ನವದೆಹಲಿ: ಅಭರಣ ಪ್ರಿಯರಿಗೆ ಸ್ವಲ್ಪ ನಿರಾಳದ ಸುದ್ದಿ ಸಿಕ್ಕಿದೆ. ಕಳೆದ ಕೆಲ ದಿನಗಳಿಂದ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿಯ ದರಗಳು ಶುಕ್ರವಾರ ದಿಢೀರ್ ಕುಸಿತ ಕಂಡಿವೆ. ಮಲ್ಟಿ ಕಮೋಡಿಟಿ ಎಕ್ಸ್ ಚೆಂಜ್ (MCX)ನಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಶೇ.15 ರಷ್ಟು ಕುಸಿತ ಕಂಡಿದೆ.
ಚಿನ್ನದ ಬೆಲೆ ಶೇ.6.5 ರಷ್ಟು ಅಂದರೆ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು ರೂ. 12,000 ಕಡಿಮೆಯಾಗಿದೆ. ಗುರುವಾರ 10 ಗ್ರಾಂ ಚಿನ್ನದ ಬೆಲೆ ರೂ. 1,93,096 ಆಗಿತ್ತು. MCX ನಲ್ಲಿ ಚಿನ್ನದ ದರ ಈಗ ಶೇ.1.88 ರಷ್ಟು ಕುಸಿದು, 10 ಗ್ರಾಂಗೆ 1,80,499 ರೂ. ಗಳಲ್ಲಿ ವಹಿವಾಟು ನಡೆಸಿದೆ.
ಬೆಳ್ಳಿಯಲ್ಲೂ ದರ ಕುಸಿತ: ಇನ್ನೂ ಎಂಸಿಎಕ್ಸ್‌ನಲ್ಲಿ 3,99,893 ರೂ.ನಲ್ಲಿ ವಹಿವಾಟು ನಡೆಸಿದ ಬೆಳ್ಳಿ ಪ್ರತಿ ಕೆಜಿಗೆ ಶೇ.4 ರಷ್ಟು (ಸುಮಾರು 48,000 ರೂ.) ಇಳಿಕೆಯಾಗಿ ಕೆಜಿ 3,83,898 ರೂ.ಗಳಿಗೆ ವಹಿವಾಟು ನಡೆಸಿದೆ. ಗುರುವಾರ ಕೆಜಿ ಬೆಳ್ಳಿ 4.20 ಲಕ್ಷ ರೂ.ಗೆ ತಲುಪಿತ್ತು.
ಬೆಂಗಳೂರಿನಲ್ಲಿ ರೇಟ್ ಎಷ್ಟು ಗೊತ್ತಾ?
ಜನವರಿ 30 ರಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 7500 ರೂ. ಇಳಿಕೆಯಾಗಿದ್ದು, ಈಗ 156,400 ರೂ.ಗೆ ತಲುಪಿದೆ.ಈ ಮಧ್ಯೆ 24 ಕ್ಯಾರೆಟ್ ಚಿನ್ನದ ಬೆಲೆ 8,230 ರೂ. ಇಳಿಕೆಯಾಗಿದ್ದು, ರೂ. 170,620 ರೂ.ಗೆ ತಲುಪಿದೆ. ಅದೇ ರೀತಿ
ಬೆಳ್ಳಿ ಬೆಲೆಗಳು ಪ್ರತಿ ಕೆಜಿಗೆ 15000 ರೂ.ಗಳಷ್ಟು ಕುಸಿದಿದ್ದು, ಈಗ ಅದು 395,000 ರೂ.ಗಳಷ್ಟಿದೆ. ಅದೇ ರೀತಿ, 100 ಗ್ರಾಂ ಬೆಳ್ಳಿಯ ಬೆಲೆ 39,500 ರೂ.ಗಳಷ್ಟಿದ್ದು, ಅದು 1500 ರೂ.ಗಳಷ್ಟು ಕುಸಿದಿದೆ.