ಆ್ಯಪಲ್ ಐಫೋನ್  
ವಾಣಿಜ್ಯ

ಚೀನಾಗೆ ಆಘಾತ; ಭಾರತದಲ್ಲೇ 60 ಮಿಲಿಯನ್‌ಗಿಂತಲೂ ಹೆಚ್ಚು ಐಫೋನ್‌ ಉತ್ಪಾದನೆ: APPLE

ಅಮೆರಿಕದಲ್ಲಿ ಮಾರಾಟವಾಗಲಿರುವ ಎಲ್ಲಾ ಐಫೋನ್‌ಗಳ ಉತ್ಪಾದನೆಯನ್ನು ಮುಂದಿನ ವರ್ಷದ ವೇಳೆಗೆ ಭಾರತಕ್ಕೆ ಬದಲಾಯಿಸಲು ಆಪಲ್ ಯೋಜಿಸುತ್ತಿದೆ.

ನವದೆಹಲಿ: ಮುಂದಿನ ವರ್ಷದ ವೇಳೆಗೆ ಅಮೆರಿಕಕ್ಕಾಗಿ 60 ಮಿಲಿಯನ್‌ಗಿಂತಲೂ ಹೆಚ್ಚು ಐಫೋನ್‌ಗಳನ್ನು ಭಾರತದಲ್ಲಿ ಉತ್ಪಾದನೆ ಮಾಡಲಾಗುತ್ತದೆ ಎಂದು ಖ್ಯಾತ ಐಫೋನ್ ತಯಾರಿಕಾ ಸಂಸ್ಥೆ ಆಪಲ್ ತಿಳಿಸಿದೆ.

ಅಮೆರಿಕದಲ್ಲಿ ಮಾರಾಟವಾಗಲಿರುವ ಎಲ್ಲಾ ಐಫೋನ್‌ಗಳ ಉತ್ಪಾದನೆಯನ್ನು ಮುಂದಿನ ವರ್ಷದ ವೇಳೆಗೆ ಭಾರತಕ್ಕೆ ಬದಲಾಯಿಸಲು ಆಪಲ್ ಯೋಜಿಸುತ್ತಿದೆ.

ಈ ಬಗ್ಗೆ ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದ್ದು, 'ಟ್ರಂಪ್ ಸರ್ಕಾರವು ಕೆಲವು ದೇಶಗಳ ಮೇಲೆ ಪರಸ್ಪರ ಸುಂಕಗಳನ್ನು ಘೋಷಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. 2026 ರ ಅಂತ್ಯದ ವೇಳೆಗೆ ಅಮೆರಿಕದಲ್ಲಿ ವಾರ್ಷಿಕವಾಗಿ ಮಾರಾಟವಾಗುವ 60 ಮಿಲಿಯನ್‌ಗಿಂತಲೂ ಹೆಚ್ಚು ಐಫೋನ್‌ಗಳನ್ನು ಭಾರತದಲ್ಲೇ ತಯಾರಿಸಲು ಆ್ಯಪಲ್ ಸಂಸ್ಥೆ ಮುಂದಾಗಿದೆ.

ಚೀನಾಗೆ ಆಘಾತ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಘೋಷಿಸಿದಂತೆ, ಅಮೆರಿಕಕ್ಕೆ ಭಾರತದ ರಫ್ತಿನ ಮೇಲಿನ ಪರಸ್ಪರ ಸುಂಕವನ್ನು 26% ಎಂದು ನಿಗದಿಪಡಿಸಲಾಗಿತ್ತು, ಆದರೆ ಚೀನಾ ವಿರುದ್ಧ ಶೇ. 145% ಸುಂಕವನ್ನು ಹೇರಲಾಗಿದೆ. ಅಲ್ಲದೆ ವಿಯೆಟ್ನಾಂ ಮೇಲೆಯೂ ಕೂಡ ಶೇ.46% ಸುಂಕ ಹೇರಲಾಗಿದೆ. ಪರಿಣಾಮ ಈಗಾಗಲೇ ಚೀನಾದಲ್ಲಿ ತಯಾರಾಗುತ್ತಿರುವ ಆ್ಯಪಲ್ ಐಫೋನ್ ಗಳ ಮೇಲೆ ದುಬಾರಿ ಸುಂಕ ಬೀಳುತ್ತದೆ ಎಂಬ ಕಾರಣಕ್ಕೆ ಆ್ಯಪಲ್ ಸಂಸ್ಥೆ ತನ್ನ ಅಮೆರಿಕದಲ್ಲಿ ಮಾರಾಟ ಮಾಡುವ ಐಫೋನ್ ಗಳನ್ನು ಭಾರತದಲ್ಲಿ ತಯಾರಿಸಲು ಮುಂದಾಗಿದೆ. ಇದರರ್ಥ ಕ್ಯುಪರ್ಟಿನೊ ಮೂಲದ ಆಪಲ್ ಕಂಪನಿಯು ಜಾಗತಿಕವಾಗಿ ಐಫೋನ್‌ಗಳ ಪ್ರಮುಖ ಉತ್ಪಾದಕ ಘಟಕ ಚೀನಾದಿಂದ ತನ್ನ ಉತ್ಪಾದನೆಯನ್ನು ಭಾರತಕ್ಕೆ ಬದಲಾಯಿಸಲಿದೆ.

ಚೀನಾವು ಪ್ರಸ್ತುತ ಶೇ. 80 ಕ್ಕಿಂತ ಹೆಚ್ಚು ಐಫೋನ್‌ಗಳನ್ನು ಜೋಡಿಸುತ್ತಿದ್ದು, ಭೌಗೋಳಿಕ ರಾಜಕೀಯ ಸಮಸ್ಯೆಗಳಿಂದಾಗಿ ಆಪಲ್ ತನ್ನ ಐಫೋನ್ ಉತ್ಪಾದನೆಯನ್ನು ಭಾರತಕ್ಕೆ ವರ್ಗಾಯಿಸುತ್ತಿದೆ.

ದತ್ತಾಂಶದ ಪ್ರಕಾರ, ಆಪಲ್ 2024–25ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ 22 ಬಿಲಿಯನ್ ಡಾಲರ್ ಮೌಲ್ಯದ ಐಫೋನ್‌ಗಳನ್ನು ಜೋಡಿಸಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.60% ಹೆಚ್ಚಳವನ್ನು ಸೂಚಿಸುತ್ತದೆ. ಇದರರ್ಥ ಆಪಲ್ ಈಗ ಭಾರತದಲ್ಲಿ ಶೇ.20% ಅಥವಾ ತಾನು ಉತ್ಪಾದನೆ ಮಾಡುವ ಪ್ರತೀ ಐದು ಐಫೋನ್‌ಗಳಲ್ಲಿ ಒಂದನ್ನು ಭಾರತದಲ್ಲಿ ತಯಾರಿಸುತ್ತಿದೆ. ಆ್ಯಪಲ್ ಕಂಪನಿಯು ಈ ಹಿಂದೆ ತನ್ನ ಐಫೋನ್‌ಗಳಲ್ಲಿ 25% ಅನ್ನು ಭಾರತದಲ್ಲಿ ಜೋಡಿಸುವ ಗುರಿ ಹೊಂದಲಾಗಿದೆ ಎಂದು ಹೇಳಿತ್ತು.

ಅದರಂತೆ ಭಾರತದಲ್ಲಿ, ಪ್ರಸ್ತುತ, ಮೂರು ಪ್ರಮುಖ ಐಫೋನ್ ತಯಾರಕರು ಕಾರ್ಯನಿರ್ವಹಿಸುತ್ತಿದ್ದು, ದೇಶದ ಒಟ್ಟು ಐಫೋನ್ ಉತ್ಪಾದನೆಯ ಶೇ.67% ಅನ್ನು ಉತ್ಪಾದಿಸುವ ಫಾಕ್ಸ್‌ಕಾನ್; ಪೆಗಾಟ್ರಾನ್, 17% ಪಾಲು ಹೊಂದಿದೆ. ಟಾಟಾ ಎಲೆಕ್ಟ್ರಾನಿಕ್ಸ್ (ಹಿಂದಿನ ವಿಸ್ಟ್ರಾನ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿದೆ) ಉಳಿದ ಪಾಲನ್ನು ನಿರ್ವಹಿಸುತ್ತಿದೆ.

ಮಾರ್ಚ್ ವೇಳೆಗೆ, ಭಾರತದಲ್ಲಿ ಆಪಲ್‌ನ ಅತಿದೊಡ್ಡ ತಯಾರಕರಾದ ಫಾಕ್ಸ್‌ಕಾನ್ 1.31 ಬಿಲಿಯನ್ ಡಾಲರ್ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರವಾನಿಸಿದೆ. ಇದು ಒಂದೇ ತಿಂಗಳಲ್ಲಿ ಇದುವರೆಗಿನ ಅತ್ಯಧಿಕವಾಗಿದೆ ಎಂದು ವರದಿ ಹೇಳಿದೆ. ಈ ಅಂಕಿ ಅಂಶವು ಜನವರಿ ಮತ್ತು ಫೆಬ್ರವರಿಯಲ್ಲಿ ಅದರ ಒಟ್ಟು ರಫ್ತುಗಳಿಗೆ ಸಮನಾಗಿತ್ತು. ಟಾಟಾ ಎಲೆಕ್ಟ್ರಾನಿಕ್ಸ್‌ನ ಐಫೋನ್ ರಫ್ತುಗಳು ಹಿಂದಿನ ತಿಂಗಳಿಗಿಂತ ಶೇ. 63 ರಷ್ಟು ಏರಿಕೆಯಾಗಿ ಮಾರ್ಚ್‌ನಲ್ಲಿ 612 ಮಿಲಿಯನ್ ಡಾಲರ್ ಗೆ ತಲುಪಿದೆ.

ಏತನ್ಮಧ್ಯೆ, 2024 ರಲ್ಲಿ ಆಪಲ್‌ನ 232.1 ಮಿಲಿಯನ್ ಜಾಗತಿಕ ಐಫೋನ್ ಸಾಗಣೆಗಳಲ್ಲಿ ಸುಮಾರು 28% ರಷ್ಟು ಅಮೆರಿಕದಲ್ಲಿತ್ತು. 2026 ರ ಅಂತ್ಯದ ವೇಳೆಗೆ ಅಮೆರಿಕದಲ್ಲಿ ವಾರ್ಷಿಕವಾಗಿ ಮಾರಾಟವಾಗುವ 60 ಮಿಲಿಯನ್‌ಗಿಂತಲೂ ಹೆಚ್ಚು ಐಫೋನ್‌ಗಳನ್ನು ಭಾರತದಿಂದ ಖರೀದಿಸಲು ಕಂಪನಿಯು ಯೋಜಿಸಿರುವುದರಿಂದ, ಭಾರತದಲ್ಲಿ ತನ್ನ ಐಫೋನ್ ಉತ್ಪಾದನೆಯನ್ನು ದ್ವಿಗುಣಗೊಳಿಸಬೇಕಾಗುತ್ತದೆ. ಆಪಲ್ 2017 ರಿಂದ 2022 ರವರೆಗೆ ಒಪ್ಪಂದ ತಯಾರಕರ ಮೂಲಕ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಜೋಡಿಸುತ್ತಿದ್ದರೂ, ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯ ಪ್ರಾಥಮಿಕವಾಗಿ ಭಾರತೀಯ ಸೌಲಭ್ಯಗಳನ್ನು ಆರಂಭಿಕ ಹಂತದ ಅಥವಾ ಹಳೆಯ ಮಾದರಿಗಳನ್ನು ಜೋಡಿಸಲು ಮಾತ್ರ ಬಳಸಿಕೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT