Online Desk
ವಾಣಿಜ್ಯ

Gross Salary vs Net Salary: ನಡುವಿನ ವ್ಯತ್ಯಾಸ ಗೊತ್ತಾ? ಆಫರ್ ಲೆಟರ್‌ನಲ್ಲಿರುವ ಪೂರ್ತಿ ಸಂಬಳ ಕೈಗೆ ಯಾಕೆ ಸಿಗಲ್ಲ?

ಆಫರ್ ಲೆಟರ್‌ನಲ್ಲಿ ಕಾಣುವ ದೊಡ್ಡ ಮೊತ್ತದ ಸಂಬಳದಲ್ಲಿ ಫುಲ್ ಅಂಮೌಂಟ್ ನಿಮ್ಮ ಬ್ಯಾಂಕ್ ಅಕೌಂಟಿಗೆ ಬರಲ್ಲ ಅಂತಾ? ಹೌದು, ನಿಮ್ಮ ಆಫರ್ ಲೆಟರ್‌ನಲ್ಲಿ ಕಾಣುವ ಗ್ರಾಸ್ ಸ್ಯಾಲರಿನೇ ಬೇರೆ, ನೆಟ್ ಸ್ಯಾಲರಿನೇ ಬೇರೆ? ಹಾಗಾದ್ರೆ, ಈ ಎರಡರ ನಡುವಿನ ವ್ಯತ್ಯಾಸವೇನು?

Gross Salary vs Net Salary: ಹೊಸ ಉದ್ಯೋಗ ಸೇರಿದಾಗ ಅಥವಾ ಪ್ರಮೋಷನ್ ಆದಾಗ ಸಿಗುವ ಆಫರ್ ಲೆಟರ್ ನೋಡಿ ಪ್ರತಿಯೊಬ್ಬರೂ ಖುಷಿಪಡುತ್ತಾರೆ. ಯಾಕಂದ್ರೆ, ಆ ಆಫರ್ ಲೆಟರ್‌ನಲ್ಲಿ ಕಾಣುವ ದೊಡ್ಡ ಮೊತ್ತದ ಸಂಬಳ! ಆದ್ರೆ, ನಿಮಗೆ ಗೊತ್ತಾ, ಆ ಆಫರ್ ಲೆಟರ್‌ನಲ್ಲಿ ಕಾಣುವ ದೊಡ್ಡ ಮೊತ್ತದ ಸಂಬಳದಲ್ಲಿ ಫುಲ್ ಅಂಮೌಂಟ್ ನಿಮ್ಮ ಬ್ಯಾಂಕ್ ಅಕೌಂಟಿಗೆ ಬರಲ್ಲ ಅಂತಾ? ಹೌದು, ನಿಮ್ಮ ಆಫರ್ ಲೆಟರ್‌ನಲ್ಲಿ ಕಾಣುವ ಗ್ರಾಸ್ ಸ್ಯಾಲರಿನೇ ಬೇರೆ, ನೆಟ್ ಸ್ಯಾಲರಿನೇ ಬೇರೆ? ಹಾಗಾದ್ರೆ, ಈ ಎರಡರ ನಡುವಿನ ವ್ಯತ್ಯಾಸವೇನು? ಎನ್ನುವುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ:

ಗ್ರಾಸ್ ಸ್ಯಾಲರಿ ಎಂದರೇನು?

ಆಫರ್ ಲೆಟರ್‌ನಲ್ಲಿ ಕಂಪನಿಯು ನಿಮಗೆ ನೀಡಲು ಒಪ್ಪಿಕೊಂಡಿರುವ ಒಟ್ಟು ಮೊತ್ತವನ್ನು ಗ್ರಾಸ್ ಸ್ಯಾಲರಿ ಎನ್ನಲಾಗುತ್ತದೆ. ಇದರಲ್ಲಿ ಮೂಲ ವೇತನ, ಮನೆ ಬಾಡಿಗೆ ಭತ್ಯೆ (HRA), ಪ್ರಯಾಣ ಭತ್ಯೆ (TA) ಮತ್ತು ವೈದ್ಯಕೀಯ ಭತ್ಯೆಗಳು ಸೇರಿರುತ್ತವೆ. ಯಾವುದೇ ರೀತಿಯ ತೆರಿಗೆ ಅಥವಾ ಇತರ ಕಡಿತಗಳನ್ನು ಮಾಡುವ ಮುನ್ನ ಲೆಕ್ಕ ಹಾಕಲಾಗುವ ಒಟ್ಟು ಸಂಬಳವೇ ಗ್ರಾಸ್ ಸ್ಯಾಲರಿ ಆಗಿರುತ್ತದೆ. ಆದರೆ ಈ ಪೂರ್ಣ ಮೊತ್ತ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುವುದಿಲ್ಲ.!

ನೆಟ್ ಸ್ಯಾಲರಿ ಎಂದರೇನು?

ನಿಮ್ಮ ಒಟ್ಟು ಗ್ರಾಸ್ ಸ್ಯಾಲರಿಯಿಂದ ಸರ್ಕಾರಿ ನಿಯಮಾವಳಿಗಳು ಹಾಗೂ ಕಂಪನಿಯ ನಿಯಮಗಳ ಪ್ರಕಾರ ಕೆಲವು ಕಡ್ಡಾಯ ಕಡಿತಗಳನ್ನು ಮಾಡಿದ ನಂತರ ಕೊನೆಯದಾಗಿ ನಿಮ್ಮ ಕೈಗೆ ಸಿಗುವ ಸಂಬಳವೇ ನೆಟ್ ಸ್ಯಾಲರಿ. ಇದನ್ನು ಟೇಕ್ ಹೋಮ್ ಸ್ಯಾಲರಿ ಎಂದೂ ಸಹ ಕರೆಯುತ್ತಾರೆ. ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುವ ನಿಖರವಾದ ಹಣದ ಮೊತ್ತ ಇದಾಗಿದ್ದು, ನಿಮ್ಮ ಮಾಸಿಕ ಖರ್ಚುಗಳನ್ನು ನಿಭಾಯಿಸಲು ಈ ಮೊತ್ತವೇ ಆಧಾರವಾಗಿರುತ್ತದೆ.

ಸಂಬಳದಲ್ಲಿ ಕಡಿತವಾಗುವ ಪ್ರಮುಖ ಅಂಶಗಳು:

ಗ್ರಾಸ್ ಸಂಬಳದಿಂದ ನೆಟ್ ಸಂಬಳಕ್ಕೆ ಇರುವ ವ್ಯತ್ಯಾಸಕ್ಕೆ ಕೆಲವು ಪ್ರಮುಖ ಕಡಿತಗಳು ಕಾರಣವಾಗಿರುತ್ತವೆ. ಇದರಲ್ಲಿ ಮೊದಲನೆಯದಾಗಿ PF ಕಡಿತವಾಗುತ್ತದೆ. ಇದರೊಂದಿಗೆ ನಿಮ್ಮ ಆದಾಯದ ಮಿತಿಗೆ ಅನುಗುಣವಾಗಿ ಪ್ರೊಫೆಷನಲ್ ಟ್ಯಾಕ್ಸ್ ಮತ್ತು ಆದಾಯ ತೆರಿಗೆ ಕಡಿತಗೊಳ್ಳುತ್ತದೆ. ಇದರೊಂದಿಗೆ, ಕಂಪನಿಯು ನೀಡುವ ಆರೋಗ್ಯ ವಿಮೆ ಅಥವಾ ಇತರೆ ಸೌಲಭ್ಯಗಳ ಪ್ರೀಮಿಯಂ ಮೊತ್ತವೂ ಇದರಲ್ಲಿ ಕಟಾವಾಗುವುದರಿಂದ ಕೈಗೆ ಸಿಗುವ ನೆಟ್ ಸಂಬಳದ ಪ್ರಮಾಣ ಕಡಿಮೆಯಾಗುತ್ತದೆ.

ಉದಾಹರಣೆಗೆ:

ಯಾರೋ ಒಬ್ಬರಿಗೆ ತಿಂಗಳಿಗೆ ₹50,000 ಗ್ರೋಸ್ ಸ್ಯಾಲರಿ ಇರುವ ಆಫರ್ ಲೆಟರ್ ಸಿಕ್ಕಿದೆ ಎಂದು ಭಾವಿಸೋಣ. ಅವರ ಕೈಗೆ ಬರುವ ನೆಟ್ ಸ್ಯಾಲರಿ ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬ ವಿವರ ಇಲ್ಲಿದೆ:

ಮಾಸಿಕ ಸಂಬಳದ ಲೆಕ್ಕಾಚಾರ:

  • ಒಟ್ಟು ಗ್ರೋಸ್ ಸ್ಯಾಲರಿ : ₹50,000

ಸಂಬಳದಿಂದ ಆಗುವ ಕಡಿತಗಳು (ಅಂದಾಜು):

  • PF (Provident Fund): ₹1,800 (ಮೂಲ ವೇತನದ ಆಧಾರದ ಮೇಲೆ)

  • Professional Tax: ₹200 (ಕರ್ನಾಟಕ ಸರ್ಕಾರದ ನಿಯಮದಂತೆ)

  • TDS / Income Tax: ₹1000 (ನಿಮ್ಮ ತೆರಿಗೆ ಸ್ಲ್ಯಾಬ್ ಆಧಾರದ ಮೇಲೆ)

  • ಆರೋಗ್ಯ ವಿಮೆ (Insurance): ₹500

  • ಒಟ್ಟು ಕಡಿತಗಳು (Total Deductions): ₹3500

ಕೈಗೆ ಬರುವ ಸಂಬಳ:

  • ಫಾರ್ಮುಲಾ: ಗ್ರೋಸ್ ಸ್ಯಾಲರಿ - ಒಟ್ಟು ಕಡಿತಗಳು

  • ಲೆಕ್ಕಾಚಾರ: ₹50,000 - ₹3,500 = ₹46,500

ಆದ್ದರಿಂದ, ಆಫರ್ ಲೆಟರ್‌ನಲ್ಲಿ ₹50,000 ಇದ್ದರೂ ಬ್ಯಾಂಕ್ ಖಾತೆಗೆ ಜಮೆಯಾಗುವುದು ₹46,500 ಮಾತ್ರ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಿರಿಯ ಸಹೋದ್ಯೋಗಿ ಮೇಲೆ ಅತ್ಯಾಚಾರ: ‘Tehelka’ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಎ-14 ಪ್ರದೋಶ್ ಮಾಫಿ ಸಾಕ್ಷಿ ವಿಚಾರಣೆ, ದರ್ಶನ್ ಗೆ "ಕಂಟಕವಾಗುತ್ತಾ? ಆ.10 ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು!

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಮತ್ತೊಂದು ಶಾಕ್; ಪ್ರದೋಷ್ ಬಳಿಕ ಕೋರ್ಟ್‌ಲ್ಲಿ ಸತ್ಯ ಹೇಳಲು ಮುಂದಾದ ವಿನಯ್, ರವಿಶಂಕರ್!

ಶಿವನ ಮುಂದೆ ಇರುವ ಬಸವ ನಾನು; ನಾನೇ ಮುಖ್ಯಮಂತ್ರಿ ಇದ್ದಂತೆ: ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್

ಕೋರ್ಟ್ ಕಲಾಪ ವರದಿಗೆ ಅವಕಾಶ, Audio-Video ಕ್ಲಿಪ್ ಹಂಚಿಕೆಗೆ ಬ್ರೇಕ್: ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್ ಮಹತ್ವದ ಸ್ಪಷ್ಟನೆ