ಇಂಡಿಯಾ ಪೋಸ್ಟ್ ಡಿಜಿಪಿನ್ AI Image
ವಾಣಿಜ್ಯ

ಇನ್ಮುಂದೆ ಮನೆ ಹುಡುಕೋ ಕಿರಿಕಿರಿ ಇಲ್ಲ: ಅಂಚೆ ಇಲಾಖೆಯ ಡಿಜಿಪಿನ್ ಇದ್ರೆ ಸಾಕು! ಅದನ್ನ ಪಡೆಯೋದು ಹೇಗೆ ಗೊತ್ತಾ?

ದೇಶದ ವಿಳಾಸ ವ್ಯವಸ್ಥೆಯಲ್ಲಿ ಮಹತ್ತರ ಕ್ರಾಂತಿ ತಂದ ಇಂಡಿಯಾ ಪೋಸ್ಟ್! ಹತ್ತು ಅಂಕಿಯ ಡಿಜಿಪಿನ್ ಕೋಡ್ ಜಾರಿ: ಇನ್ಮುಂದೆ ಉದ್ದನೆಯ ವಿಳಾಸ ಬೇಡ ಕೇವಲ ಹತ್ತು ಅಂಕಿಯ ಡಿಜಿಪಿನ್ ಕೋಡ್ ಇದ್ದರೆ ಸಾಕು, ನಿಖರವಾಗಿ ಸಿಗಲಿದೆ ನಿಮ್ಮ ಮನೆ.

India Post DIGIPIN: ಭಾರತೀಯ ಅಂಚೆ ಇಲಾಖೆಯು ದೇಶದ ಪ್ರತಿಯೊಂದು ಇಂಚು ಭೂಮಿಯನ್ನು ಡಿಜಿಟಲ್ ರೂಪದಲ್ಲಿ ಗುರುತಿಸಲು ಡಿಜಿಪಿನ್ ಎನ್ನುವ ಕ್ರಾಂತಿಕಾರಕ ರಾಷ್ಟ್ರೀಯ ಜಿಯೋ ಕೋಡೆಡ್ ವಿಳಾಸ ವ್ಯವಸ್ಥೆಯನ್ನು ಪರಿಚಯಿಸಿದೆ. ಇಷ್ಟು ದಿನಗಳ ಕಾಲ ಸುದೀರ್ಘವಾದ ವಿಳಾಸಗಳನ್ನು ಹುಡುಕಲು ಪರದಾಡುತ್ತಿದ್ದ ಇ ಕಾಮರ್ಸ್ ಮತ್ತು ತುರ್ತು ಸೇವೆಗಳ ಸಂಸ್ಥೆಗಳಿಗೆ ಈ ಹತ್ತು ಅಂಕಿಯ ಕೋಡ್ ಹೊಸ ದಿಕ್ಸೂಚಿಯಾಗಲಿದ್ದು ದೇಶದ ಪ್ರತಿಯೊಂದು ಕಟ್ಟಡಕ್ಕೂ ನಿಖರವಾದ ಡಿಜಿಟಲ್ ಗುರುತನ್ನು ನೀಡಲಿದೆ. ಹಾಗಾಗಿ, ನಿಮ್ಮ ಮನೆ ಅಥವಾ ಕಚೇರಿಯ 10-ಅಂಕಿಯ ಡಿಜಿಪಿನ್ ಕೋಡ್ ಅನ್ನು ಉಚಿತವಾಗಿ ಮತ್ತು ಸುಲಭವಾಗಿ ಪಡೆಯಲು ಹೀಗೆ ಮಾಡಿ...

ವಿಧಾನ 1: ಅಧಿಕೃತ ವೆಬ್‌ಸೈಟ್ ಮೂಲಕ ಪಡೆಯುವುದು ಹೇಗೆ?

  • ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಇಂಡಿಯಾ ಪೋಸ್ಟ್‌ನ ಅಧಿಕೃತ ಡಿಜಿಪಿನ್ ಪೋರ್ಟಲ್ ಆದ dac.indiapost.gov.in/mydigipin ಗೆ ಭೇಟಿ ನೀಡಿ.

  • ಲೊಕೇಶನ್ ಅನುಮತಿ ನೀಡಿ: ವೆಬ್‌ಸೈಟ್ ತೆರೆದ ತಕ್ಷಣ ನಿಮ್ಮ ಸಾಧನದ ಜಿಪಿಎಸ್ ಬಳಸಲು ಅನುಮತಿ ಕೇಳುತ್ತದೆ. ಅಲ್ಲಿ 'I Consent' ಅಥವಾ 'Allow' ಎಂಬುದನ್ನು ಕ್ಲಿಕ್ ಮಾಡಿ. (ಗಮನಿಸಿ: ನಿಮ್ಮ ಫೋನ್‌ನಲ್ಲಿ ಜಿಪಿಎಸ್ ಆನ್ ಇರಬೇಕು).

  • ಮ್ಯಾಪ್‌ನಲ್ಲಿ ಜಾಗ ಗುರುತಿಸಿ: ನೀವು ಪ್ರಸ್ತುತ ಇರುವ ಜಾಗದ ಆಧಾರದ ಮೇಲೆ ಮ್ಯಾಪ್ ನಿಮ್ಮ ನಿಖರವಾದ ಲೊಕೇಶನ್ ತೋರಿಸುತ್ತದೆ. ಒಂದು ವೇಳೆ ನೀವು ಬೇರೆ ವಿಳಾಸದ ಕೋಡ್ ಪಡೆಯಬೇಕಿದ್ದರೆ, ಸರ್ಚ್ ಬಾರ್‌ನಲ್ಲಿ ಆ ವಿಳಾಸವನ್ನು ಟೈಪ್ ಮಾಡಿ ಅಥವಾ ಮ್ಯಾಪ್ ಅನ್ನು ಜೂಮ್ ಮಾಡಿ ಆ ನಿಖರವಾದ ಕಟ್ಟಡ/ಸ್ಥಳದ ಮೇಲೆ ಕ್ಲಿಕ್ ಮಾಡಿ.

  • ಡಿಜಿಪಿನ್ ಕೋಡ್ ಪಡೆಯಿರಿ: ನೀವು ಜಾಗವನ್ನು ಆಯ್ಕೆ ಮಾಡಿದ ತಕ್ಷಣ, ಪರದೆಯ ಮೇಲೆ 10-ಅಂಕಿಯ ವಿಶಿಷ್ಟ ಡಿಜಿಪಿನ್ ಕೋಡ್ (ಉದಾಹರಣೆಗೆ: 234C-JM7P-FT ಮಾದರಿಯಲ್ಲಿ) ಕಾಣಿಸಿಕೊಳ್ಳುತ್ತದೆ.

  • ಕ್ಯೂಆರ್ ಕೋಡ್ ಮತ್ತು ಡೌನ್‌ಲೋಡ್: ಅದರ ಕೆಳಗೆ 'QR Code' ಎಂಬ ಆಯ್ಕೆ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಡಿಜಿಟಲ್ ವಿಳಾಸದ ಕ್ಯೂಆರ್ ಕೋಡ್ ಅನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದು.

ವಿಧಾನ 2: 'DIGIPIN' ಮೊಬೈಲ್ ಆ್ಯಪ್ ಮೂಲಕ ಪಡೆಯುವುದು ಹೇಗೆ?

  • ಆ್ಯಪ್ ಡೌನ್‌ಲೋಡ್ ಮಾಡಿ: ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಇಂಡಿಯಾ ಪೋಸ್ಟ್‌ನ ಅಧಿಕೃತ "DIGIPIN by India Post" ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

  • ಲೊಕೇಶನ್ ಆನ್ ಮಾಡಿ: ಆ್ಯಪ್ ತೆರೆದು ನಿಮ್ಮ ಫೋನ್‌ನ ಜಿಪಿಎಸ್ ಲೊಕೇಶನ್‌ಗೆ ಅನುಮತಿ ನೀಡಿ.

  • ಕೋಡ್ ವೀಕ್ಷಿಸಿ: ಆ್ಯಪ್ ಸ್ವಯಂಚಾಲಿತವಾಗಿ ನೀವು ನಿಂತಿರುವ 4x4 ಮೀಟರ್ ಜಾಗದ 10-ಅಂಕಿಯ ಕೋಡ್ ಅನ್ನು ಪರದೆಯ ಮೇಲೆ ಪ್ರದರ್ಶಿಸುತ್ತದೆ. ಅದನ್ನು ನೀವು ಕಾಪಿ ಮಾಡಿಕೊಳ್ಳಬಹುದು.

ಡಿಜಿಪಿನ್ ಬಳಕೆಯಿಂದ ಆಗುವ ಲಾಭಗಳೇನು?

  • ನಿಖರವಾದ ವಿಳಾಸ: ಹಳೆಯ 6-ಅಂಕಿಯ ಪಿನ್‌ಕೋಡ್ ಇಡೀ ಏರಿಯಾವನ್ನು ಸೂಚಿಸಿದರೆ, ಈ 10-ಅಂಕಿಯ ಡಿಜಿಪಿನ್ ನಿಮ್ಮ ಮನೆಯ ಇಂಟರ್‌ಲಾಕ್ ಅಥವಾ ಗೇಟ್ ಎಲ್ಲಿದೆ ಎಂಬುದನ್ನು 3.8 ಮೀಟರ್ ನಿಖರತೆಯಲ್ಲಿ ತೋರಿಸುತ್ತದೆ.

  • ತಪ್ಪು ವಿತರಣೆ ಇರುವುದಿಲ್ಲ: ಆನ್‌ಲೈನ್ ಶಾಪಿಂಗ್ (ಅಮೆಜಾನ್, ಫ್ಲಿಪ್‌ಕಾರ್ಟ್ ಇತ್ಯಾದಿ) ಮತ್ತು ಕೊರಿಯರ್ ಎಕ್ಸಿಕ್ಯೂಟಿವ್‌ಗಳು ಯಾವುದೇ ಗೊಂದಲವಿಲ್ಲದೆ ನೇರವಾಗಿ ನಿಮ್ಮ ಮನೆಗೆ ಬರಬಹುದು.

  • ತುರ್ತು ಸೇವೆಗಳಿಗೆ ಸಹಕಾರಿ: ಆಂಬ್ಯುಲೆನ್ಸ್, ಫೈರ್ ಬ್ರಿಗೇಡ್ ಅಥವಾ ಪೊಲೀಸರಿಗೆ ಈ 10 ಅಂಕಿಯ ಕೋಡ್ ನೀಡಿದರೆ, ಅವರು ಯಾವುದೇ ವಿಳಾಸ ಹುಡುಕುವ ಅಗತ್ಯವಿಲ್ಲದೆ ಜಿಪಿಎಸ್ ಮೂಲಕ ತಕ್ಷಣ ಸ್ಥಳಕ್ಕೆ ತಲುಪಬಹುದು.

  • ಆಫ್‌ಲೈನ್‌ನಲ್ಲೂ ಕೆಲಸ ಮಾಡುತ್ತದೆ: ಒಮ್ಮೆ ನೀವು ನಿಮ್ಮ ಕೋಡ್ ತಿಳಿದುಕೊಂಡರೆ, ಇಂಟರ್ನೆಟ್ ಇಲ್ಲದಿದ್ದಾಗಲೂ ಈ ಕೋಡ್ ಅನ್ನು ವಿಳಾಸ ಗುರುತಿಸಲು ಬಳಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Bengaluru Tunnel Road: ಸ್ವತಃ ಅಖಾಡಕ್ಕಿಳಿದ ಗೌತಮ್ ಅದಾನಿ; CM ಡಿಕೆಶಿ ನಿವಾಸಕ್ಕೆ ದಿಢೀರ್ ಭೇಟಿ – ಸುರಂಗ ರಸ್ತೆ ಕುರಿತು ಮಹತ್ವದ ಚರ್ಚೆ

ನಾಲ್ಕು ಗೋಡೆಗಳ ನಡುವೆ ನಡೆದ ಜಗಳ SC/ST ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಯಾದಗಿರಿ: ವಿದ್ಯುತ್ ಕಂಬಕ್ಕೆ ಬೊಲೆರೊ ವಾಹನ ಡಿಕ್ಕಿ: ಭೀಕರ ಅಪಘಾತದಲ್ಲಿ ಮೂವರು ಸಾವು; 8 ಕಾರ್ಮಿಕರ ಸ್ಥಿತಿ ಗಂಭೀರ

ಆರ್ಥಿಕ ದಿಗ್ಬಂಧನಕ್ಕೆ ಕೆಂಡಾಮಂಡಲ: ಅಮೆರಿಕಕ್ಕೆ ಸಾಥ್ ನೀಡುವ ದೇಶಗಳೂ ನಮಗೆ ಶತ್ರುಗಳೇ; ಇರಾನ್ ಕಠಿಣ ಎಚ್ಚರಿಕೆ

Raksha Bandhan Ad: ಬ್ರಾ ಧರಿಸಿ ಸಹೋದರ, ಸಾಕಿದ ನಾಯಿಗೂ 'ರಾಖಿ' ಕಟ್ಟಿದ ನಟಿ ಕೃತಿ ಸನೋನ್, ನೆಟ್ಟಿಗರ ತರಾಟೆ! Video