ಭಾರತೀಯ ಷೇರು ಮಾರುಕಟ್ಟೆ 
ವಾಣಿಜ್ಯ

Indian Stock Market: ವಾರದ ಮೊದಲ ದಿನವೇ ಷೇರುಮಾರುಕಟ್ಟೆ ಏರಿಕೆ; 24 ಸಾವಿರ ಅಂಕ ಗಡಿ ದಾಟಿದ Nifty50

ಸೆನ್ಸೆಕ್ಸ್ ಇಂದು 639.42ಅಂಕಗಳ ಏರಿಕೆಯೊಂದಿಗೆ 77,303.63 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 194.75 ಅಂಕಗಳ ಏರಿಕೆಯೊಂದಿಗೆ 24,092.70 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಮುಂಬೈ: ಇರಾನ್ ಸಂಘರ್ಷದ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಸೋಮವಾರ ಏರಿಕೆ ಕಂಡಿದ್ದು, ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳು ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಸೋಮವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.83ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.81ರಷ್ಟು ಏರಿಕೆ ದಾಖಲಿಸಿದೆ.

ಸೆನ್ಸೆಕ್ಸ್ ಇಂದು 639.42ಅಂಕಗಳ ಏರಿಕೆಯೊಂದಿಗೆ 77,303.63 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 194.75 ಅಂಕಗಳ ಏರಿಕೆಯೊಂದಿಗೆ 24,092.70 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಫಾರ್ಮಾ, ಐಟಿ, ಬಂಡವಾಳ ಸರಕುಗಳು ಮತ್ತು ಕೈಗಾರಿಕಾ ವಲಯಗಳ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿವೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್, ರಿಲಯನ್ಸ್ ಇಂಡಸ್ಟ್ರೀಸ್, ಅದಾನಿ ಪೋರ್ಟ್ಸ್, ಟೆಕ್ ಮಹೀಂದ್ರಾ, ಮಹೀಂದ್ರಾ & ಮಹೀಂದ್ರಾ, ಎನ್‌ಟಿಪಿಸಿ, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ.

ಅಂತೆಯೇ ಆಕ್ಸಿಸ್ ಬ್ಯಾಂಕ್, ಭಾರತ್ ಎಲೆಕ್ಟ್ರಾನಿಕ್ಸ್, ಟ್ರೆಂಟ್ ಮತ್ತು ಐಸಿಐಸಿಐ ಬ್ಯಾಂಕ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಂಗಳೂರು ಕುಕ್ಕರ್‌ ಬಾಂಬ್ ಬ್ಲಾಸ್ಟ್ ಪ್ರಕರಣ: ಉಗ್ರ ಶಾರಿಕ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ NIA ಕೋರ್ಟ್; Video

AAP ಮುಖವಾಡ ಕಳಚಿದೆ: ಹಣ ಪಡೆದು ರಾಜ್ಯಸಭೆಗೆ ಜನರನ್ನು ಕಳುಹಿಸಿದರೆ ಹೀಗೆ ಆಗೋದು: ಕಾಂಗ್ರೆಸ್ ಟೀಕೆ!

KD Movie 'ಸರ್ಸೆ ನಿನ್ನ ಸೆರಗ ಸರ್ಸೆ'​ ವಿವಾದ: ಕ್ಷಮೆಯಾಚಿಸಿದ ಸಂಜಯ್ ದತ್; 50 ಬಾಲಕಿಯರ ಶಿಕ್ಷಣಕ್ಕೆ ನೆರವು ಘೋಷಣೆ

‘ನೀವು ಮಹಿಳೆಯರನ್ನು ಎಲ್ಲಿಯೂ ಸುರಕ್ಷಿತವಾಗಿರಲು ಬಿಡುವುದಿಲ್ಲ, ಯಾವ ರೀತಿಯ ಮನುಷ್ಯರು ನೀವು': ಹೈಕೋರ್ಟ್ ಛೀಮಾರಿ!

Target Killings: ಪಾಕ್‌ನಲ್ಲಿ ಹಫೀಜ್ ಸಯೀದ್ ನ ಆಪ್ತ ಸಹಚರ ಅಫ್ರಿದಿಯನ್ನು ಹತ್ಯೆಗೈದ ಅಪರಿಚಿತ ಬಂದೂಕುಧಾರಿಗಳು!

SCROLL FOR NEXT