ನವದೆಹಲಿ: ಆರ್‌ಬಿಐನ ಅನಿರೀಕ್ಷಿತ ರೆಪೊ ದರ ಕಡಿತದ ಒಂದು ವಾರದ ನಂತರ ಭಾರತದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಸಂಸ್ಥೆ ಎಸ್ ಬಿಐ ತನ್ನ ಗ್ರಾಹಕರಿಗೆ ಬಂಪರ್ ಘೋಷಣೆ ಮಾಡಿದೆ. ಸಾಲದ ಮೇಲಿನ ಬಡ್ಡಿದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ.
ಅಲ್ಲದೇ ತನ್ನ ವಿಶೇಷ ಯೋಜನೆಯಡಿಯಲ್ಲಿ ಠೇವಣಿ ದರಗಳನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದೆ.
ದರ ಕಡಿತಗಳು ಜೂನ್ 15 ರಿಂದ ಜಾರಿಗೆ ಬರಲಿದೆ. ರೆಪೋ ದರಕ್ಕೆ ಸಂಬಂಧಿಸಿದ ಸಾಲಗಳು ಮತ್ತು ಹೊಸ ಸಾಲಗಾರರಿಗೆ ಇದು ಅನ್ವಯಿಸುತ್ತದೆ. ಕಳೆದ ವಾರ ಆರ್ ಬಿಐ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸಿತ್ತು. ಇದಾದ ಬಳಿಕ ಎಸ್ ಬಿಐ ತೀವ್ರಗತಿಯಲ್ಲಿ ಈ ಕ್ರಮ ಕೈಗೊಂಡಿದೆ.
ಎಸ್‌ಬಿಐನ ಸಹವರ್ತಿ ಬ್ಯಾಂಕ್ ಗಳಾದ ಬ್ಯಾಂಕ್ ಆಫ್ ಬರೋಡಾ, ಮೂರನೇ ಅತಿದೊಡ್ಡ ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್‌ಗಳು ತನ್ನ ಸಾಲಗಾರರಿಗೆ ಈಗಾಗಲೇ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿವೆ.
ದೊಡ್ಡ ಖಾಸಗಿ ವಲಯದ ಸಾಲದಾತರಾದ HDFC ಬ್ಯಾಂಕ್ ಮತ್ತು ICICI ಬ್ಯಾಂಕ್ ಮಾತ್ರ ತಮ್ಮ ದರಗಳನ್ನು ಇನ್ನೂ ಕಡಿಮೆ ಮಾಡಿಲ್ಲ. ಎಲ್ಲಾ ಹೊಸ ದರಗಳು ಜೂನ್ 15 ರಿಂದ ಜಾರಿಗೆ ಬರಲಿವೆ ಎಂದು ಎಸ್‌ಬಿಐ ತಿಳಿಸಿದೆ.