂದಿಗೆ ದಿನದ ವಹಿವಾಟಿನ ಅಂತ್ಯಕ್ಕೆ 76,693 ಅಂಕಗಳಿಗೆ ಏರಿಕೆಯಾಗಿದ್ದು, NSE ನಿಫ್ಟಿಯು 468 ಪಾಯಿಂಟ್‌ಗಳ ಏರಿಕೆಯೊಂದಿಗೆ ಕಳೆದ ಒಂದು ವರ್ಷದಲ್ಲಿಯೇ ದಾಖಲೆಯ ಗರಿಷ್ಠ 23,290 ಅಂಕಗಳಿಗೆ ತಲುಪಿದೆ.

ಇದರಿಂದಾಗಿ, ಹೂಡಿಕೆದಾರರು ಸುಮಾರು 7.5 ಲಕ್ಷ ಕೋಟಿ ರೂ. ಲಾಭ ಗಳಿಸಿದ್ದಾರೆ. ಅಂತೆಯೇ ಕಳೆದ ಎರಡು ದಿನಗಳಲ್ಲಿ ಹೂಡಿಕೆದಾರರಿಗೆ ಸುಮಾರು 21 ಲಕ್ಷ ಕೋಟಿ ರೂ. ಲಾಭವಾಗಿದೆ ಎಂದು ತಿಳಿದುಬಂದಿದೆ.

ಮತ್ತೆ ಮೋದಿ ಸರ್ಕಾರ, ಮಾರುಕಟ್ಟೆ ದಾಖಲೆಯ ಏರಿಕೆ

ಬಿಎಸ್‌ಇ ಸೆನ್ಸೆಕ್ಸ್‌ ಪಾಯಿಂಟ್‌ಗಳ ಏರಿಕೆಯಾದ ಕಾರಣ ಮಾರುಕಟ್ಟೆಯ ಬಂಡವಾಳವು 415 ಲಕ್ಷ ಕೋಟಿ ರೂಪಾಯಿಯಿಂದ 423 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು, ಇದು ಹೂಡಿಕೆದಾರರಿಗೆ ವರದಾನವಾಗಿ ಪರಿಣಮಿಸಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗುವುದು ಖಚಿತವಾದ ಕಾರಣ ಷೇರು ಮಾರುಕಟ್ಟೆಯಲ್ಲಿ ಸ್ಥಿರತೆ ಮುಂದುವರಿದಿದೆ ಎಂದು ಷೇರು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದಾಖಲೆಯ ಲಾಭ ಕಂಡ ಸಂಸ್ಥೆಗಳು

ನಿಫ್ಟಿ ಐಟಿಯ ಷೇರುಗಳ ಮೌಲ್ಯವು ಶೇ.3.5ರಷ್ಟು ಏರಿಕೆಯಾದ ಕಾರಣ ಇನ್ಫೋಸಿಸ್‌, ಟೆಕ್‌ ಮಹೀಂದ್ರಾ ಹಾಗೂ ಟಿಸಿಎಸ್‌ ಸೇರಿ ಹಲವು ಕಂಪನಿಗಳು ಉತ್ತಮ ಲಾಭ ಗಳಿಸಿವೆ. ಶೋಭಾ ಲಿಮಿಟೆಡ್‌, ಬ್ರಿಗೇಡ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌, ಟಿವಿಎಸ್‌ ಮೋಟರ್‌ ಲಿಮಿಟೆಡ್‌, ರಿಲಯನ್ಸ್‌, ಟಾಟಾ ಸ್ಟೀಲ್‌, ಟಾಟಾ ಮೋಟರ್ಸ್‌ ಸೇರಿ ಹಲವು ಕಂಪನಿಗಳು ಭಾರಿ ಪ್ರಮಾಣದಲ್ಲಿ ಲಾಭ ಗಳಿಸಿವೆ.

ರಕ್ತಪಾತಕ್ಕೆ ಕಾರಣವಾಗಿದ್ದ ಫಲಿತಾಂಶ

ಇನ್ನು ಈ ಹಿಂದೆ ಚುನಾವಣಾ ಫಲಿತಾಂಶ ಬಂದ ದಿನ ಅಂದರೆ ಜೂನ್ 4ರಂದು ಷೇರು ಮಾರುಕಟ್ಟೆಯಲ್ಲಿ (Stock Market) ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ, ಹೂಡಿಕೆದಾರರಿಗೆ 31 ಲಕ್ಷ ಕೋಟಿ ರೂ. ನಷ್ಟವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT