ಶೀಘ್ರದಲ್ಲೇ ಎಥೆನಾಲ್ ಅಡುಗೆ ಅನಿಲ! Online Desk
ವಾಣಿಜ್ಯ

LPG ಸಿಲಿಂಡರ್‌ಗೆ ಬ್ರೇಕ್? ಶೀಘ್ರದಲ್ಲೇ ಬರಲಿದೆ ಕಡಿಮೆ ಬೆಲೆಯ ಎಥೆನಾಲ್ ಅಡುಗೆ ಅನಿಲ!

ಇರಾನ್-ಅಮೆರಿಕ ಯುದ್ಧ ಕಾರಣ ದೇಶಾದ್ಯಂತ ಎಲ್‌ಪಿಜಿ ಇಂಧನದ ಬೆಲೆ ಜಾಸ್ತಿ ಆಗುತ್ತಿದೆ. ಇದರ ಬೆನ್ನಲ್ಲೇ ಎಲ್‌ಪಿಜಿ ಸಮಸ್ಯೆಗೆ ಕೇಂದ್ರ ಸರ್ಕಾರ ದೊಡ್ಡ ಪರಿಹಾರ ಕಂಡುಹಿಡಿದಿದ್ದು, ಶೀಘ್ರದಲ್ಲೇ ಅಡಿಗೆ ಅನಿಲದಲ್ಲೂ ಎಥೆನಾಲ್ ಮಿಶ್ರಿತ ಅನಿಲಕ್ಕೆ ದಾರಿ ಮಾಡುತ್ತಿದೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ಇರಾನ್ - ಅಮೆರಿಕ ಯುದ್ಧ ಕಾರಣ ದೇಶಾದ್ಯಂತ ಅಡಿಗೆ ಅನಿಲ ಬಳಕೆಯ ಎಲ್‌ಪಿಜಿ ಇಂಧನದ ಬೆಲೆ ಜಾಸ್ತಿ ಆಗುತ್ತಿದೆ. ಇದರ ಬೆನ್ನಲ್ಲೇ ಎಲ್‌ಪಿಜಿ ಸಮಸ್ಯೆಗೆ ಕೇಂದ್ರ ಸರ್ಕಾರ ದೊಡ್ಡ ಪರಿಹಾರ ಕಂಡುಹಿಡಿದಿದ್ದು, ಶೀಘ್ರದಲ್ಲೇ ಅಡಿಗೆ ಅನಿಲದಲ್ಲೂ ಎಥೆನಾಲ್ ಮಿಶ್ರಿತ ಅನಿಲಕ್ಕೆ ದಾರಿ ಮಾಡುತ್ತಿದೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಹೌದು, ಪೆಟ್ರೋಲ್ ನಲ್ಲಿ ಎಥೆನಾಲ್ ಮಿಕ್ಸ್ ಮಡಿದ E20 ಪೆಟ್ರೋಲ್ ಈಗಾಗಲೇ ಮಾರುಕಟ್ಟೆಗೆ ಬಂದಿದ್ದು, ವಿರೋಧದ ಮಧ್ಯ ಕೂಡ ಯಶಸ್ವಿ ಆಗುತ್ತಾ ಸಾಗಿದೆ. ಇದರ ಬೆನ್ನಲೇ ಅದೇ ಮಾದರಿಯನ್ನ ಎಲ್‌ಪಿಜಿ ಅನಿಲದಲ್ಲೂ ಜಾರಿ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಇದರ ಸಂಪೂರ್ಣ ನೀತಿ ಚೌಕಟ್ಟನ್ನು ರೂಪಿಸುತ್ತಿದ್ದು, ಇದು ಸೆಪ್ಟೆಂಬರ್ 2026ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ.

ಎಲ್‌ಪಿಜಿಯಲ್ಲಿ ಎಥೆನಾಲ್ ಯಾಕೆ?

ಪ್ರಸ್ತುತ ಭಾರತವು ತನ್ನ ಅಗತ್ಯದ ಶೇ. 60 ಕ್ಕಿಂತ ಹೆಚ್ಚು ದಿನಬಳಕೆಯ ಎಲ್‌ಪಿಜಿಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ, ಎಥೆನಾಲ್ ಬಳಕೆಯಿಂದ ಈ ಆಮದು ಪ್ರಮಾಣ ಮತ್ತು ವೆಚ್ಚ ತಗ್ಗಲಿದೆ. ಅದ್ರಲ್ಲೂ, ಎಥೆನಾಲ್ ಆಧಾರಿತ ಅಡುಗೆ ಇಂಧನ ತಂತ್ರಜ್ಞಾನವು ಸಾಮಾನ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗಿಂತ ಗೃಹಬಳಕೆಯ ಅಡುಗೆ ವೆಚ್ಚವನ್ನು ಸುಮಾರು ಶೇ. 50 ರಷ್ಟು ಕಡಿಮೆ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಮುಂದುವರೆದು, ಪ್ರಸ್ತುತ ದೇಶದಲ್ಲಿ ವಾರ್ಷಿಕವಾಗಿ 20 ಬಿಲಿಯನ್ ಲೀಟರ್‌ಗಿಂತಲೂ ಹೆಚ್ಚು ಎಥೆನಾಲ್ ಉತ್ಪಾದನಾ ಸಾಮರ್ಥ್ಯವಿದೆ. ಹೀಗೆ, ಪೆಟ್ರೋಲ್ ಮಿಶ್ರಣ (E20) ಮತ್ತು ಇತರ ಕೈಗಾರಿಕೆಗಳ ಬಳಕೆಯ ನಂತರವೂ ಸುಮಾರು 7 ಬಿಲಿಯನ್ ಲೀಟರ್ ಎಥೆನಾಲ್ ಉಳಿಯುತ್ತಿದ್ದು, ಅದನ್ನು ಅಡುಗೆ ಇಂಧನವಾಗಿ ಬಳಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಶೀಘ್ರ ಎಥೆನಾಲ್ ಎಟಿಎಂ?

ಎಥೆನಾಲ್ ಎಲ್‌ಪಿಜಿಯನ್ನು ಪ್ರಸ್ತುತ ಇರುವ ಸಾಮಾನ್ಯ ಎಲ್‌ಪಿಜಿ ಸ್ಟೌವ್‌ಗಳಲ್ಲಿ ಬಳಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಎಥೆನಾಲ್ ಮತ್ತು ನೀರಿನ ಮಿಶ್ರಣವನ್ನು ಬಳಸಿ ಉರಿಯುವ ವಿಶೇಷ ಒಲೆಗಳನ್ನು ಬಳಸಬೇಕಾಗುತ್ತದೆ. ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇಂತಹ ಸ್ವದೇಶಿ ತಂತ್ರಜ್ಞಾನದ ಒಲೆಯನ್ನು ಅನಾವರಣಗೊಳಿಸಿದ್ದರು.

ಏತನ್ಮಧ್ಯೆ ಎಥೆನಾಲ್ ಮಿಶ್ರಿತ ಅಡುಗೆ ಅನಿಲಗಳ ಸಿಲಿಂಡರ್‌ಗಳು ವೇಗವಾಗಿ ಜನರಿಗೆ ತಲುಪುವಂತಾಗಲು ತೈಲ ಮಾರುಕಟ್ಟೆ ಕಂಪನಿಗಳು ಕ್ಯಾನ್ ಅಥವಾ ಕಂಟೈನರ್‌ಗಳಲ್ಲಿ ಎಥೆನಾಲ್ ಖರೀದಿಸಲು ಅನುವಾಗುವಂತೆ ಪೆಟ್ರೋಲ್ ಬಂಕ್‌ಗಳಲ್ಲಿ ವಿಶೇಷ ಎಥೆನಾಲ್ ಎಟಿಎಂ ಅಥವಾ ಡಿಸ್ಪೆನ್ಸಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಚಿಂತನೆ ನಡೆಸುತ್ತಿವೆ ಎಂದು ವರದಿಯಾಗಿದೆ.

ಎಥೆನಾಲ್ ಅಡುಗೆ ಅನಿಲಕ್ಕೆ ಸಬ್ಸಿಡಿ?

ಜನರಲ್ಲಿ ಎಥೆನಾಲ್ ಅಡುಗೆ ಅನಿಲ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ, ಪ್ರಾರಂಭದಲ್ಲಿ ಗ್ರಾಹಕರಿಗೆ ಒನ್ ಟೈಮ್ ಸಬ್ಸಿಡಿ ಅಥವಾ ಇಂಧನದ ಮೇಲೆ ನಿರಂತರ ಸಬ್ಸಿಡಿ ನೀಡುವ ಬಗ್ಗೆ ನೀತಿಯಲ್ಲಿ ಚರ್ಚಿಸುತ್ತಿದೆ ಎನ್ನಲಾಗಿದೆ. ಏತನ್ಮಧ್ಯೆ ಈ ಮಾದರಿಯ ಅಡುಗೆ ಅನಿಲವನ್ನ ಪ್ರಾರಂಭದಲ್ಲಿ ವಾಣಿಜ್ಯ ಬಳಕೆಗೆ ಅಂದ್ರೆ ಹೋಟೆಲ್, ರೆಸ್ಟೋರೆಂಟ್‌ಗಳು, ಕಮ್ಯುನಿಟಿ ಕಿಚನ್‌ಗಳು ಹಾಗೂ ಸರ್ಕಾರಿ ಕ್ಯಾಂಟೀನ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಯೋಜಿಸಲಾಗಿದೆ. ಇದು ಯಶಸ್ವಿಯಾದ ನಂತರ ಗೃಹಬಳಕೆಗೆ ವಿಸ್ತರಿಸಲಾಗುತ್ತದೆ.

ಮುಂದುವರೆದು, ಎಥೆನಾಲ್ ಮಿಶ್ರಿತ ಅಡುಗೆ ಅನಿಲ ಬಂದ ಕಾರಣ ಎಲ್‌ಪಿಜಿ ಅಡುಗೆ ಅನಿಲವನ್ನು ನಿಲ್ಲಿಸುವುದಿಲ್ಲ. ಆದ್ರೆ, ಭವಿಷ್ಯದಲ್ಲಿ ಎಥೆನಾಲ್ ಮಿಶ್ರಿತ ಅಡುಗೆ ಅನಿಲ ಯಶಸ್ವಿ ಆದ್ರೆ, ಎಲ್‌ಪಿಜಿ ಅಡುಗೆ ಅನಿಲ ಬಳಕೆ ಕಡಿಮೆ ಮಾಡಬಹುದು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ; ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು

ಸಾಕು ಮಾಡಿ: ಸೇವಾಶ್ರಯ ಪ್ರಕರಣದಲ್ಲಿ ಕೊನೆಗೂ ಅಭಿಷೇಕ್ ಬ್ಯಾನರ್ಜಿಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್, ಬಂಧನಕ್ಕೆ ತಡೆ!

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಶೇ. 7.5 ರಷ್ಟು ಮೀಸಲಾತಿ – ಕರಡು ನಿಯಮ ಪ್ರಕಟ

ಸ್ವಚ್ಛ ವಾಯು ಸರ್ವೇಕ್ಷಣ 2026: ಬೆಂಗಳೂರು, ಶ್ರೀನಗರ ಹಿಂದಿಕ್ಕಿದ ದೆಹಲಿ; ಅತ್ಯಂತ ಸ್ವಚ್ಛ ಗಾಳಿ ಯಾವ ನಗರದಲ್ಲಿದೆ ಗೊತ್ತಾ?

ಸತ್ಯ ನಿಕೇತನ ಪಿಜಿ ಕುಸಿತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶ; ದುರಂತಕ್ಕೆ ಮಾಲೀಕನಷ್ಟೇ ಅಲ್ಲ MCD, DU ಸಹ ಹೊಣೆ!