Indian Stock Market: ಸತತ 3ನೇ ದಿನವೂ ಕುಸಿತ; ಸೆನ್ಸೆಕ್ಸ್ 138 ಅಂಕ ಇಳಿಕೆ
ಭಾರತೀಯ ಷೇರುಮಾರುಕಟ್ಟೆ ಇಂದು ಅಲ್ಪ ಪ್ರಮಾಣದಲ್ಲಿ ಕುಸಿದಿದ್ದು, ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 138.74 ಅಂಕಗಳನ್ನು ಕಳೆದುಕೊಂಡಿದ್ದು, ದಿನದ ವಹಿವಾಟು ಅಂತ್ಯಕ್ಕೆ 80,081.98 ಅಂಕಗಳಿಗೆ ಕುಸಿದಿದೆ.
ಮುಂಬೈ: ಸತತ ಕುಸಿತದ ಹಾದಿಯಲ್ಲಿರುವ ಭಾರತೀಯ ಷೇರುಮಾರುಕಟ್ಟೆ ಸತತ ಮೂರನೇ ದಿನವೂ ಕುಸಿತಕಂಡಿದ್ದು, ಇಂದು ಸೆನ್ಸೆಕ್ಸ್ 138 ಅಂಕ ಇಳಿಕೆಯಾಗಿದೆ.
ನಿನ್ನೆಯಷ್ಟೇ ಮಹಾ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಇಂದೂ ಕೂಡ ಅಲ್ಪ ಪ್ರಮಾಣದಲ್ಲಿ ಕುಸಿದಿದ್ದು, ಇಂದು ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 138.74 ಅಂಕಗಳನ್ನು ಕಳೆದುಕೊಂಡಿದ್ದು, ದಿನದ ವಹಿವಾಟು ಅಂತ್ಯಕ್ಕೆ 80,081.98 ಅಂಕಗಳಿಗೆ ಕುಸಿದಿದೆ.
ಅಂತೆಯೇ ನಿಫ್ಟಿ ಕೂಡ 36.60 ಅಂಕಗಳ ಕುಸಿತಕಂಡಿದ್ದು, 24,435.50 ಅಂಕಗಳಿಗೆ ಕುಸಿದಿದೆ. ಇಂದು ಭಾರತೀಯ ಷೇರುಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಶೇ.0.17ರಷ್ಟು ಕುಸಿದಿದ್ದು, ನಿಫ್ಟಿ ಸೂಚ್ಯಂಕ ಕೂಡ ಶೇ.0.15ರಷ್ಟು ಕುಸಿದಿದೆ.
ನಿಫ್ಟಿಯ ಆಟೋ, ಫಾರ್ಮಾ, ಲೋಹ, ರಿಯಾಲ್ಟಿ, ಇಂಧನ, ಖಾಸಗಿ ಬ್ಯಾಂಕ್, ಇನ್ಫ್ರಾ ಮತ್ತು ಎಫ್ಎಂಸಿಜಿ ವಲಯಗಳ ಷೇರುಗಳಲ್ಲಿ ಮಾರಾಟ ಕಂಡುಬಂದಿದೆ. ಅದೇ ಸಮಯದಲ್ಲಿ, ಐಟಿ, ಪಿಎಸ್‌ಯು ಬ್ಯಾಂಕ್, ಹಣಕಾಸು ಸೇವೆಗಳು, ಎಫ್‌ಎಂಸಿಜಿ ವಲಯ ಮತ್ತು ಮಾಧ್ಯಮ ವಲಯದ ಷೇರು ವಲಯದಲ್ಲಿ ಖರೀದಿ ಕಂಡುಬಂದಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಉಳಿದಂತೆ ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿಮಾಡಲಾದ ಸಂಸ್ಥೆಗಳ ಪೈಕಿ ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಟಿಸಿಎಸ್, ಬಜಾಜ್ ಫಿನ್‌ಸರ್ವ್, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಮಾರುತಿ ಸಂಸ್ಥೆಗಳ ಷೇರುಗಳು ಲಾಭಾಂಶ ಕಂಡಿದ್ದು, ಅಂತೆಯೇ ಎಂ & ಎಂ, ಸನ್ ಫಾರ್ಮಾ, ಪವರ್‌ಗ್ರಿಡ್, ಎಲ್ & ಟಿ, ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್ ಮತ್ತು ಟೈಟಾನ್ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.
ಇತ್ತ ನಿಫ್ಟಿ ಪ್ಯಾಕ್ ನಲ್ಲಿ ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ, ಬಜಾಜ್ ಆಟೋ, ಟಾಟಾ ಗ್ರಾಹಕ, ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಸಿಎಲ್ ಟೆಕ್, ಕೋಲ್ ಇಂಡಿಯಾ ಮತ್ತು ಇನ್ಫೋಸಿಸ್ ಲಾಭಾಂಶ ಕಂಡಿದ್ದು, ಎಂ & ಎಂ, ಸನ್ ಫಾರ್ಮಾ, ಐಚರ್ ಮೋಟಾರ್ಸ್, ಎಲ್ & ಟಿ, ಶ್ರೀರಾಮ್ ಫೈನಾನ್ಸ್ ಮತ್ತು ಎನ್‌ಟಿಪಿಸಿ ಸಂಸ್ಥೆಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.