ಟಿಸಿಎಸ್ (ಸಂಗ್ರಹ ಚಿತ್ರ) 
ವಾಣಿಜ್ಯ

TCS: 12 ಸಾವಿರ ಉದ್ಯೋಗಿಗಳ ಕಡಿತಕ್ಕೆ ನಿರ್ಧಾರ, ದೇಶದ ಅತೀ ದೊಡ್ಡ ಐಟಿ ಸಂಸ್ಥೆಗೇನಾಯ್ತು?

ಮುಂದಿನ ಹಣಕಾಸು ವರ್ಷದ ವೇಳೆಗೆ 12,200 ಉದ್ಯೋಗಿಗಳು ವಜಾಗೊಳಿಸಲಿದೆ ಎಂದು ಹೇಳಲಾಗಿದೆ. ಇದು ಐಟಿ ದೈತ್ಯ ಸಂಸ್ಥೆಯ ಉದ್ಯೋಗಿಗಳಲ್ಲಿ ಸುಮಾರು 2% ಕಡಿತಕ್ಕೆ ಸಮನಾಗಿರುತ್ತದೆ ಎಂದು ಹೇಳಲಾಗಿದೆ.

ನವದೆಹಲಿ: ತಂತ್ರಜ್ಞಾನ ಬದಲಾವಣೆ ಹಿನ್ನಲೆಯಲ್ಲಿ ದೇಶದ ಅತೀ ದೊಡ್ಡ ಐಟಿ ಸೇವಾ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ತನ್ನ ಸಿಬ್ಬಂದಿಗಳಿಗೆ ಅತೀ ದೊಡ್ಡ ಶಾಕ್ ನೀಡಿದ್ದು, ಬರೊಬ್ಬರಿ 12 ಸಾವಿರ ಮಂದಿ ಉದ್ಯೋಗಿಗಳನ್ನು ವಜಾ ಮಾಡಲು ಮುಂದಾಗಿದೆ.

ಹೌದು.. ಭಾರತದ ಅತಿದೊಡ್ಡ ಐಟಿ ಸೇವಾ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS), ತ್ವರಿತ ತಾಂತ್ರಿಕ ಬದಲಾವಣೆಗಳಿಗೆ ವಿಶೇಷವಾಗಿ ಕೃತಕ ಬುದ್ಧಿಮತ್ತೆಯಲ್ಲಿ ಹೊಂದಿಕೊಳ್ಳುವ ಯೋಜನೆಯ ಭಾಗವಾಗಿ, ತನ್ನ ಜಾಗತಿಕ ಉದ್ಯೋಗಿಗಳನ್ನು ಶೇಕಡಾ 2ರಷ್ಟು ಅದರೆ ಸರಿ ಸುಮಾರು 12 ಸಾವಿರ ಮಂದಿಯನ್ನು ಕೆಲಸದಿಂದ ವಜಾ ಮಾಡಲು ಸಜ್ಜಾಗಿದೆ.

ಮೂಲಗಳ ಪ್ರಕಾರ ಟಿಸಿಎಸ್ ಮುಂದಿನ ಹಣಕಾಸು ವರ್ಷದ ವೇಳೆಗೆ 12,200 ಉದ್ಯೋಗಿಗಳು ವಜಾಗೊಳಿಸಲಿದೆ ಎಂದು ಹೇಳಲಾಗಿದೆ. ಇದು ಐಟಿ ದೈತ್ಯ ಸಂಸ್ಥೆಯ ಉದ್ಯೋಗಿಗಳಲ್ಲಿ ಸುಮಾರು 2% ಕಡಿತಕ್ಕೆ ಸಮನಾಗಿರುತ್ತದೆ ಎಂದು ಹೇಳಲಾಗಿದೆ.

ಟಿಸಿಎಸ್ ಸಿಇಒ ಹೇಳಿದ್ದೇನು.?

ಈ ಕುರಿತು ಮಾತನಾಡಿರುವ ಟಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ಕೆ. ಕೃತಿವಾಸನ್, 'ಕ್ಲೈಂಟ್ ನಿರ್ಧಾರ ತೆಗೆದುಕೊಳ್ಳುವಲ್ಲಿ ಮತ್ತು ಯೋಜನೆ ಪ್ರಾರಂಭದಲ್ಲಿ ವಿಳಂಬವಾಗಿದೆ ಎಂದು ಈ ಹಿಂದೆ ಹೇಳಿದ್ದರು. 'ಇದು ನಮ್ಮ ಜಾಗತಿಕ ಉದ್ಯೋಗಿಗಳ ಸುಮಾರು 2 ಪ್ರತಿಶತದಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಮಧ್ಯಮ ಮತ್ತು ಹಿರಿಯ ಮಟ್ಟದಲ್ಲಿ ಇದು ಪರಿಣಾಮ ಬೀರಲಿದೆ' ಎಂದಿದ್ದಾರೆ.

ತಂತ್ರಜ್ಞಾನ ಉದ್ಯಮದಲ್ಲಿನ ರಚನಾತ್ಮಕ ಬದಲಾವಣೆಗಳ ನಡುವೆ ಸ್ಪರ್ಧಾತ್ಮಕವಾಗಿ ಉಳಿಯುವ ಅಗತ್ಯದಿಂದ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಕೃತಿವಾಸನ್ ಹೇಳಿದ್ದಾರೆ. ನಾವು ಹೊಸ ತಂತ್ರಜ್ಞಾನಗಳನ್ನು, ವಿಶೇಷವಾಗಿ AI ಮತ್ತು ಕಾರ್ಯಾಚರಣಾ ಮಾದರಿ ಬದಲಾವಣೆಗಳನ್ನು ಕರೆಯುತ್ತಿದ್ದೇವೆ. ಕೆಲಸ ಮಾಡುವ ವಿಧಾನಗಳು ಬದಲಾಗುತ್ತಿವೆ.

ನಾವು ಭವಿಷ್ಯಕ್ಕೆ ಸಿದ್ಧರಾಗಿರಬೇಕು ಮತ್ತು ಚುರುಕಾಗಿರಬೇಕು. ನಾವು AI ಅನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸುತ್ತಿದ್ದೇವೆ ಮತ್ತು ಭವಿಷ್ಯಕ್ಕಾಗಿ ನಮಗೆ ಅಗತ್ಯವಿರುವ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ ಎಂದಿದ್ದಾರೆ.

ಟಿಸಿಎಸ್ ಒಟ್ಟು ರೂ.283 ಶತಕೋಟಿಗೂ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದು, ಸಾಫ್ಟ್‌ವೇರ್ ಕಂಪನಿಗಳು ಅತಿದೊಡ್ಡ ಖಾಸಗಿ ಉದ್ಯೋಗದಾತರಲ್ಲಿ ಸ್ಥಾನ ಪಡೆದಿವೆ. ಈ ವಿಭಾಗದಲ್ಲಿ ಟಿಸಿಎಸ್ ಅತಿದೊಡ್ಡ ಉದ್ಯೋಗ ನೀಡುವಲ್ಲಿ ಮುಂಚೂಣಿಯಲ್ಲಿದೆ.

ವರದಿಯ ಪ್ರಕಾರ, ನಡೆಯುತ್ತಿರುವ ಆರ್ಥಿಕ ಅನಿಶ್ಚಿತತೆಗಳು ಮತ್ತು AI ತಂತ್ರಜ್ಞಾನಗಳಿಂದ ಉಂಟಾಗುವ ಅಡೆತಡೆಗಳು ವ್ಯವಹಾರದ ಬೇಡಿಕೆಗಳ ಮೇಲೆ ಪರಿಣಾಮ ಬೀರುತ್ತಿವೆ. ಏಪ್ರಿಲ್ 2025 ರಿಂದ ಮಾರ್ಚ್ 2026 ರವರೆಗೆ ನಡೆಯುವ 2026 ರ ಆರ್ಥಿಕ ವರ್ಷದಾದ್ಯಂತ ಈ ವಜಾಗಳು ನಡೆಯಲಿವೆ.

ಜೂನ್ 2025 ರ ತ್ರೈಮಾಸಿಕದ ವೇಳೆಗೆ ಜಾಗತಿಕವಾಗಿ 6,13,000 ಜನರ ಸಿಬ್ಬಂದಿಯನ್ನು ಹೊಂದಿರುವ ಟಿಸಿಎಸ್, ಭೌಗೋಳಿಕ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಸುಮಾರು 12,200 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT