ಭಾರತೀಯ ಷೇರು ಮಾರುಕಟ್ಟೆಯ ಸಾಂದರ್ಭಿಕ ಚಿತ್ರ 
ವಾಣಿಜ್ಯ

ಇರಾನ್- ಅಮೆರಿಕ ಕದನ ವಿರಾಮ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಜಿಗಿತ!

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 2,775.73 ಪಾಯಿಂಟ್‌ಗಳಿಂದ 77,392.31 ಗೆ ಜಿಗಿದಿದ್ದು, ನಿಫ್ಟಿ ಕೂಡಾ 815.2 ಪಾಯಿಂಟ್‌ ಏರಿಕೆ ಕಂಡು 23,938.85ಕ್ಕೆ ತಲುಪಿದೆ.

ಮುಂಬೈ: ಇರಾನ್-ಅಮೆರಿಕ ಕದನ ವಿರಾಮದ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಭಾರಿ ಜಿಗಿತ ಕಂಡುಬಂದಿದ್ದು, ಹೂಡಿಕೆದಾರರು ಹರ್ಷಗೊಂಡಿದ್ದಾರೆ.

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 2,775.73 ಪಾಯಿಂಟ್‌ಗಳಿಂದ 77,392.31 ಗೆ ಜಿಗಿದಿದ್ದು, ನಿಫ್ಟಿ ಕೂಡಾ 815.2 ಪಾಯಿಂಟ್‌ ಏರಿಕೆ ಕಂಡು 23,938.85ಕ್ಕೆ ತಲುಪಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ವಾರಗಳ ಕದನ ವಿರಾಮ ಘೋಷಿಸಿದ ನಂತರ ಇದೊಂದು ಐತಿಹಾಸಿಕ ಗೆಲುವು ಎಂದು ಇರಾನ್ ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯು ಹೇಳಿಕೊಂಡಿತ್ತು. ಇದಾದ ಬಳಿಕ ಕೆಲವು ದಿನಗಳಿಂದ ತೀವ್ರ ಕುಸಿತ ಕಂಡಿದ್ದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಈಗ ಜಿಗಿತ ಕಂಡುಬಂದಿದೆ.

ಯುದ್ಧದ ಎಲ್ಲಾ ಉದ್ದೇಶಗಳನ್ನು ಸಾಧಿಸಲಾಗಿದೆ ಎಂದು ಇರಾನ್ ನ ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿಕೊಂಡಿರುವುದಾಗಿ Press Tv ವರದಿ ಮಾಡಿದೆ.

ನಿನ್ನೆ, ದೇಶೀಯ ಇಕ್ವಿಟಿ ಮಾರುಕಟ್ಟೆಗಳು ತೀವ್ರ ಕುಸಿತ ಕಂಡಿತ್ತು. ಮಾರಾಟದ ಒತ್ತಡದ ನಡುವೆ ಕೆಂಪು ಬಣ್ಣದಲ್ಲಿ ಪ್ರಾರಂಭವಾಯಿತು ಆದರೆ IT ಮತ್ತು ಲೋಹದ ಸ್ಟಾಕ್ ನಿಂದ ವಹಿವಾಟು ಅಂತ್ಯದ ವೇಳೆಗೆ ಸ್ವಲ್ಪ ಚೇತರಿಸಿಕೊಂಡಿತ್ತು.

ನಿಫ್ಟಿ 155.40 ಪಾಯಿಂಟ್ ಅಥವಾ ಶೇ. 0.68 ರಷ್ಟು ಏರಿಕೆಯಾಗಿ 23,015.90 ಕ್ಕೆ ವಹಿವಾಟು ಕೊನೆಗೊಂಡಿತು. ಬಿಎಸ್‌ಇ ಸೆನ್ಸೆಕ್ಸ್ ಕೂಡ 509.73 ಪಾಯಿಂಟ್ ಅಥವಾ ಶೇ. 0.69 ರಷ್ಟು ಏರಿಕೆ ಕಂಡು 74,616.58ಕ್ಕೆ ಸ್ಥಿರವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧದಿಂದ ಹಿಂದೆ ಸರಿದ ಅಮೆರಿಕಾ-ಇರಾನ್: ಪಾಕ್ ಮಧ್ಯಸ್ಥಿಕೆಯಲ್ಲಿ 2 ವಾರಗಳ ಕದನ ವಿರಾಮ ಘೋಷಣೆ, ಹಾರ್ಮುಜ್ ಮಾರ್ಗ ಮತ್ತೆ ರೀಓಪನ್..!

West-Asia war: 2 ವಾರಗಳ ಕದನ ವಿರಾಮಕ್ಕೆ ಅಮೆರಿಕಾ-ಇರಾನ್ ಒಪ್ಪಿಗೆ, ಟೆಹ್ರಾನ್ ಮುಂದಿಟ್ಟಿರುವ ಡಿಮ್ಯಾಂಡ್ ಗಳು ಇವೇ ನೋಡಿ..!

ಇರಾನ್ ಜೊತೆ ಕದನ ವಿರಾಮಕ್ಕೆ ಒಪ್ಪಿಗೆ: ಲೆಬನಾನ್ ಹೊರಗುಳಿಸಿದ ಬೆಂಜಮಿನ್ ನೆತನ್ಯಾಹು; ಇಸ್ರೇಲ್ ದ್ವಂದ್ವ ನಿಲುವು..!

West Asia conflict: ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಕಚ್ಚಾ ತೈಲ ದರ ಭಾರೀ ಕುಸಿತ..!

ಅಮೆರಿಕ- ಇರಾನ್ ನಡುವೆ ಯಶಸ್ವಿ ಸಂಧಾನ: ಏ.10ಕ್ಕೆ ಇಸ್ಲಾಮಾಬಾದ್ ನಲ್ಲಿ ಮಹತ್ವದ ಮಾತುಕತೆ, ಪಾಕಿಸ್ತಾನದಿಂದ ಅಧಿಕೃತ ಆಹ್ವಾನ!

SCROLL FOR NEXT