ಸಾಂದರ್ಭಿಕ ಚಿತ್ರ 
ವಾಣಿಜ್ಯ

ಟ್ರಂಪ್ ಭಾಷಣ ಮುಗಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಶೇ. 10 ರಷ್ಟು ದಿಢೀರ್ ಏರಿಕೆ!

ಮುಂಬರುವ ವಾರಗಳಲ್ಲಿ ಯುಎಸ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲು ಯೋಚಿಸಿದೆ ಎಂದು ಅವರು ಹೇಳಿದರು. ಅಮೆರಿಕದ ಕಚ್ಚಾ ತೈಲದ ಬೆಲೆ ಶೇ. 10 ರಷ್ಟು ಏರಿಕೆಯೊಂದಿಗೆ ಪ್ರತಿ ಬ್ಯಾರೆಲ್ ದರ 110 ಡಾಲರ್ ಗೆ ಏರಿಕೆಯಾಗಿದೆ.

ವಾಷಿಂಗ್ಟನ್: ಇರಾನ್‌ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕದ ಪ್ರಜೆಗಳನ್ನು ಉದ್ದೇಶಿಸಿ ಡೊನಾಲ್ಡ್‌ ಟ್ರಂಪ್‌ ಭಾಷಣ ಮಾಡಿದ ಬೆನ್ನಲ್ಲೇ ಯುಎಸ್ ಸ್ಟಾಕ್ ಮಾರುಕಟ್ಟೆ ಕುಸಿದಿದ್ದರೆ, ಕಚ್ಚಾ ತೈಲದ ಬೆಲೆ ಶೇ. 10 ರಷ್ಟು ದಿಢೀರ್‌ ಏರಿಕೆಯಾಗಿದೆ.

ಮುಂಬರುವ ವಾರಗಳಲ್ಲಿ ಯುಎಸ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲು ಯೋಚಿಸಿದೆ ಎಂದು ಅವರು ಹೇಳಿದರು. ಅಮೆರಿಕದ ಕಚ್ಚಾ ತೈಲದ ಬೆಲೆ ಶೇ. 10 ರಷ್ಟು ಏರಿಕೆಯೊಂದಿಗೆ ಪ್ರತಿ ಬ್ಯಾರೆಲ್ ದರ 110 ಡಾಲರ್ ಗೆ ಏರಿಕೆಯಾಗಿದೆ.

ಈ ಮಧ್ಯೆ ಕಚ್ಚಾ ತೈಲದ ಬೆಲೆ ಶೇ. 8 ರಷ್ಟು ಏರಿಕೆಯೊಂದಿಗೆ 109. 38 ಡಾಲರ್ ತಲುಪಿದೆ ಎಂದು ತೈಲ ರಫ್ತು ಮಾಡುವ ಒಪೆಕ್‌ ರಾಷ್ಟ್ರಗಳ ಬ್ರೆಂಟ್‌ ಹೇಳಿದೆ. ಈ ಮಧ್ಯೆ ಇರಾನ್ ಇನ್ನೂ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಕಾರ್ಯಾಚರಣೆಗೆ ಬೇಕಾದ ಸಲಕರಣೆಗಳ ತಯಾರಿಕಾ ಘಟಕಗಳನ್ನು ನಿಗೂಢವಾಗಿ ಉಳಿಸಿಕೊಂಡಿದೆ ಎಂದು ಇರಾನ್ ಮಿಲಿಟರಿಯ ವಕ್ತಾರರು ಹೇಳಿದ್ದಾರೆ.

ಭಾರತದಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಹೊರೆಯನ್ನು ಭರಿಸುತ್ತಿವೆ ಎಂದು ಹೇಳಿದ್ದಾರೆ.

ಭಾರತ ಸರ್ಕಾರ ಬೆಲೆಗಳನ್ನು ಸ್ಥಿರವಾಗಿಡಲು ಅಬಕಾರಿ ಸುಂಕವನ್ನು ಕಡಿಮೆ ಮಾಡಿದ್ದು, ಹೊರೆಯ ಭಾಗವನ್ನು ತೈಲ ಮಾರುಕಟ್ಟೆ ಕಂಪನಿಗಳು ಸಹ ಭರಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಆರಂಭದಿಂದಲೂ, ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ ಸುಮಾರು 65 ಡಾಲರ್ ನಿಂದ ಈಗ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಕುರಿತು ಬ್ರಿಟನ್ ನೇತೃತ್ವದ ಮಾತುಕತೆ; ಭಾರತ ಭಾಗಿ: ತೈಲ ಬಿಕ್ಕಟ್ಟಿಗೆ ಬ್ರೇಕ್?

"ಸೇನಾ ದಾಳಿ ಮಾರ್ಗದಿಂದ...": ಇರಾನ್ ನ್ನು ಶಿಲಾಯುಗಕ್ಕೆ ಅಟ್ಟುವ ಟ್ರಂಪ್ ಬೆದರಿಕೆಗೆ ಚೀನಾ ತೀಕ್ಷ್ಣ ಪ್ರತಿಕ್ರಿಯೆ...

IPL 2026: RCB ವಿರುದ್ಧದ ಹೈ-ವೋಲ್ಟೇಜ್‌ ಪಂದ್ಯಕ್ಕೂ ಮೊದಲೇ ಕಮ್‌ಬ್ಯಾಕ್‌ಗೆ ಸಜ್ಜಾದ ಧೋನಿ!

'Told Dad It's Not Okay': ಬಹಿರಂಗವಾಗಿ ಧೋನಿ, ಕಪಿಲ್ ದೇವ್ ಕ್ಷಮೆಯಾಚಿಸಿದ ಯುವರಾಜ್ ಸಿಂಗ್!

Dhurandhar 2 ಬಾಕ್ಸ್ ಆಫೀಸ್ ಆರ್ಭಟಕ್ಕೆ ಬೆದರಿದ 'ಭೂತ್ ಬಂಗ್ಲಾ'; ಬಿಡುಗಡೆ ಏಪ್ರಿಲ್ 16ಕ್ಕೆ ಮುಂದೂಡಿಕೆ

SCROLL FOR NEXT