ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ದರ ಕಡಿತ 
ವಾಣಿಜ್ಯ

ಇರಾನ್-ಇಸ್ರೇಲ್-ಅಮೆರಿಕ ಯುದ್ಧ ನಡುವೆಯೇ ಗ್ಯಾಸ್ ಸಿಲಿಂಡರ್ ದರ ಇಳಿಕೆ!

ದೆಹಲಿ, ಕೋಲ್ಕತ್ತಾ, ಮುಂಬೈ, ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ದರಗಳು ಕಡಿಮೆಯಾಗಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.

ನವದೆಹಲಿ: ಇರಾನ್-ಇಸ್ರೇಲ್-ಅಮೆರಿಕ ಯುದ್ಧ ನಡುವೆಯೇ ಭಾರತದಲ್ಲಿ ಅಚ್ಚರಿ ಬೆಳವಣಿಗೆಯಲ್ಲಿ ಗ್ಯಾಸ್ ಸಿಲಿಂಡರ್ ದರ ಇಳಿಕೆ ಕಂಡುಬಂದಿದೆ.

ತೈಲ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿದ್ದು, ದೆಹಲಿ, ಕೋಲ್ಕತ್ತಾ, ಮುಂಬೈ, ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ದರಗಳು ಕಡಿಮೆಯಾಗಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.

ಇಂದು ವಾಣಿಜ್ಯ ಬಳಕೆಯ 19 ಕೆಜಿಯ ಸಿಲಿಂಡರ್ ಬೆಲೆಯಲ್ಲಿ 28 ರಿಂದ 31 ರೂ.ಗಳಷ್ಟು ಕಡಿಮೆಯಾಗಿದ್ದು, ಈ ಬೆಲೆಗಳು ನಗರದಿಂದ ನಗರಕ್ಕೆ ವ್ಯತ್ಯಾಸವಾಗಿರುತ್ತದೆ. ಗೃಹ ಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 28 ರೂ.ಗಳಷ್ಟು ಕಡಿಮೆಯಾಗಿದೆ. ಫೆಬ್ರವರಿಯಲ್ಲಿ 1768.5 ರೂ.ಗಳಷ್ಟಿದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆ ಈ ತಿಂಗಳು 1740.5 ರೂ.ಗಳಿಗೆ ಇಳಿಕೆಯಾಗಿದೆ.

ಅಂತೆಯೇ ಕೋಲ್ಕತ್ತಾದಲ್ಲಿ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 31 ರೂ.ಗಳಷ್ಟು ಇಳಿಕೆಯಾಗಿದೆ. 1875.5 ರೂ.ಗಳಿಗೆ ಸಿಗುತ್ತಿದ್ದ ಎಲ್‌ಪಿಜಿ ಸಿಲಿಂಡರ್ 1844.5 ರೂ.ಗೆ ಲಭ್ಯವಾಗಲಿದೆ. ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ 28.5 ಮತ್ತು 29.5 ರೂ.ಗಳಷ್ಟು ಕುಸಿತವಾಗಿದೆ.

ಬೆಂಗಳೂರಿನಲ್ಲೂ ಎಲ್‌ಪಿಜಿ ಸಿಲಿಂಡರ್ ಬೆಲೆ ಕಡಿಮೆಯಾಗಿದ್ದು, ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆ 855 ರೂಪಾಯಿಗಳಷ್ಟಿದ್ದರೆ, ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ: 1841 ರೂಪಾಯಿಗೆ ಕುಸಿದಿದೆ.

ಎಲ್‌ಪಿಜಿ ಬೆಲೆಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್‌ನಂತಹ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ನಿರ್ಧರಿಸುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ; ಆದರೆ ಡೀಲಿಮಿಟೇಷನ್ ಗೆ ಪ್ರತಿಪಕ್ಷಗಳ ವಿರೋಧ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

EVM ಬದಲು ಬ್ಯಾಲೆಟ್ ಪೇಪರ್ ಬಳಕೆ ಮಸೂದೆಗೆ ಕೊನೆಗೂ ರಾಜ್ಯಪಾಲರ ಅಂಕಿತ!

ಪಾಕಿಸ್ತಾನಕ್ಕೆ ಶಾಕ್! ಕೇಂದ್ರದ ಡೀಲಿಮಿಟೇಷನ್ ಮಸೂದೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಕ್ಷೇತ್ರಗಳ ಮರುಹಂಚಿಕೆಗೆ ಕ್ರಮ!

'ಚೀನಾ, ಇಡೀ ಜಗತ್ತಿಗೆ' ಹಾರ್ಮುಜ್ ಅನ್ನು 'ಶಾಶ್ವತವಾಗಿ' ತೆರೆಯುತ್ತೇವೆ; ಜಿನ್ ಪಿಂಗ್ ನನಗೆ ದೊಡ್ಡ ಅಪ್ಪುಗೆ ನೀಡುತ್ತಾರೆ: ಟ್ರಂಪ್

BJP ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣ: Congress ಶಾಸಕ ವಿನಯ್ ಕುಲಕರ್ಣಿ ಅಪರಾಧಿ; ಕೋರ್ಟ್ ತೀರ್ಪು!

SCROLL FOR NEXT