ಭಾರತದ ಕರೆನ್ಸಿ Online Desk
ವಾಣಿಜ್ಯ

ಡಾಲರ್ ಬೇಡವೇ ಬೇಡ; ಭಾರತದ ಕರೆನ್ಸಿಯನ್ನೇ ನೇರವಾಗಿ ಸ್ವೀಕರಿಸುವ ರಾಷ್ಟ್ರಗಳಿವು!

ಭಾರತದ ಕರೆನ್ಸಿ ವಿದೇಶಗಳಲ್ಲೂ ರಾಜನಂತೆ ಚಲಾವಣೆಯಾಗುತ್ತದೆ ಎಂಬ ಸಂಗತಿ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವ ವಿಷಯವಾಗಿದೆ. ಅದರಂತೆ, ಪ್ರವಾಸಕ್ಕೆ ಹೋಗುವಾಗ ಡಾಲರ್ ಆಗಿ ಬದಲಾಯಿಸುವ ಜಂಜಾಟವಿಲ್ಲದೆ ನಮ್ಮ ದೇಶದ ರೂಪಾಯಿಯನ್ನೇ ನೇರವಾಗಿ ಬಳಸಿ ಶಾಪಿಂಗ್ ಮಾಡಬಹುದಾದ ಕೆಲವು ದೇಶಗಳ ವಿವರ ಇಲ್ಲಿದೆ.

ನವದೆಹಲಿ: ವಿದೇಶಕ್ಕೆ ಹೋಗಬೇಕು ಅಂದ್ರೆ ಮೊದಲು ನೆನಪಾಗೋದು ಪಾಸ್ಪೋರ್ಟ್, ವೀಸಾ ಮತ್ತು ಡಾಲರ್. ಆದರೆ ನಿಮಗೆ ಗೊತ್ತಾ ಕೆಲವು ದೇಶಗಳಿಗೆ ಹೋದರೆ ಭಾರತೀಯ ರೂಪಾಯಿಯನ್ನೇ ನೇರವಾಗಿ ಬಳಸಬಹುದು. ಕರೆನ್ಸಿ ಎಕ್ಸ್ಚೇಂಜ್ ಮಾಡುವ ತಲೆನೋವು ಇರುವುದಿಲ್ಲ. ಗಡಿ ಹಂಚಿಕೊಂಡಿರುವ ಮತ್ತು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಕೆಲವು ರಾಷ್ಟ್ರಗಳಲ್ಲಿ ರೂಪಾಯಿ ಅಧಿಕೃತವಾಗಿ ಅಥವಾ ಅನಧಿಕೃತವಾಗಿ ಚಲಾವಣೆಯಲ್ಲಿದೆ. ಆ ದೇಶಗಳು ಯಾವುವು? ಹಾಗೂ ಆ ದೇಶದಲ್ಲಿ ಹಣವನ್ನು ಎಲ್ಲಿ ಬಳಸಬಹುದು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ:

ನೆರೆರಾಷ್ಟ್ರ ನೆಪಾಳದಲ್ಲಿ ರೂಪಾಯಿ ಕಾರುಬಾರು

ಭಾರತದ ಪಕ್ಕದಲ್ಲೇ ಇರುವ ನೆಪಾಳದಲ್ಲಿ ಭಾರತೀಯ ರೂಪಾಯಿ ಅತ್ಯಂತ ಸುಲಭವಾಗಿ ಚಲಾವಣೆಯಾಗುತ್ತದೆ. ಇಲ್ಲಿನ ಹೋಟೆಲ್‌ಗಳು, ಪ್ರವಾಸಿ ತಾಣಗಳು ಮತ್ತು ಸಣ್ಣ ಪುಟ್ಟ ಅಂಗಡಿಗಳಲ್ಲೂ ಭಾರತದ ನೋಟುಗಳನ್ನು ಜನರು ಸಂತೋಷದಿಂದ ಸ್ವೀಕರಿಸುತ್ತಾರೆ. ಮೌಲ್ಯದ ಲೆಕ್ಕಾಚಾರದಲ್ಲಿ ಭಾರತದ ಒಂದು ರೂಪಾಯಿಯು ನೆಪಾಳದ ಒಂದು ಪಾಯಿಂಟ್ ಆರು ರೂಪಾಯಿಗೆ ಸಮನಾಗಿರುತ್ತದೆ. ಆದರೆ ಇಲ್ಲಿ ನೂರು ರೂಪಾಯಿಗಿಂತ ದೊಡ್ಡ ಮುಖಬೆಲೆಯ ನೋಟುಗಳನ್ನು ಬಳಸುವ ಮುನ್ನ ಅಲ್ಲಿನ ಸ್ಥಳೀಯ ನಿಯಮಗಳನ್ನು ಗಮನಿಸಬೇಕಾಗುತ್ತದೆ.

ಭೂತಾನ್ ದೇಶದಲ್ಲಿ ಅಧಿಕೃತ ಮಾನ್ಯತೆ

ಭೂತಾನ್ ದೇಶದಲ್ಲಿ ಭಾರತೀಯ ರೂಪಾಯಿಗೆ ಅಧಿಕೃತ ಕರೆನ್ಸಿಯ ಸ್ಥಾನಮಾನ ಸಿಕ್ಕಿದೆ. ಭೂತಾನ್ ದೇಶದ ಕರೆನ್ಸಿಯಾದ ನಗುಲ್ಟ್ರಮ್ ಮತ್ತು ಭಾರತದ ರೂಪಾಯಿಯ ಮೌಲ್ಯ ಎರಡು ಒಂದೇ ಆಗಿದೆ. ಅಂದರೆ ಭಾರತದ ಒಂದು ರೂಪಾಯಿ ಅಲ್ಲಿನ ಒಂದು ನಗುಲ್ಟ್ರಮ್‌ಗೆ ಸಮನಾಗಿರುತ್ತದೆ. ಪಾರೊ ಮತ್ತು ಥಿಂಪು ಸೇರಿದಂತೆ ಭೂತಾನ್‌ನ ಎಲ್ಲಾ ಪ್ರಮುಖ ನಗರಗಳಲ್ಲಿ ಭಾರತದ ಕರೆನ್ಸಿಯನ್ನು ಬಳಸಬಹುದು. ವಿಶೇಷವೆಂದರೆ ಭಾರತೀಯರು ಭೂತಾನ್‌ಗೆ ಭೇಟಿ ನೀಡಲು ಯಾವುದೇ ವೀಸಾ ಪಡೆಯುವ ಅಗತ್ಯವಿರುವುದಿಲ್ಲ.

ಆಫ್ರಿಕಾದ ಜಿಂಬಾಬ್ವೆಯಲ್ಲೂ ಭಾರತದ ಕರೆನ್ಸಿ!

ಆಫ್ರಿಕಾ ಖಂಡದ ಜಿಂಬಾಬ್ವೆ ದೇಶದಲ್ಲಿ ಭಾರತೀಯ ರೂಪಾಯಿಯನ್ನು ಅಧಿಕೃತ ವಿದೇಶಿ ಕರೆನ್ಸಿ ಎಂದು ಗುರುತಿಸಲಾಗಿದೆ. ಜಿಂಬಾಬ್ವೆ ದೇಶವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ ಸಮಯದಲ್ಲಿ ತನ್ನದೇ ಆದ ಕರೆನ್ಸಿಯನ್ನು ಸ್ಥಗಿತಗೊಳಿಸಿ ಜಗತ್ತಿನ ಪ್ರಮುಖ ಕರೆನ್ಸಿಗಳಿಗೆ ಮುಕ್ತ ಅವಕಾಶ ನೀಡಿತು. ಅದರಂತೆ, ಅಲ್ಲಿ ಯುಎಸ್ ಡಾಲರ್ ಜೊತೆಗೆ ಭಾರತೀಯ ರೂಪಾಯಿಯನ್ನು ಕೂಡ ವ್ಯವಹಾರಗಳಿಗಾಗಿ ಬಳಸಲು ಕಾನೂನುಬದ್ಧವಾಗಿ ಅವಕಾಶ ಕಲ್ಪಿಸಲಾಗಿದೆ.

ಶ್ರೀಲಂಕಾ ಮತ್ತು ಮಾಲ್ಡೀವ್ಸ್:

ಶ್ರೀಲಂಕಾ ಮತ್ತು ಮಾಲ್ಡೀವ್ಸ್ ದೇಶಗಳಲ್ಲಿ ಭಾರತೀಯ ರೂಪಾಯಿಗೆ ಅಧಿಕೃತ ಕರೆನ್ಸಿ ಮಾನ್ಯತೆ ಇಲ್ಲದಿದ್ದರೂ ಸಹ ಅಲ್ಲಿನ ಪ್ರಮುಖ ಪ್ರವಾಸಿ ಪ್ರದೇಶಗಳಲ್ಲಿ ಭಾರತದ ಹಣವನ್ನು ಸ್ವೀಕರಿಸಲಾಗುತ್ತದೆ. ಭಾರತದಿಂದ ಅತಿ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುವುದರಿಂದ ಪ್ರವಾಸಿ ಹೋಟೆಲ್‌ಗಳು ಮತ್ತು ಕೆಲವು ದೊಡ್ಡ ಮಳಿಗೆಗಳಲ್ಲಿ ಭಾರತದ ನೋಟುಗಳ ಮೂಲಕವೇ ವ್ಯವಹಾರ ನಡೆಸಲು ಅವಕಾಶ ನೀಡಲಾಗುತ್ತದೆ. ಇದಲ್ಲದೆ ಮ್ಯಾನ್ಮಾರ್ ದೇಶದ ಗಡಿ ಪ್ರದೇಶಗಳಲ್ಲೂ ಕೆಲವು ಕಡೆ ಭಾರತದ ರೂಪಾಯಿ ಬಳಕೆಯಲ್ಲಿದೆ. ಇದರೊಂದಿಗೆ ದುಬೈನ ಕೆಲವು ಪ್ರಮುಖ ಭಾರತೀಯ ವ್ಯಾಪಾರಿಗಳ ಅಂಗಡಿಗಳಲ್ಲಿ ಭಾರತೀಯ ರೂಪಾಯಿಯನ್ನು ನೇರವಾಗಿ ಸ್ವೀಕರಿಸಲಾಗುತ್ತದೆ.

ಗಮನಿಸಬೇಕಾದ ಮುಖ್ಯ ಅಂಶ:

ನೇಪಾಳ ಮತ್ತು ಭೂತಾನ್ ದೇಶದಲ್ಲಿ ಒಬ್ಬ ವ್ಯಕ್ತಿ ಗರಿಷ್ಠ ₹25,000 ರೂ.ಗಳವರೆಗೆ ಮಾತ್ರ ಇಂತಹ ಹೈ-ಡಿನಾಮಿನೇಷನ್ (₹200 ಮತ್ತು ₹500) ನೋಟುಗಳನ್ನು ಕೊಂಡೊಯ್ಯಬಹುದು. ಆದ್ರೆ, ₹10, ₹20, ₹50 ಮತ್ತು ₹100 ರೂಪಾಯಿ ಮುಖಬೆಲೆಯ ನೋಟುಗಳನ್ನು ತೆಗೆದುಕೊಂಡು ಹೋಗಲು ಯಾವುದೇ ಮಿತಿ ಅಥವಾ ನಿರ್ಬಂಧಗಳಿಲ್ಲ. ಇವುಗಳನ್ನು ನೀವು ಎಷ್ಟು ಬೇಕಾದರೂ ಕೊಂಡೊಯ್ಯಬಹುದು.

ಏತನ್ಮಧ್ಯೆ, ಈಗ ಡಿಜಿಟಲ್ ಇಂಡಿಯಾದ UPI ವ್ಯವಸ್ಥೆಯು ಜಾಗತಿಕ ಮಟ್ಟದಲ್ಲಿ ವಿಸ್ತರಿಸುತ್ತಿದೆ. ನಿಮ್ಮ ಮೊಬೈಲ್‌ನಲ್ಲಿರುವ PhonePe, Google Pay ಅಥವಾ BHIM ಆಪ್‌ಗಳ ಮೂಲಕ QR Code ಸ್ಕ್ಯಾನ್ ಮಾಡಿ, ಭಾರತೀಯ ಬ್ಯಾಂಕ್ ಖಾತೆಯಿಂದ ನೇರವಾಗಿ ಸುಮಾರು 10 ದೇಶಗಳಲ್ಲಿ ಪೇ ಮಾಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶುಭಮನ್ ಗಿಲ್ 2ನೇ ಏಕದಿನ ದ್ವಿಶತಕ; ರೋಹಿತ್ ಶರ್ಮಾ ಬಳಿಕ ಐತಿಹಾಸಿಕ ದಾಖಲೆ!

'ಅಪಾಯಕಾರಿ ಹಾದಿ': ರಷ್ಯಾದ ಸೇನೆಗೆ ಸೇರದಂತೆ ಭಾರತೀಯರಿಗೆ ಸರ್ಕಾರದ ಎಚ್ಚರಿಕೆ

ಫ್ಲೈದುಬೈ ವಿಮಾನದಲ್ಲಿ ಪೈಲಟ್‌ಗಳ ರಕ್ತಸಿಕ್ತ ಮಾರಮಾರಿ: ಚಾಕುವಿನಿಂದ ಇರಿದ ಸಹೋದ್ಯೋಗಿಯನ್ನು ಎದುರಿಸಿ ಹಿಮ್ಮೆಟ್ಟಿಸಿದ್ದು ಭಾರತೀಯ ಪೈಲಟ್!

2001ರ ನಂತರ ಭಾರತದಲ್ಲಿ 4ನೇ ಅತ್ಯಂತ ಕಡಿಮೆ ಮಟ್ಟದ ಮುಂಗಾರು ಮಳೆ: ಐಎಂಡಿ

Video: ಆಕಾಶದಲ್ಲೇ ಪೈಲಟ್‌ಗಳ ರಕ್ತಸಿಕ್ತ ಮಾರಮಾರಿ; ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನ ಸೌದಿಯಲ್ಲಿ ತುರ್ತು ಲ್ಯಾಂಡಿಂಗ್; ತಪ್ಪಿದ ದೊಡ್ಡ ದುರಂತ!